ಕಳೆದ ಒಂದೂವರೆ ವರ್ಷದ ಹಿಂದೆ ಮಡಹಳ್ಳಿ ಗುಡ್ಡ ಕುಸಿತ ಉಂಟಾಗಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ರು.ನಂತರ ಅಲರ್ಟ್ ಆದ ಜಿಲ್ಲಾಡಳಿತ ಆ ಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ನಿರ್ಬಂಧ ವಿಧಿಸಿತ್ತು.
- ಪುಟ್ಟರಾಜು, ಏಷ್ಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಸೆ.07): ಕಳೆದ ಒಂದೂವರೆ ವರ್ಷದ ಹಿಂದೆ ಮಡಹಳ್ಳಿ ಗುಡ್ಡ ಕುಸಿತ ಉಂಟಾಗಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ರು.ನಂತರ ಅಲರ್ಟ್ ಆದ ಜಿಲ್ಲಾಡಳಿತ ಆ ಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ನಿರ್ಬಂಧ ವಿಧಿಸಿತ್ತು. ಇದೀಗಾ ಗಣಿಗಾರಿಕೆ ಆರಂಭಿಸುವ ಹುನ್ನಾರದಿಂದ ಗಣಿ ಮಾಲೀಕರು ಲಾಭಿ ನಡೆಸ್ತಿದ್ದು, ಸೈಲೆಂಟ್ ಆಗಿ ಗಣಿಗಾರಿಕೆ ರೀ ಓಪನ್ ಮಾಡಲೂ ಸಿದ್ದತೆ ಮಾಡ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಹೌದು ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಗುಮ್ಮಕಲ್ಲು ಗುಡ್ಡದಲ್ಲಿ ಕಳೆದ ವರ್ಷದ ಮಾರ್ಚ್ 4 ರಂದು ಘೋರ ದುರಂತ ಸಂಭವಿಸಿ ಮೂವರು ಕಾರ್ಮಿಕರು ಸಾವನ್ನಪ್ಪಿದರು. ನೋಡ ನೋಡುತ್ತಿದ್ದಂತೆ ಮಡಹಳ್ಳಿ ಗುಡ್ಡದಲ್ಲಿ ಮಹೇಂದ್ರಪ್ಪ ಎಂಬುವವರಿಗೆ ಸೇರಿದ ಗುಡ್ಡ ಕುಸಿದಿತ್ತು. ಗಣಿಗಾರಿಗೆ ತಳಭಾಗದಲ್ಲಿ ಕೆಲಸ ಮಾಡ್ತಿದ್ದ ಮೂವರು ಕಾರ್ಮಿಕರ ಪ್ರಾಣಪಕ್ಷಿ ಹಾರಿ ಹೋಗಿತ್ತು.ಈ ಘಟನೆಯಿಂದ ಎಚ್ಚೆತ್ತ ಜಿಲ್ಲಾಡಳಿತ ಇಡೀ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಕೊಡುವ ಸಲುವಾಗಿ ನಯಾ ರೂಲ್ಸ್ ಜಾರಿಗೊಳಿಸಿತ್ತು.
undefined
ಕಸ್ತೂರಿ ರಂಗನ್ ವರದಿ 2013 ರದ್ದು, ಈಗ ಪರಿಸ್ಥಿತಿ ಬದಲಾಗಿದೆ: ಸಚಿವ ಈಶ್ವರ ಖಂಡ್ರೆ
ಮಡಹಳ್ಳಿ ಗುಡ್ಡದ 6 ಕಡೆ ನಡೆಯುತ್ತಿದ್ದ ಗಣಿ ಮಾಲೀಕರ ಲೈಸೆನ್ಸ್ ರದ್ದು ಮಾಡಿ ಇಡೀ ಮಡಹಳ್ಳಿ ಗುಡ್ಡದಲ್ಲಿ ಯಾರೂ ಕೂಡ ಗಣಿಗಾರಿಕೆ ನಡೆಸದಂತೆ ನಿರ್ಬಂಧ ವಿಧಿಸಿತ್ತು. ನಂತರ ಸುರತ್ಕಲ್ ನಿಂದ ಗಣಿ ವಿಜ್ಞಾನಕ್ಕೆ ಸಂಬಂಧಿಸಿದ ಒಂದು ತಂಡ ಕೂಡ ಭೇಟಿಯಿತ್ತು, ಗಣಿಗಾರಿಕೆ ನಡೆಸಲು ಅವಕಾಶ ಕೊಡಬಹುದೆಂದು ತಿಳಿಸಿತ್ತು. ಆದ್ರೂ ಕೂಡ ಮುನ್ನೆಚ್ಚರಿಕೆ ದೃಷ್ಟಿಯಿಂದ ಗಣಿಗಾರಿಕೆ ನಡೆಸಲು ನಿರ್ಬಂಧ ಮುಂದುವರಿದಿದೆ. ಆದ್ರೆ ಸೈಲೆಂಟಾಗಿ ಗಣಿ ಆರಂಭಿಸಲು ಮತ್ತೇ ಹುನ್ನಾರ ಆರಂಭವಾಗಿದೆ. ಮತ್ತೇ ಗಣಿಗಾರಿಕೆ ನಡೆಸಲು ಅವಕಾಶ ಕೊಡುವಂತೆ ಗಣಿ ಮಾಲೀಕರು ಮತ್ತೇ ಆ್ಯಕ್ಟೀವ್ ಆಗಿದ್ದಾರೆಂಬ ಆರೋಪ ಕೇಳಿಬಂದಿದೆ.
ಈ ನಡುವೆ ಈಗಾಗಲೆ ಬಿಳಿಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಎರಡು ಬಾರಿ ಮೇಲಿಂದ ಗುಡ್ಡ ಕುಸಿದಿದ್ದು ಗಣಿಗಾರಿಕೆ ನಡೆಸುವ ಜಾಗ ತುಂಬಾ ಆಳವಾದ ಸ್ಥಳದಲ್ಲಿ ನಡೆಯುತ್ತಿರುವುದರಿಂದ ಯಾವ ಸಮಯದಲ್ಲಾದರು ಮತ್ತೆ ಗುಡ್ಡ ಕುಸಿಯುವ ಆತಂಕವಿರುವುದರಿಂದ ಯಾವುದೇ ಕಾರಣಕ್ಕೂ ಗಣಿಗಾರಿಕೆ ನಡೆಸಲು ಅವಕಾಶ ಕೊಡಬಾರದೆಂದು ಸ್ಥಳೀಯ ಮಡಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇನ್ನೂ ಮಡಹಳ್ಳಿ ಗಣಿ ದುರಂತ ನಡೆದ ನಂತರವೂ ಗುಡ್ಡದಲ್ಲಿ ಮತ್ತೇ ಕುಸಿತವಾಗಿದೆ. ಇದೀಗಾ ಗಣಿಗಾರಿಕೆ ನಡೆಸಲು ಕೆಲವರು ಅವಕಾಶ ಕೋರಿರುವುದರಿಂದ ಚಾಮರಾಜನಗರ ಡಿಸಿ ಶಿಲ್ಪಾನಾಗ್ ಮಡಹಳ್ಳಿ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.ಡೈರೆಕ್ಟರ್ ಜನರಲ್ ಮೈನ್ಸ್ ಸೇಪ್ಟಿ ಅವರು ಕೂಡ ಭೇಟಿ ಕೊಡ್ತಾರೆ.ಅವರಿಂದ ಒಪ್ಪಿಗೆ ಪಡೆದ ನಂತರವಷ್ಟೇ ಗಣಿಗಾರಿಕೆ ನಡೆಸಲು ಅನುಮತಿ ಸಿಗುತ್ತೆ.ಅವರು ಗಣಿಗಾರಿಕೆ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸ್ತಾರೆ.ಯಾವುದೇ ಲಾಭಿಗೂ ಬಗ್ಗುವ ಪ್ರಶ್ನೆಯಿಲ್ಲ ಅಂತಾರೆ.
ಕಾಂಗ್ರೆಸ್ ಕಾಲ್ಗುಣದಿಂದಲೇ ರಾಜ್ಯಕ್ಕೆ ಬರಗಾಲ: ಸಿ.ಟಿ.ರವಿ ಆಕ್ರೋಶ
ಒಟ್ನಲ್ಲಿ ಗಣಿ ದುರಂತ ನಡೆದ ಮಡಹಳ್ಳಿ ಗುಡ್ಡದಲ್ಲಿ ಗಣಿಗಾರಿಕೆ ಮತ್ತೇ ಆರಂಭಿಸಲು ಒಂದೆಡೆ ಲಾಭಿ ನಡೆಯುತ್ತಿದ್ರೆ,ಮತ್ತೊಂದೆಡೆ ಅವಕಾಶ ಮಾಡಿಕೊಟ್ರೆ ಜಿಲ್ಲಾಡಳಿತ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ಕೊಟ್ಟಿದ್ದಾರೆ.ಗ್ರಾಮಸ್ಥರ ಎಚ್ಚರಿಕೆ ನಡುವೆ ಗಣಿಗಾರಿಕೆ ಲಾಭಿಗೆ ಮಣಿದು ಅವಕಾಶ ಸಿಗುತ್ತಾ ಅಥವಾ ಗಣಿಗಾರಿಕೆ ನಿಷೇಧ ಮುಂದುವರಿಯಿತ್ತಾ ಅನ್ನೋದ್ನ ಕಾದುನೋಡಬೇಕಾಗಿದೆ.