ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಎದ್ದಿದೆ. ಹಿಂದೆ ಆಡಳಿತ ನೀಡಿದ ಕಾಂಗ್ರೆಸ್ ಯೋಜನೆಗಳು ಹಿತಕಾರಿ ಆಗಿರುವ ಹಿನ್ನೆಲೆಯಲ್ಲಿ ಬಡಜನರ ಮನೆಯಲ್ಲಿ ದೇವರ ಭಾವಚಿತ್ರದೊಂದಿಗೆ ಸಿದ್ದರಾಮಯ್ಯ ಭಾವಚಿತ್ರ ಪೂಜಿಸುತ್ತಿದ್ದಾರೆ. ಶಾಸಕ ಆನಂದ ನ್ಯಾಮಗೌಡ ಅವರು 1 ಲಕ್ಷ ಮತಗಳ ಅಂತರದಿಂದ ಜಮಖಂಡಿ ಕ್ಷೇತ್ರದಲ್ಲಿ ಗೆಲವು ಸಾಧಿಸಲಿದ್ದಾರೆಂದು ಮಾಜಿ ಸಚಿವ ಜಮೀರ ಅಹಮ್ಮದಖಾನ ಹೇಳಿದರು.
ಜಮಖಂಡಿ : ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಎದ್ದಿದೆ. ಹಿಂದೆ ಆಡಳಿತ ನೀಡಿದ ಕಾಂಗ್ರೆಸ್ ಯೋಜನೆಗಳು ಹಿತಕಾರಿ ಆಗಿರುವ ಹಿನ್ನೆಲೆಯಲ್ಲಿ ಬಡಜನರ ಮನೆಯಲ್ಲಿ ದೇವರ ಭಾವಚಿತ್ರದೊಂದಿಗೆ ಸಿದ್ದರಾಮಯ್ಯ ಭಾವಚಿತ್ರ ಪೂಜಿಸುತ್ತಿದ್ದಾರೆ. ಶಾಸಕ ಆನಂದ ನ್ಯಾಮಗೌಡ ಅವರು 1 ಲಕ್ಷ ಮತಗಳ ಅಂತರದಿಂದ ಜಮಖಂಡಿ ಕ್ಷೇತ್ರದಲ್ಲಿ ಗೆಲವು ಸಾಧಿಸಲಿದ್ದಾರೆಂದು ಮಾಜಿ ಸಚಿವ ಜಮೀರ ಅಹಮ್ಮದಖಾನ ಹೇಳಿದರು.
ತಾಲೂಕಿನ ಕಡಪಟ್ಟಿಗ್ರಾಮದ ಬಸವೇಶ್ವರ ದೇವಸ್ಥಾನ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮ ಮತ್ತು ಶಾಸಕ ಆನಂದ ನ್ಯಾಮಗೌಡ ಅವರ ಕೈಗೆ ಕೈಜೋಡಿಸಿ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ವಿರೋಧ ಪಕ್ಷ ಆಡಳಿತದಲ್ಲಿದರೂ, ನಮ್ಮ ಮತಕ್ಷೇತ್ರದ ಅಭಿವೃದ್ಧಿಗೆ .1600 ಕೋಟಿ ಅನುದಾನ ತರುವ ಮೂಲಕ ಜಮಖಂಡಿ ವಿಧಾನಸಭಾ ಕ್ಷೇತ್ರದ ಅಭಿವೃದ್ದಿ ಮಾಡಿದ್ದೇನೆ. ಉಪಚುಣಾವಣೆ ಗೆಲವಿನ ನಂತರ ಪ್ರವಾಹದಲ್ಲಿ 22 ಗ್ರಾಮಗಳು ಮುಳುಗಿದಾಗ ರಕ್ಷಣೆಗೆ ಮಾಡಲಾಗಿದೆ. ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಜನರಲ್ಲಿ ಮುಂಜಾಗ್ರತೆ ಕ್ರಮದ ಸಹಿತ ಪ್ರಾಣದಹಂಗು ತೊರೆದು ಜನರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇವೆ. ನಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಕಬ್ಬಿಗೆ ಬೆಂಬಲ ಬೆಲೆ ನೀಡಿದೆ ಎಂದರು.
ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಪ್ರಜಾಧ್ವನಿ ಕಾಯಕ್ರಮದ ಉದ್ದೇಶ ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವುದು. ನಮ್ಮ ಸರ್ಕಾರ ಅವಧಿದಲ್ಲಿ ಕೃಷಿಹೊಂಡ, ಕೆರೆತುಂಬುವ ಯೋಜನೆ, ವಿದ್ಯಾರ್ಥಿಗಳಿ ಗೆ ಸೌಲಭ್ಯ, ಹಾಸ್ಟೆಲ್ ನಿರ್ಮಾಣ, ಮೊರಾರ್ಜಿ ದೇಸಾಯಿ ಶಾಲೆಗಳನ್ನು ಆರಂಭಿಸಲಾಗಿದೆ. ಬಿಜೆಪಿ ಸರ್ಕಾರ ಯಾವುದೇ ಒಂದು ಶಾಲೆ ನಿರ್ಮಾಣ ಮಾಡಿಲ್ಲ. ಈಗಿನ ಸರ್ಕಾರಕ್ಕೆ ಅಭಿವೃದ್ಧಿ ಕೆಲಸಗಳು ಬೇಕಿಲ್ಲ.ಬಿಜೆಪಿ ದೊಡ್ಡ ದೊಡ್ಡ ಘೋಷಣೆ ಮಾಡತ್ತಾರೆ, ಮೋದಿ ಭಾಷಣಕ್ಕೆ ಮೋಸ ಹೋಗಿದ್ದೇವೆ ಎಂದರು.
ಶಾಸಕ ಎಂ.ಬಿ.ಪಾಟೀಲ ಮಾತನಾಡಿ, ಸ್ವಾತಂತ್ರ್ಯ ಕೊಟ್ಟಿದ್ದು, ಸುಭದ್ರ ದೇಶ ಕಟ್ಟುವ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ದೇಶದಲ್ಲಿ 1950 ಡ್ಯಾಂಗಳÜನ್ನು ಕಾಂಗ್ರೆಸ್ ಸರ್ಕಾರ ನಿರ್ಮಿಸಿದೆ. ಪ್ರಾಥಮಿಕ ಶಾಲೆ,ಪ್ರಾಥಮಿಕ ಆರೋಗ್ಯ, ವಿದ್ಯಾರ್ಥಿಗಳಿಗೆ ಕಾಲೇಜು ನಿರ್ಮಿಸಿದೆ. ರಸ್ತೆ ನಿರ್ಮಾಣ,ವಿದ್ಯುತ್ ಸಹಿತ ಮೂಲಭೂತ ಸೌಕರ್ಯಗಳನ್ನು ಕಾಂಗ್ರೆಸ್ ನೀಡಿದೆ. ಆದರೆ ಬಿಜೆಪಿ ಬದುಕು ಕಟ್ಟುವ ಕೆಲಸ ಮಾಡದೆ ಜನತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕಿ ಉಮಾಶ್ರೀ, ಹೆಚ್.ವೈ.ಮೇಟಿ, ಜೆ.ಟಿ.ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ವಿಪ ಮಾಜಿ ಸದಸ್ಯ ಎಸ್.ಆರ್.ಪಾಟೀಲ, ವೀಣಾ ಕಾಶಪ್ಪನ್ನವರ, ಸತೀಶ ಬಂಡಿವಡ್ಡರ, ಶ್ರೀಶೈಲ ದಳವಾಯಿ, ನಜೀರ ಕಂಗನೊಳ್ಳಿ ಅನೇಕರು ಇದ್ದರು.