ಮೇಡ್‌ ಇನ್‌ ಇಂಡಿಯಾ ವಿಮಾನ ಶೀಘ್ರ, ಹವಾಯಿ ಚಪ್ಪಲಿ ಹಾಕಿದವರೂ ಈಗ ವಿಮಾನದಲ್ಲಿ ಓಡಾಟ, ಮೋದಿ

By Kannadaprabha News  |  First Published Feb 28, 2023, 6:48 AM IST

ಏರ್‌​ ಇಂಡಿಯಾವು ನೂರಾರು ವಿಮಾ​ನ​ಗ​ಳಿ​ಗಾಗಿ ವಿದೇಶಿ ಕಂಪ​ನಿ​ಗ​ಳೊಂದಿಗೆ ಮಾಡಿ​ಕೊಂಡಿ​ರುವ ಒಪ್ಪಂದದ ವಿಚಾ​ರ​ವನ್ನು ಪರೋ​ಕ್ಷ​ವಾಗಿ ಪ್ರಸ್ತಾ​ಪಿ​ಸಿ​ದರು. ಜತೆಗೆ, ಸದ್ಯ​ದಲ್ಲೇ ದೇಶೀ ನಿರ್ಮಿತ ಪ್ರಯಾ​ಣಿ​ಕರ ವಿಮಾನಗಳು ಹಾರಾಟ ನಡೆ​ಸುವ ದಿನವೂ ದೂರ​ವಿಲ್ಲ ಎಂಬ ಸುಳಿವು ನೀಡಿ​ದ​ ಪ್ರಧಾನಿ ನರೇಂದ್ರ ಮೋದಿ.


ಶಿವಮೊಗ್ಗ(ಫೆ.28): ಮುಂದಿನ ದಿನ​ಗಳಲ್ಲಿ ದೇಶಕ್ಕೆ ಸಾವಿ​ರಾರು ವಿಮಾ​ನ​ಗಳ ಅವ​ಶ್ಯ​ಕತೆ ಬೀಳ​ಲಿ​ದೆ. ಸದ್ಯ ನಾವು ಪ್ರಯಾ​ಣಿ​ಕರ ವಿಮಾ​ನ​ಗ​ಳಿ​ಗಾಗಿ ವಿದೇ​ಶ​ಗಳನ್ನು ಅವ​ಲಂಬಿ​ಸಿ​ದ್ದೇ​ವೆ. ಆದರೆ ಭಾರ​ತೀ​ಯರು ‘ಮೇಡ್‌ ಇನ್‌ ಇಂಡಿಯಾ’ ಪ್ರಯಾ​ಣಿ​ಕರ ವಿಮಾ​ನ​ದ​ಲ್ಲಿ ಪ್ರಯಾ​ಣಿ​ಸುವ ದಿನವೂ ಶೀಘ್ರ ಬರ​ಲಿ​ದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತ​ಪ​ಡಿ​ಸಿ​ದ​ರು.

ಸೋಗಾನೆಯಲ್ಲಿ ಶಿವ​ಮೊಗ್ಗ ವಿಮಾನ ನಿಲ್ದಾಣ ಸೇರಿ ಸುಮಾರು .7,165 ಕೋಟಿ ಮೌಲ್ಯದ ಹಲವು ಯೋಜನೆಗಳ ಉದ್ಘಾಟನೆ ಮತ್ತು ಕೆಲವು ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತ​ನಾ​ಡಿದ ಅವರು, ಏರ್‌​ ಇಂಡಿಯಾವು ನೂರಾರು ವಿಮಾ​ನ​ಗ​ಳಿ​ಗಾಗಿ ವಿದೇಶಿ ಕಂಪ​ನಿ​ಗ​ಳೊಂದಿಗೆ ಮಾಡಿ​ಕೊಂಡಿ​ರುವ ಒಪ್ಪಂದದ ವಿಚಾ​ರ​ವನ್ನು ಪರೋ​ಕ್ಷ​ವಾಗಿ ಪ್ರಸ್ತಾ​ಪಿ​ಸಿ​ದರು. ಜತೆಗೆ, ಸದ್ಯ​ದಲ್ಲೇ ದೇಶೀ ನಿರ್ಮಿತ ಪ್ರಯಾ​ಣಿ​ಕರ ವಿಮಾನಗಳು ಹಾರಾಟ ನಡೆ​ಸುವ ದಿನವೂ ದೂರ​ವಿಲ್ಲ ಎಂಬ ಸುಳಿವು ನೀಡಿ​ದ​ರು.

Tap to resize

Latest Videos

ಶಿವಮೊಗ್ಗ: ಯಡಿಯೂರಪ್ಪಗೆ ಮೋದಿ ಭಾವುಕ ಗೌರವ

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಾಗ​ರಿಕ ವಿಮಾನ ಸೇವೆಗೆ ಹೆಚ್ಚಿನ ಆದ್ಯತೆ ಸಿಗು​ತ್ತಿ​ದೆ. ಹವಾಯಿ ಚಪ್ಪಲಿ ಹಾಕಿಕೊಂಡವರೂ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬುದು ನಮ್ಮ ಗುರಿ. ಅದು ಸಾಧ್ಯ​ವಾ​ಗು​ತ್ತಿ​ರು​ವು​ದನ್ನು ನಾನೀಗ ನೋಡು​ತ್ತಿ​ದ್ದೇನೆ. ದೇಶ​ಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ 2014 ರವರೆಗೆ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೇವಲ 9 ವರ್ಷದಲ್ಲಿ ಇಷ್ಟೇ ಪ್ರಮಾಣದ ವಿಮಾನ ನಿಲ್ದಾಣಗಳನ್ನು ಹೊಸ​ದಾಗಿ ನಿರ್ಮಿಸಿದ್ದೇವೆ ಎಂದು ತಮ್ಮ ಸರ್ಕಾ​ರದ ಸಾಧನೆ ಬಣ್ಣಿ​ಸಿ​ದ​ರು.

ನಷ್ಟ​ದ ಹೊರೆ​ಯಿಂದಾಗಿ ಇತ್ತೀ​ಚೆಗೆ ಖಾಸ​ಗಿ​ಯ​ವ​ರಿಗೆ ಮಾರಾ​ಟ​ವಾ​ಗಿ​ರುವ ದೇಶದ ಪ್ರತಿ​ಷ್ಠಿತ ಏರ್‌​ಇಂಡಿಯಾ ವಿಮಾ​ನದ ವಿಚಾ​ರ​ವನ್ನೂ ಭಾಷ​ಣ​ದಲ್ಲಿ ಪ್ರಸ್ತಾ​ಪಿ​ಸಿದ ಅವರು, ಈ ಸರ್ಕಾರಿ ಏರ್‌​ಲೈ​ನ್ಸ್‌ನ ವೈಫ​ಲ್ಯಕ್ಕೆ ಕಾಂಗ್ರೆಸ್ಸೇ ಕಾರಣ ಎಂದು ಆರೋ​ಪಿ​ಸಿ​ದ​ರು. 2014ಕ್ಕಿಂತ ಮೊದಲು ಕಾಂಗ್ರೆಸ್‌ ಸರ್ಕಾ​ರದ ಅವ​ಧಿ​ಯಲ್ಲಿ ಏರ್‌ ಇಂಡಿಯಾವು ಋುಣಾ​ತ್ಮಕ ವಿಚಾ​ರ​ಗ​ಳಿ​ಗಾ​ಗಿ, ಹಗ​ರ​ಣ​ಗಳು ಮತ್ತು ನಷ್ಟ​ಗಳಿಂದಾ​ಗಿಯೇ ಸುದ್ದಿ​ಯ​ಲ್ಲಿ​ತ್ತು. ಆದರೆ ಇದೀಗ ಏರ್‌ ಇಂಡಿ​ಯಾವು ಬದ​ಲಾ​ಗಿದೆ, ವಿಶ್ವದ ಮುಂದೆ ಭಾರ​ತದ ಹೊಸ ಸಾಮ​ರ್ಥ್ಯ​ವನ್ನು ಪ್ರದ​ರ್ಶಿ​ಸು​ತ್ತಿ​ದೆ ಎಂದ​ರು.

ಮಲೆನಾಡು ಹಾಡಿ ಹೊಗಳಿದ ಮೋದಿ: ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯ ಅಭಿವೃದ್ಧಿ ಪಥದಲ್ಲಿದೆ ಎಂದ ಪ್ರಧಾನಿ

ಶಿವ​ಮೊಗ್ಗ ಭಾಗದ ಜನರ ಬಹಳ ವರ್ಷಗಳ ಬೇಡಿಕೆಯಾದ ವಿಮಾನ ನಿಲ್ದಾಣ ಲೋಕಾರ್ಪಣೆ ನನಗೆ ಸಂತೋಷ ತಂದಿದೆ. ಅತ್ಯಂತ ಸುಸಜ್ಜಿತವಾದ ಮತ್ತು ಸುಂದರವಾದ ವಿಮಾನ ನಿಲ್ದಾಣ ಇದಾಗಿದ್ದು, ಇದರಿಂದ ಮಲೆನಾಡು ಹಾಗೂ ದೇಶದ ಇತರೆಡೆ ಸಂಪರ್ಕ ಸಾಧ್ಯವಿದೆ. ಕೈಗಾರಿಕೆ, ಕೃಷಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಲಾಭವಾಗಲಿದೆ. ಈ ವಿಮಾನ ನಿಲ್ದಾಣದಿಂದ ದೇಶ-ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮಲೆನಾಡಿನ ಹೆಬ್ಬಾಗಿಲು ತೆರೆದಿದ್ದು, ಇದರಿಂದ ಇತರೆ ಕ್ಷೇತ್ರಗಳ ಅಭಿವೃದ್ಧಿಯೂ ಸಾಧ್ಯವಾಗ​ಲಿದೆ ಎಂದ​ ಅವರು, ಮುಂದಿನ ದಿನಗಳಲ್ಲಿ ಈ ವಿಮಾನ ನಿಲ್ದಾಣ ಇನ್ನಷ್ಟುಬೆಳೆಯಲಿದ್ದು, ನೂರಾರು ವಿಮಾನಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದ​ರು.

9 ವರ್ಷದಲ್ಲಿ 74 ಏರ್‌ಪೋರ್ಟ್‌ ರೆಡಿ

ದೇಶ​ಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ 2014ರವರೆಗೆ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೇವಲ 9 ವರ್ಷದಲ್ಲಿ ಅಷ್ಟೇ ಪ್ರಮಾಣದ ವಿಮಾನ ನಿಲ್ದಾಣಗಳನ್ನು ಹೊಸ​ದಾಗಿ ನಿರ್ಮಿಸಿದ್ದೇವೆ ಎಂದ ಪ್ರಧಾನಿ ನರೇಂದ್ರ ಮೋದಿ. 

click me!