ಮೀಸಲಾತಿ ಸಂಕಟ: ಬೊಮ್ಮಾಯಿ ಸರ್ಕಾರಕ್ಕೆ ಡೆಡ್‌ಲೈನ್‌ ಕೊಟ್ಟ ಸ್ವಾಮೀಜಿ

By Suvarna News  |  First Published Sep 26, 2021, 3:40 PM IST

*  ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲಲ್ಲ
*  ತಾಕತ್ತಿದ್ರೆ ಕಾರ್ಯಕ್ರಮಕ್ಕೆ ಕಲ್ಲು ಹೊಡೆಸಲಿ
*  ಅ.1 ರೊಳಗಾಗಿ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು
 


ಗದಗ(ಸೆ.26): ಮೀಸಲಾತಿ ಹೋರಾಟವನನ್ನ ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಅಕ್ಟೋಬರ್ 1ರಂದು ಸರ್ಕಾರದಿಂದ ಸಂದೇಶ ಬರದಿದ್ದರೆ ಮತ್ತೆ ಧರಣಿ ನಡೆಸಲಿದ್ದೇವೆ ಅಂತ ಬಸವ ಜಯಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji) ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಅ. 1ರಂದು ಬೆಂಗಳೂರಿನಲ್ಲಿ ಸತ್ಯಾಗ್ರಹವನ್ನ ನಡೆಸುತ್ತೇವೆ. ಈ ಹಿನ್ನೆಲೆಯಲ್ಲಿ ಸಚಿವ ಸಿ.ಸಿ. ಪಾಟೀಲ, ಶಾಸಕ ಬಸನಗೌಡ ಯತ್ನಾಳ, ವಿಜಯಾನಂದ ಕಾಶಪ್ಪನವರ್ ಮಾತನಾಡಲಿದ್ದಾರೆ. ಉಳಿದ ರಾಜಕಾರಣಿಗಳ ಮೇಲೆ ನಮಗೆ ನಂಬಿಕೆ ಇಲ್ಲ‌.‌ ಯತ್ನಾಳ್, ಸಿ.ಸಿ. ಪಾಟೀಲರ ಮೇಲೆ ನಂಬಿಕೆ ಇದೆ‌ ಅಂತ ತಿಳಿಸಿದ್ದಾರೆ. 

Latest Videos

undefined

ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಎರಡು ಸುತ್ತು ಮಾತಾಡಿದ್ದು ಭರವಸೆ ಮೂಡಿದೆ. ನಮ್ಮ ಹೋರಾಟ ಬೆಂಗಳೂರು ತಲಪುವವರೆಗೆ ಸಂದೇಶದ ನಿರೀಕ್ಷೆಯಲ್ಲಿದ್ದೇವೆ‌. ಇವತ್ತು ಸಂಜೆಯೊಳಗೆ ಸಿಎಂ ಜೊತೆ ಸಮಾಜದ ನಾಯಕರು ಚರ್ಚೆ ಮಾಡಲಿದ್ದಾರೆ. ಇನ್ನೂ ಎರಡು ಮೂರು ದಿನ ಟೈಮ್ ಇದೆ. ಮೀಸಲಾತಿ ಘೋಷಣೆ ಮಾಡಿದ್ರೆ ಸಿಎಂಗೆ ಅಭಿನಂದಿಸುತ್ತೇವೆ. ಇಲ್ಲದಿದ್ದರೆ ಮತ್ತೆ ನಮ್ಮ ಹೋರಾಟ ಮುಂದುವರಿಸುತ್ತೇವೆ ಅಂತ ಹೇಳಿದ್ದಾರೆ. 

2ಎ ಮೀಸಲಾತಿ ಸಭೆ: ಕೂಡಲಸಂಗಮ ಜಯಮೃತ್ಯುಂಜಯ ಶ್ರೀ ವಿರುದ್ಧ ಕಿಡಿ

ಅ.1 ರೊಳಗಾಗಿ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು

ಕಾನೂನಾತ್ಮಕ ಚಿಂತನೆಗಳಿದ್ರೆ ಮತ್ತೊಂದು ಸುತ್ತಿನ ಮಾತುಕಥೆ ನಡೆಸಲಿ. ಅ. 1 ರೊಳಗಾಗಿ ಸರ್ಕಾರ ಸ್ಪಷ್ಟವಾದ ಬಗ್ಗೆ ಉತ್ತರ ಕೊಡಬೇಕು. ಮುಖ್ಯಮಂತ್ರಿಗಳು ಗದಗಗಿಗೆ ಇಂದೇ ಬರಲಿದ್ದಾರೆ. ಅವರು ಭೇಟಿಯಾದ್ರೆ ಚರ್ಚೆ ಮಾಡ್ತೇನೆ. ಸಂಜೆಯೊಳಗಾಗಿ ಮುಖ್ಯಮಂತ್ರಿಗಳು ಭೇಟಿಯಾಗಬಹುದು. ಸಿಎಂ ಜೊತೆ ಯತ್ನಾಳ, ಸಿಸಿ ಪಾಟೀಲ ಮಾತನಾಡುತ್ತಾರೆ ಅಂತ ಶ್ರೀ ಹೇಳಿದ್ದಾರೆ. 

ಮತ್ತೆ ಪಂಚಮಸಾಲಿ 2ಎ ಮೀಸಲಾತಿ(Reservation) ಹೋರಾಟದ ತೀವ್ರತೆ ಹೆಚ್ಚಿಸಲು ಪಂಚಮಸಾಲಿ ಮುಖಂಡರು ಮುಂದಾಗಿದ್ದಾರೆ. ಈ ಸಂಬಂಧ  ನಾಳೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಜಿಲ್ಲಾ ಮಟ್ಟದ ಸಮಾವೇಶವನ್ನ ಹಮ್ಮಿಕೊಳ್ಳಲಾಗಿದೆ. 2ಎ ಮೀಸಲಾತಿ ನೀಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಸಮುದಾಯದ ಮುಖಂಡರ ನೇತೃತ್ವದಲ್ಲಿ ಪ್ರತಿಜ್ಞೆ ಪಂಚಾಯತ್ ನಡೆಯಲಿದೆ. ನಾಳೆ ಜಮಖಂಡಿ ನಗರದ ಬಸವಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೀಸಲಾತಿಗಾಗಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಲಿದೆ ಅಂತ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಅಂತ ತಿಳಿಸಿದ್ದಾರೆ. 

ತಾಕತ್ತಿದ್ರೆ ಕಾರ್ಯಕ್ರಮಕ್ಕೆ ಕಲ್ಲು ಹೊಡೆಸಲಿ

ಜಮಖಂಡಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಾಕತ್ತಿದ್ರೆ ಕಲ್ಲು ಹೊಡೆಸಲಿ. ಪಂಚಮಸಾಲಿ ಪ್ರತಿಜ್ಞೆ ಅಭಿಯಾನ ಜಮಖಂಡಿಯಲ್ಲಿ ನಡದೇ ನಡೆಯುತ್ತೆ ಅಂತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನರ್ ಹೇಳಿದ್ದಾರೆ.  

ಪಂಚಮಸಾಲಿ ಹೋರಾಟ ಹತ್ತಿಕ್ಕಲು ಷಡ್ಯಂತ್ರ: ಕೂಡಲ ಶ್ರೀ

ಆರಂಭದಿಂದಲೂ ಈ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೀತಿದೆ. ಸಮಾಜದ ಒಳಿತಿಗಾಗಿ ಅವರು ಕೆಲಸ ಮಾಡುತ್ತಿಲ್ಲ. ಮುಖ್ಯಮಂತ್ರಿಯಾಗ್ಬೇಕು, ಮಂತ್ರಿ ಆಗ್ಬೇಕು ಅನ್ನೋ ನಿಟ್ಟಿನಲ್ಲಿದ್ದಾರೆ ಅಂತ ಪರೋಕ್ಷವಾಗಿ ಹೇಳುವ ಮೂಲಕ  ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲಲ್ಲ. ಗೊಡ್ಡು ಬೆದರಿಕೆಗೂ ನಾವು ಹೆದರಲ್ಲ. ಮುಂದೆ ಒಂದು ದಿನ ಸಮಾಜ ತಕ್ಕಪಾಠ ಕಲಿಸಲಿದೆ‌ ಅಂತ ಹೇಳಿದ್ದಾರೆ. 

ಕೂಡಲಸಂಗಮ ಪೀಠಕ್ಕೆ ಪರ್ಯಾಯ ಸ್ವಾಮೀಜಿ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು, ಪೀಠ ಇವರಾ ಮಾಡಿದ್ದು?, ಸಮಾಜ ಪೀಠವನ್ನ ಮಾಡಿದೆ. ಸಮಾಜದ ಪರವಾಗಿ ಮೀಸಲಾತಿಯನ್ನ ಕೇಳುತ್ತಿದ್ದೇವೆ. ನಿರಾಣಿಯವರಿಗೆ ಹುಚ್ಚು ಹಿಡಿದಿದೆ. ತಲೆ ಕೆಟ್ಟಿದೆ ಅಧಿಕಾರದ ವ್ಯಾಮೋಹ ಹಿಡಿದಿದೆ. ಹೀಗಾಗಿ ಬೇಕಾ ಬಿಟ್ಟಿ ಮಾತನಾಡುತ್ತಿದ್ದಾರೆ. ಸಮಾಜದ ಪೀಠ ಯಾರಿಂದಲೂ ಒಡೆಯಲು ಸಾಧ್ಯವಿಲ್ಲ. ಇವರಿಗೆ ತಾಕತ್ ಇದ್ರೆ ಒಡೆದು ತೋರಿಸಲಿ. ಪೀಠ ಬದಲಾಗಲ್ಲ. ಇದೇ ಸ್ವಾಮಿಗಳು ಪೀಠದಲ್ಲಿ ಇರ್ತಾರೆ ಅಂತ ಸ್ಪಷ್ಟಪಡಿಸಿದ್ದಾರೆ. 
 

click me!