ಕಾಂಗ್ರೆಸ್‌ಗೆ ಬಾಯ್,JDSಗೆ ಹಾಯ್ ಎಂದ ಮಾಜಿ ಸಂಸದರ ಪುತ್ರ

By Suvarna NewsFirst Published Sep 4, 2021, 11:56 AM IST
Highlights
  • ಕಾಂಗ್ರೆಸ್ ಯುವ ಮುಖಂಡರೋರ್ವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ
  • ಜೆಡಿಎಸ್ ಭದ್ರಕೊಟೆ ಎಂದೇ ಕರೆಸಿಕೊಳ್ಳುವ ಮಂಡ್ಯದಲ್ಲಿ ಈ ಹೊಸ ಬೆಳವಣಿಗೆಯೊಂದು ಆಗುತ್ತಿದೆ

ಮಂಡ್ಯ (ಸೆ.04): ಕಾಂಗ್ರೆಸ್ ಯುವ ಮುಖಂಡರೋರ್ವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ. ಜೆಡಿಎಸ್ ಭದ್ರಕೊಟೆ ಎಂದೇ ಕರೆಸಿಕೊಳ್ಳುವ ಮಂಡ್ಯದಲ್ಲಿ ಈ ಹೊಸ ಬೆಳವಣಿಗೆಯೊಂದು ಆಗುತ್ತಿದೆ.  

ಪದ್ಮನಾಭನಗರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಚೇತನ್ ಗೌಡ ಜೆಡಿಎಸ್ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ.  ಮಂಡ್ಯ ಮಾಜಿ ಸಂಸದ ಶಿವರಾಮೇಗೌಡರ ಪುತ್ರ ಚೇತನ್ ಇದೀಗ ಪಕ್ಷಾಂತರಕ್ಕೆ ಸಿದ್ಧರಾಗಿದ್ದಾರೆ. 

‘ಎಲ್ಲಾ ಪಕ್ಷಕ್ಕೂ ಹೋಗಿ ಬಂದಿದ್ದೇನೆ : ಈಗೆಲ್ಲೂ ಹೋಗಲ್ಲ’

ಇದೀಗ ಜೆಡಿಎಸ್‌ನಿಂದ ಜಿಲ್ಲಾ ಪಂಚಾಯತಿಗೆ ಸ್ಪರ್ಧಿಸಲು ಸಿದ್ದತೆ ಆರಂಭಿಸಿದ ಚೇತನ್ ಪದ್ಮನಾಭನಗರ MLA ಚುನಾವಣೆಯಲ್ಲಿ ಆರ್ ಅಶೋಕ್ ವಿರುದ್ಧ ಸೋತಿದ್ದರು.  ರಾಜಕೀಯ ಭವಿಷ್ಯಕ್ಕಾಗಿ ಮತ್ತೆ ಜಿಲ್ಲಾ ಪಂಚಾಯತ್‌ನಿಂದ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದಾರೆ. 

ಬಿಜೆಪಿ ರೋಡ್ ಶೋ ವೇಳೆ ಜೆಡಿಎಸ್ ಬಾವುಟ ಹಿಡಿದು ಗೌಡರ ಪರ ಘೋಷಣೆ

ಮಂಡ್ಯ ಜಿಲ್ಲೆ ನಾಗಮಂಗಲದ ಬಿಂಡಿಗನವಿಲೆ ಜಿ.ಪಂ ಕ್ಷೇತ್ರದಿಂದ ಸ್ಪರ್ಧೆಗೆ ಸಜ್ಜಾಗಿದ್ದು, ಕಾರ್ಯಕರ್ತರು, ಅಭಿಮಾನಿಗಳ ಒತ್ತಾಯದಂತೆ ಚೇತನ್ ಸ್ಪರ್ಧೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಶಿವರಾಮೇಗೌಡ ಹೇಳಿದ್ದಾರೆ.  

ಕೈ ನಾಯಕರನ್ನ ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಚೇತನ್ ರಾಜೀನಾಮೆ ನೀಡಿದ್ದಾನೆ. ಈಗಾಗಲೇ JDS ಪಕ್ಷ ಸೇರ್ಪಡೆಗೆ ವರಿಷ್ಠರ ಸಮ್ಮತಿ ಸಿಕ್ಕಿದೆ. ಕೆಲ ದಿನಗಳಲ್ಲಿ ಮಂಡ್ಯ JDS ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದರು. 

ಮಗನನ್ನ JDSಗೆ ಕರೆತರುವ ಮೂಲಕ MLA ಟಿಕೆಟ್‌ಗೆ LRS ಟವಲ್ ಹಾಕಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸೆ ಇದೆ. ನಾನು JDSನಿಂದ ಸ್ಪರ್ಧೆ ಮಾಡಿದರೆ ಹಾಲಿ ಶಾಸಕ ಸುರೇಶ್‌ಗೌಡರನ್ನ ಮನೆಗೆ ಕಳುಹಿಸಲ್ಲ. ಆತನಿಗೆ ನನಗಿಂತ ಹೆಚ್ಚು ಭಾಷೆ ಗೊತ್ತಿದೆ ಹಾಗಾಗಿ ಅವರನ್ನ ಲೋಕಸಭೆಗೆ ಪ್ರಮೋಷನ್ ಮಾಡೋಣ. ನಾನು ಅಥವಾ MLC ಅಪ್ಪಾಜಿಗೌಡ ಅಭ್ಯರ್ಥಿಯಾಗುತ್ತೇವೆ ಎಂದು ನಾಗಮಂಗಲದಲ್ಲಿ ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದಾರೆ.

ತಂದೆ ಮಗ ಬೇರೆ ಬೇರೆ ಪಕ್ಷ ಎಂಬ ಟೀಕೆಗಳಿದ್ದವು. ತಂದೆಯ ಮಾರ್ಗದರ್ಶನದಂತೆ ನಡೆಯಲು ಜೆಡಿಎಸ್ ಸೇರಿದ್ದೇನೆ. ವರಿಷ್ಠರ ಆಶೀರ್ವಾದ ಪಡೆದು ಜಿಲ್ಲಾ ಪಂಚಾಯತ್‌ಗೆ ಸ್ಪರ್ಧಿಸುತ್ತೇನೆ ಎಂದು ನಾಗಮಂಗಲದಲ್ಲಿ ಚೇತನ್ ಗೌಡ ಪ್ರತಿಕ್ರಿಯಿಸಿದರು.

click me!