ಪಕ್ಷ ಬಿಟ್ಟವರೆಲ್ಲಾ, ಅನರ್ಹರಾದರೆ ನಾನು ಮತ್ತು ಸಿದ್ದರಾಮಯ್ಯ ಕೂಡ ಅನರ್ಹರೆ. ಮೊದಲು ನಾವು ಏನು ಅಂತಾ ತಿಳಿದುಕೊಳ್ಳಬೇಕು. ನಮ್ಮಪ್ಪನಾಣೆ ದೇವರಾಣೆ ಜನ ಸಿದ್ದರಾಮಯ್ಯ ಮಾತು ಕೇಳಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಸಿದ್ದು ಗಡ್ಡ ಕೆರೆದುಕೊಂಡ ಒದ್ದಾಡುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿದ ಶಾಸ್ತ್ರ ಯಾವುದು ನಿಜ ಆಗಿಲ್ಲ ಎಂದಿದ್ದಾರೆ.
ಮೈಸೂರು(ನ.23): ಪಕ್ಷ ಬಿಟ್ಟವರೆಲ್ಲಾ, ಅನರ್ಹರಾದರೆ ನಾನು ಮತ್ತು ಸಿದ್ದರಾಮಯ್ಯ ಕೂಡ ಅನರ್ಹರೆ. ಮೊದಲು ನಾವು ಏನು ಅಂತಾ ತಿಳಿದುಕೊಳ್ಳಬೇಕು. ನಮ್ಮಪ್ಪನಾಣೆ ದೇವರಾಣೆ ಜನ ಸಿದ್ದರಾಮಯ್ಯ ಮಾತು ಕೇಳಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಅನರ್ಹರ ಶಾಸಕರ ಮೇಲೆ ಜನರಿಗೆ ಆಕ್ರೋಶವಿಲ್ಲ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಮೇಲೆ ಕೋಪವಿದೆ. ಈ ಉಪ ಚುನಾವಣೆಯಲ್ಲಿ ಮತದಾರರು ತೋರಿಸುತ್ತಾರೆ. ಈ ಉಪ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷ ಕನಿಷ್ಠ 10 ಶಾಸಕರು ಗೆದ್ದೆ ಗೆಲ್ಲುತ್ತಾರೆ ಕಾದು ನೋಡಿ ಎಂದಿದ್ದಾರೆ.
undefined
ಪಕ್ಷ ದ್ರೋಹ ಮಾಡಿದವರಿಗೆ ಮತ ಬೇಡ: ಪ್ರಜ್ವಲ್ ರೇವಣ್ಣ
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾದ ನನ್ನ ತವರೂರು ಮೈಸೂರು ಆಗಿದೆ. ಸಿದ್ದರಾಮಯ್ಯ ಅವರ ತವರೂರು ಬಾದಾಮಿ ಕ್ಷೇತ್ರವಾಗಿದೆ ಎಂದಿದ್ದಾರೆ. ಸಿದ್ದು ಗಡ್ಡ ಕೆರೆದುಕೊಂಡ ಒದ್ದಾಡುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿದ ಶಾಸ್ತ್ರ ಯಾವುದು ನಿಜ ಆಗಿಲ್ಲ. ಸಿದ್ದರಾಮಯ್ಯ ಮಾತು ನಂಬಬೇಡಿ. ಸೋಮಣ್ಣ ಮಾತು ನಂಬಿ ಎಂದರು. ತಾಲೂಕಿನ ಗಾವಡಗೆರೆ ಓಂ. ಗುರುಲಿಂಗ ಜಂಗಮ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ನಂತರ ಮಠದ ಮಾಹಿತಿ ವಿದ್ಯಾರ್ಥಿಗಳ ಬಗ್ಗೆ ಸಮಾಲೋಚಿಸಿದರು.
ಪುತ್ರನಿಗೆ ‘ಟಿಕೆಟ್’ ಕೊಡಿಸಲಾಗದೆ ‘ಕೈ’ಚೆಲ್ಲಿದ ಜಿಟಿಡಿಗೆ ‘ತ್ರಿಪಕ್ಷೀಯ’ ಬೇಡಿಕೆ!
ಮಾಜಿ ಸಚಿವ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ಶಿವಣ್ಣ , ಮಾಜಿ ಸ್ಪೀಕರ್ ಕೆ.ಜೆ. ಬೋಪಯ್ಯ, ಮುಖಂಡರಾದ ರಮೇಶ್ ಕುಮಾರ್, ಬಿ.ಎಸ್. ಯೋಗಾನಂದ ಕುಮಾರ್, ಅಪ್ಪಣ್ಣ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ಕೆ. ಆರ್ ಪೇಟೆ: BJP ಅಭ್ಯರ್ಥಿಯ ಅಣ್ಣನಿಂದ ಕಾಂಗ್ರೆಸ್ ಪರ ಪ್ರಚಾರ..!