ಬೆಟ್ಟದಿಂದ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ : 3 ದಿನದ ಬಳಿಕ ಪತ್ತೆ

By Suvarna News  |  First Published Sep 26, 2021, 4:21 PM IST
  •  ಬೆಟ್ಟದಿಂದ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ  3 ದಿನದ ಬಳಿಕ ಪತ್ತೆ
  • ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳು ಬೆಟ್ಟದಿಂದ ಹಾರಿ ಪ್ರೇಮಿಗಳು ಆತ್ಮಹತ್ಯೆ

ರಾಮನಗರ (ಸೆ.26):  ಬೆಟ್ಟದಿಂದ ಹಾರಿ ಪ್ರೇಮಿಗಳಿಬ್ಬರು (lovers) ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ರಾಮನಗರದ  (Ramanagar) ನಡೆದಿದೆ. 

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳು ಬೆಟ್ಟದಿಂದ ಹಾರಿ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.  ‌ಕಳೆದ ಮೂರು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

Tap to resize

Latest Videos

ಹುಡುಗ - ಹುಡುಗಿ ಇಬ್ಬರು ಸೊಂಟಕ್ಕೆ ವೇಲ್ ಕಟ್ಟಿಕೊಂಡು ಬೆಟ್ಟದಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಮೃತ ಪ್ರೇಮಿಗಳಿಬ್ಬರನ್ನು ತಮಿಳುನಾಡು (Tamilnadu) ಮೂಲದ ಸತೀಶ್( 21) ಹಾಗೂ ಕನಕಪುರ ನಗರದ ಚಂದನಾ(21) ಎಂದು ಗುರುತಿಸಲಾಗಿದೆ. 

ಬೆಂಗಳೂರು; 'ಬಾ ನಲ್ಲೆ ಮಧುಚಂದ್ರಕೆ' ಪತ್ನಿಯ ಹತ್ಯೆಗೆ ಎಂತೆಂಥಾ ಫ್ಲಾನ್!

ಈಗಾಗಲೇ ಒಂದು ವರ್ಷದ ಕೆಳಗೆ ವಿವಾಹವಾಗಿರೋ ಚಂದನಾ ಹಾಗು ಸತೀಶ್ ಮೂರು ದಿನಗಳ ಹಿಂದೆ ಇಲ್ಲಿಗೆ ಬಂದು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮೂರು ದಿನಗಳ ಕೆಳಗೆ ಚಂದಾನ ನಾಪತ್ತೆಯಾಗಿರುವ ಬಗ್ಗೆ ಕನಕಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಇಬ್ಬರ ಮೃತದೇಹ ಕಬ್ಬಳು ಬೆಟ್ಟದ ಕೆಳಗೆ ಪತ್ತೆಯಾಗಿದೆ. 

ಸತೀಶ್ ತಮಿಳುನಾಡಿನ ಹೊಸೂರಿನಲ್ಲಿ ಟಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಮೂರು ವರ್ಷದಿಂದ ಚಂದನಾ ಹಾಗು ಸತೀಶ್ ಪರಸ್ಪರ ಪ್ರೀತಿಸುತ್ತಿದ್ದರು.  ಆದರೆ ಇವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. 

ಸದ್ಯ ಪ್ರೇಮಿಗಳ ಆತ್ಮಹತ್ಯೆ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. 

ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಕಳೆದ ಕೆಲ ದಿನಗಳ ಹಿಂದಷ್ಟೆ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ದಾವಣಗೆರೆಯಲ್ಲಿಯೂ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿತ್ತು. ಇದೀಗ ರಾಮನಗರದ ಬೆಟ್ಟದಲ್ಲಿಯು ಜಿಗಿದು ಪ್ರೇಮಿಗಳು ಪ್ರಾಣ ಕಳೆದುಕೊಂಡಿದ್ದಾರೆ. 

ಕೋಲಾರದಲ್ಲಿಯೂ ದುರ್ಘಟನೆ

ಕೌಟಂಬಿಕ ಕಲಹದಿಂದ ಬೇಸತ್ತು ಪತಿ ಪತ್ನಿ ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಪಟ್ಟಣದ  ತಿರುಮಲೆ  ಭಜನೆ ಮನೆ ರಸ್ತೆಯಲ್ಲಿ ನಡೆದಿತ್ತು. ಪಟ್ಟಣದ ತಿರುಮಲೆ ಭಜನೆ  ಮನೆ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನರಸಿಂಹ ಮೂರ್ತಿ ನಾಯ್ಕ (35) ಮತ್ತು ಹೇಮಾ ಮೃತಪಟ್ಟಿದ್ದರು.

ಕೋಲಾರ: 2 ಕೋಟಿ ಸಂಗ್ರಹಿಸಿದ್ದ ಅಗ್ರಿಗೋಲ್ಡ್‌ ಏಜೆಂಟ್ ಆತ್ಮಹತ್ಯೆ

ಮದ್ಯ ವ್ಯಸನಿಯಾಗಿದ್ದ  ನರಸಿಂಹ  ಪ್ರತಿನಿತ್ಯ  ಮದ್ಯ ಸೇವಿಸಿ ಬಂದು  ಮನೆಯಲ್ಲಿ ಪತ್ನಿ ಹೆಮಾಳೊಂದಿಗೆ ಜಗಳ ಅಡುತ್ತಿದ್ದನು. ಮಂಗಳವಾಡ ಜಗಳ ವಿಕೊಪಲ್ಎ ತಿರುಗಿ  ಇಬ್ಬರು ಮನೆಯಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿದ್ದರು.

click me!