Bengaluru: ಮೆಟ್ರೋದೊಳಗೆ ಲೌಡ್‌ ಸ್ಪೀಕರ್‌ ಸಂಗೀತ ನಿಷೇಧ: ಬಿಎಂಆರ್‌ಸಿಎಲ್‌ ಸೂಚನೆ

Published : Jun 24, 2023, 08:04 AM IST
Bengaluru: ಮೆಟ್ರೋದೊಳಗೆ ಲೌಡ್‌ ಸ್ಪೀಕರ್‌ ಸಂಗೀತ ನಿಷೇಧ: ಬಿಎಂಆರ್‌ಸಿಎಲ್‌ ಸೂಚನೆ

ಸಾರಾಂಶ

ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರಿಗೆ ತೊಂದರೆ, ಕಿರಿಕಿರಿ ಆಗದಂತೆ ಧ್ವನಿವರ್ಧಕಗಳಲ್ಲಿ ಸಂಗೀತ ಹಾಕುವುದನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಷೇಧಿಸಿದೆ.   

ಬೆಂಗಳೂರು (ಜೂ.24): ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರಿಗೆ ತೊಂದರೆ, ಕಿರಿಕಿರಿ ಆಗದಂತೆ ಧ್ವನಿವರ್ಧಕಗಳಲ್ಲಿ ಸಂಗೀತ ಹಾಕುವುದನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಷೇಧಿಸಿದೆ. ಈ ಕುರಿತು ಬಿಎಂಆರ್‌ಸಿಎಲ್‌ ರೈಲುಗಳಲ್ಲಿ ಪ್ರಕಟಣೆ ಹೊರಡಿಸಿದ್ದು, ಅದರಂತೆ ಸಾರ್ವಜನಿಕ ತೊಂದರೆ ತಪ್ಪಿಸುವ ಸಲುವಾಗಿ ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರು ಲೌಡ್‌ ಸ್ಪೀಕರ್‌ ಮೂಲಕ ಸಂಗೀತ ಪ್ರಸಾರ ಮಾಡಬಾರದು. ಆದರೆ ಇಯರ್‌ ಫೋನ್‌ ಬಳಸಿ ಸಂಗೀತ ಆಲಿಸಲು ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌, ಮೆಟ್ರೋ ರೈಲುಗಳಲ್ಲಿ ದೊಡ್ಡದಾಗಿ ಸಂಗೀತ ಹಾಕುವುದು ಸರಿಯಲ್ಲ. ಇತರೆ ಪ್ರಯಾಣಿಕರಿಗೆ ಇದು ಕಿರಿಕಿರಿ ಉಂಟುಮಾಡುತ್ತದೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಪ್ರಯಾಣಿಸುವಾಗ ಓದುವುದು, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದನ್ನು ಕಾಣುತ್ತೇವೆ. ಅಥವಾ ಕೆಲಸಕ್ಕೆ ಸಂಬಂಧಿಸಿದಂತೆ ದೂರವಾಣಿಯಲ್ಲಿ ಮಾತನಾಡುತ್ತಾರೆ. ದೊಡ್ಡದಾಗಿ ಮ್ಯೂಸಿಕ್‌ ಹಾಕಿದರೆ ಸಹಜವಾಗಿ ತೊಂದರೆ ಆಗುತ್ತದೆ. ಹೀಗಾಗಿ ಈ ನಿರ್ಧಾರವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮತ್ತೆ 3 'ನಮ್ಮ ಮೆಟ್ರೋ' ಮಾರ್ಗ: ಸರ್ಕಾರಕ್ಕೆ ಪ್ರಸ್ತಾವ

ಆದರೆ, ರೈಲಿನಲ್ಲಿ ಧ್ವನಿವರ್ಧಕಗಳಲ್ಲಿ ಇಲ್ಲವೇ ಜೋರಾಗಿ ಸಂಗೀತ ಪ್ರಸಾರ ಮಾಡುವವರಿಗೆ ಏನು ಶಿಕ್ಷೆ, ಎಷ್ಟು ದಂಡ ಎಂಬುದನ್ನು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿಲ್ಲ. ಬಿಎಂಆರ್‌ಸಿಎಲ್‌ ಮೆಟ್ರೋ ರೈಲುಗಳಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿಷಯಗಳ ಬಗ್ಗೆ ಪ್ರಯಾಣಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಚಿತ್ರಗಳು, ವಿಡಿಯೋ ಡಿಸ್ಲೈ ಆಧರಿಸಿ ಜನರಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದೆ.

Bengaluru: ನಾಗಸಂದ್ರ-ಬಿಐಇಸಿ ನಮ್ಮ ಮೆಟ್ರೋಗೆ ಆಗಸ್ಟ್‌ ಡೆಡ್‌ಲೈನ್‌?

ಮೆಟ್ರೋ ನಿಲ್ದಾಣ ವ್ಯಾಪ್ತಿಯಲ್ಲಿ ಧೂಮಪಾನ, ಮೆಟ್ರೋ ಒಳಗೆ ಆಹಾರ ಸೇವನೆಗೆ ನಿರ್ಬಂಧ ಹೇರಲಾಗಿದೆ. ರೈಲು ಹತ್ತುವಾಗ ಲೈನ್‌ ವ್ಯವಸ್ಥೆಯನ್ನು ಪಾಲಿಸಬೇಕು. ರೈಲಿಗೆ ಕಾಯುತ್ತ ನಿಂತಾಗಲೂ ಅಗತ್ಯ ಮುನ್ಸೂಚನೆಗಳನ್ನು ಅನುಸರಿಸುವುದು, ಬೋಗಿಗಳಲ್ಲಿ ನಿಂತಾಗ ಬಾಗಿಲು ತೆರೆಯುವುದು, ಬಾಗಿಲ ಸಂಧಿಯಲ್ಲಿ ಕೈ ಇಡುವುದು ಸೇರಿ ಹಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

PREV
Read more Articles on
click me!

Recommended Stories

ಬಂಡೀಪುರದಲ್ಲಿ ಪಾದಯಾತ್ರೆ ತಡೆ: ಅಯ್ಯಪ್ಪ ಮಾಲಾಧಾರಿಗಳು ಅರಣ್ಯ ಸಿಬ್ಬಂದಿ ನಡುವೆ ವಾಗ್ವಾದ!
ಬೆಂಗಳೂರು : O+ ಬದಲು A+ ರಕ್ತ ನೀಡಿದ ಸರ್ಕಾರಿ ಆಸ್ಪತ್ರೆ, ಜಿಮ್ ಟ್ರೈನರ್ ಸ್ಥಿತಿ ಚಿಂತಾಜನಕ!