ವರದಿ : ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಸೆ.04): ಹನ್ನೊಂದು ವರ್ಷದ ಅವಧಿಯಲ್ಲಿ ಬೆಂಗಳೂರಿನ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಸುಮಾರು 923 ಕೋಟಿ ರು. ನಷ್ಟು ಅಕ್ರಮ ನಡೆದಿದೆ ಎಂದು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.
undefined
ಈ ಬ್ಯಾಂಕ್‌ನಲ್ಲಿ 2009ರಿಂದ 2020ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರ ಕುರಿತು ಶೋಧಿಸಿರುವ ಸಿಐಡಿ, ಈಗ ವರ್ಷವಾರು ಲೆಕ್ಕಪರಿಶೋಧನೆ ನಡೆಸಿ ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಲು ನಿರ್ಧರಿಸಿದೆ.
ರಾಘವೇಂದ್ರ ಬ್ಯಾಂಕ್ ಹಗರಣ: ವಂಚಕರಿದ 1 ಸಾವಿರ ಕೋಟಿ ಆಸ್ತಿ ಜಪ್ತಿ?
ಅಂತೆಯೇ 2009-10ನೇ ಸಾಲಿನಲ್ಲಿ 60 ರು. ಕೋಟಿ ಅಕ್ರಮ ನಡೆದಿದೆ ಎಂದು ಬ್ಯಾಂಕ್‌ನ ಮಾಜಿ ಅಧ್ಯಕ್ಷ ರಾಮಕೃಷ್ಣಯ್ಯ ಸೇರಿದಂತೆ 28 ಜನ ಆರೋಪಿಗಳ ವಿರುದ್ಧ ಸಿಐಡಿ ವಿಶೇಷ ನ್ಯಾಯಾಲಯಕ್ಕೆ ಮೊದಲ ಹಂತದ ಆರೋಪ ಪಟ್ಟಿಯನ್ನು ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹನ್ನೊಂದು ವರ್ಷಗಳ ಅವಧಿಯಲ್ಲಿ ಬ್ಯಾಂಕ್‌ನ ಹಣಕಾಸು ವಹಿವಾಟಿನ ಕುರಿತು ಮೈಕ್ರೋ ಆಡಿಟಿಂಗ್ ಅನ್ನು ಸಿಐಡಿ ನಡೆಸಿದೆ. ಸಿಐಡಿಗೆ ಲೆಕ್ಕಪರಿಶೋಧಕರು ಸಲ್ಲಿಸಿರುವ ವರದಿ ಆಧರಿಸಿ ಆರೋಪಿಗಳ ವಿರುದ್ಧ ವರ್ಷವಾರು ದೋಷಾರೋಪ ಪಟ್ಟಿಯನ್ನು ತನಿಖಾ ತಂಡ ಸಿದ್ಧಪಡಿಸಿದೆ. ಗಮನಾರ್ಹವೆಂದರೆ ಪ್ರತಿ ವರ್ಷದಲ್ಲೂ ಬ್ಯಾಂಕ್‌ನ ಮಾಜಿ ಅಧ್ಯಕ್ಷ ರಾಮಕೃಷ್ಣಯ್ಯ ಅವರ ಪಾತ್ರ ಕಂಡು ಬಂದಿದೆ ಎಂದು ಮೂಲಗಳು ಹೇಳಿವೆ.
ಗುರು ರಾಘವೇಂದ್ರ ಬ್ಯಾಂಕ್ ಆಸ್ತಿ ಜಪ್ತಿಗೆ ಹೈಕೋರ್ಟ್ ಸೂಚನೆ
ಲಾಭ ಲೆಕ್ಕ ತೋರಿಸಿ ದೋಖಾ: ಬ್ಯಾಂಕ್‌ನಲ್ಲಿ ಲಾಭದ ವಹಿವಾಟು ನಡೆದಿದೆ ಎಂದು ತೋರಿಸಿ ಜನರಿಗೆ ಆರೋಪಿಗಳು ವಂಚಿಸಿದ್ದಾರೆ. ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಬೇನಾಮಿ ಹೆಸರಿನಲ್ಲಿ ತಮಗೆ ಆರೋಪಿತ ಆಡಳಿತ ಮಂಡಳಿ ಸದಸ್ಯರು ಕೋಟಿ ಕೋಟಿ ಸಾಲ ಪಡೆದಿದ್ದಾರೆ. ಇದರಿಂದ ಬ್ಯಾಂಕ್‌ಗೆ ಅಪಾರ ಪ್ರಮಾಣದ ಆರ್ಥಿಕವಾಗಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಬ್ಯಾಂಕ್‌ನಲ್ಲಿ 2,276 ಸಾಲದ ಖಾತೆಗಳಿದ್ದು, ಇವರಿಗೆ ಸುಮಾರು 1500 ಕೋಟಿ ರು. ಸಾಲ ವಿತರಣೆ ಬಗ್ಗೆ ಪಕ್ಕಾ ಮಾಹಿತಿಯೇ ಇಲ್ಲ.
ಬ್ಯಾಂಕ್ ಸಮಸ್ಯೆ: ತೇಜಸ್ವಿ ಭಾಷಣಕ್ಕೆ ನಿರ್ಮಲಾ ಮೆಚ್ಚುಗೆ!
ಅಲ್ಲದೆ 2 ಸಾವಿರಕ್ಕೂ ಅಧಿಕ ಕೋಟಿ ಠೇವಣಿಯನ್ನು ಬ್ಯಾಂಕ್ ಸಂಗ್ರಹಿಸಿದೆ. ಇದರಲ್ಲಿ 650 ಕೋಟಿ ರು. ಸಾಂಸ್ಥಿಕ ಠೇವಣಿಯಾಗಿದೆ ಎಂದು ಸಹಕಾರಿ ಸಂಘಗಳ ನೊಂದಾಣಿ ಅಧಿಕಾರಿಗಳು ಹೇಳಿದ್ದರು. ಈ ಮಾಹಿತಿ ಆಧರಿಸಿಯೇ ಮೈಕೊ್ರೀ ಆಡಿಟಿಂಗ್ ನಡೆಸಲಾಯಿತು. ಈ ಅಕ್ರಮ ವ್ಯವಹಾರ ಕುರಿತು ಒಂದು ವರ್ಷಕ್ಕೆ ಸೀಮಿತವಾಗಿ ಸಂತ್ರಸ್ತರಿಂದ ದೂರು ಬಂದಿತ್ತು. ಆದರೆ ತನಿಖೆ ವೇಳೆ 11 ವರ್ಷದ ಅವಧಿಯಲ್ಲಿ ಲೆಕ್ಕ ಕೇಳಿದ್ದೆವು. ಆಗ ದಾಖಲೆ ಗಳನ್ನು ಪರಿಶೀಲಿಸಿದಾಗ ಅಷ್ಟು ವರ್ಷಗಳ ಆಡಳಿತ ಮಂಡಳಿಯ ಭಾನಗಡಿ ಬಯಲಾ ಯಿತು ಎಂದು ಮೂಲಗಳು ಹೇಳಿವೆ.