ಉಪಚುನಾವಣೆ: ಬೀಗರ ಔತಣದ ನೆಪದಲ್ಲಿ 6 ಸಾವಿರ ಜನಕ್ಕೆ ಬಾಡೂಟ

By Kannadaprabha News  |  First Published Nov 23, 2019, 9:57 AM IST

ಹೆಚ್‌.ಡಿ.ಕೋಟೆ ತಾಲೂಕಿನ ಚಿಕ್ಕತಾಯಮ್ಮನ ಬೆಟ್ಟದಲ್ಲಿ ಹುಣಸೂರು ತಾಲೂಕಿನ 5-6 ಸಾವಿರ ಮಂದಿಗೆ ಬೀಗರ ಔತಣದ ನೆಪವೊಡ್ಡಿ ರಾಷ್ಟ್ರೀಯ ಪಕ್ಷದ ಮುಖಂಡರು ಮತದಾರರಿಗೆ ಬಾಡೂಟ ಬಡಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಸ್ತುತ ಚುನಾವಣಾ ಆಯೋಗ ಸಂಜೆವರೆಗೆ ಯಾವುದೇ ಪ್ರಕರಣ ದಾಖಲು ಮಾಡಿಲ್ಲ.


ಮೈಸೂರು(ನ.23): ಹೆಚ್‌.ಡಿ.ಕೋಟೆ ತಾಲೂಕಿನ ಚಿಕ್ಕತಾಯಮ್ಮನ ಬೆಟ್ಟದಲ್ಲಿ ಹುಣಸೂರು ತಾಲೂಕಿನ 5-6 ಸಾವಿರ ಮಂದಿಗೆ ಬೀಗರ ಔತಣದ ನೆಪವೊಡ್ಡಿ ರಾಷ್ಟ್ರೀಯ ಪಕ್ಷದ ಮುಖಂಡರು ಮತದಾರರಿಗೆ ಬಾಡೂಟ ಬಡಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಸ್ತುತ ಚುನಾವಣಾ ಆಯೋಗ ಸಂಜೆವರೆಗೆ ಯಾವುದೇ ಪ್ರಕರಣ ದಾಖಲು ಮಾಡಿಲ್ಲ.

ಶುಕ್ರವಾರ (ನ.22)ರಂದು ಘಟನೆ ನಡೆದಿದ್ದು, ಚಿಕ್ಕತಾಯಮ್ಮನ ಬೆಟ್ಟದಲ್ಲಿ 5-6 ಸಾವಿರ ಮಂದಿಗೆ ಬಾಡೂಟ ನಡೆದಿದೆ. 30 ಕ್ಕೂ ಹೆಚ್ಚು ಬಸ್‌ಗಳು, ಮಿನಿಬಸ್‌, ಮ್ಯಾಕ್ಸಿ ಕ್ಯಾಬ್‌ಗಳ ಮೂಲಕ ಜನರನ್ನು ಕರೆ ತರಲಾಗಿದೆ ಎನ್ನಲಾಗಿದೆ.

Tap to resize

Latest Videos

undefined

ಸಿದ್ದು ಗಡ್ಡ ಕೆರೆದುಕೊಂಡು ಒದ್ದಾಡ್ತಿದ್ದಾರೆ: ವಿ. ಸೋಮಣ್ಣ

ಘಟನೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಪೂತಾ ಜಯವಾಣಿಯೊಂದಿಗೆ ಮಾತನಾಡಿ, ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಲಾಗಿದೆ. ಆಯೋಜಕರು ಬೀಗರ ಔತಣವೆಂದು ತಿಳಿಸಿದ್ದಾರೆ. ಆದರೆ, ಸ್ಥಳದಲ್ಲಿ ವಧು-ವರನ ಕಡೆಯವರು ಯಾರೂ ಕಾಣಬರಲಿಲ್ಲ. ನ.2ರಂದು ಮದುವೆಯಾಗಿದೆ ಎಂದು ಲಗ್ನಪತ್ರಿಕೆ ಪ್ರದರ್ಶಿಸಿದ್ದಾರೆ. ಆದರೆ, ಅದರಲ್ಲಿ ಬೀಗರ ಔತಣದ ಪ್ರಸ್ತಾಪರಲಿಲ್ಲ. ಇದೆಲ್ಲವೂ ಅನುಮಾನಕ್ಕೆ ಎಡೆ ಮಾಡಿಕೊಡುತಿದೆ.

ಪುತ್ರನಿಗೆ ‘ಟಿಕೆಟ್‌’ ಕೊಡಿಸಲಾಗದೆ ‘ಕೈ’ಚೆಲ್ಲಿದ ಜಿಟಿಡಿಗೆ ‘ತ್ರಿಪಕ್ಷೀಯ’ ಬೇಡಿಕೆ!

ಅಲ್ಲದೇ, 30ಕ್ಕೂ ಹೆಚ್ಚು ವಾಹನಗಳಿಂದ ಜನರನ್ನು ಕರೆ ತರಲಾಗಿದ್ದು, ಎಲ್ಲರೂ ಹುಣಸೂರು ತಾಲೂಕಿನ ವಿವಿಧ ಗ್ರಾಮಗಳಿಂದ ಬಂದವರಾಗಿದ್ದಾರೆ. ಬಸ್‌ ಮಾಲೀಕರಲ್ಲಿ ಪ್ರಕರಣದ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ಸಂಪೂರ್ಣ ಪರಿಶೀಲನೆ ನಂತರ ಚುನಾವಣಾ ನೀತಿ ಸಂತೆ ಉಲ್ಲಂಘನೆಯೆಂದು ದೃಢಪಟ್ಟಲ್ಲಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

click me!