ಫಲಾನುಭವಿಗಳಿಗೆ 1008 ಮನೆ ಶೀಘ್ರ ಹಸ್ತಾಂತರ: ಜಯಚಂದ್ರ

By Kannadaprabha News  |  First Published Jun 24, 2023, 6:05 AM IST

ನಗರದಲ್ಲಿ ನಿರ್ಮಾಣವಾಗುತ್ತಿರುವ 1008 ಮನೆಗಳ ನಿರ್ಮಾಣ ಕಾಮಗಾರಿ ಈ ವರ್ಷಾಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, ಶೀಘ್ರ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.


 ಶಿರಾ :  ನಗರದಲ್ಲಿ ನಿರ್ಮಾಣವಾಗುತ್ತಿರುವ 1008 ಮನೆಗಳ ನಿರ್ಮಾಣ ಕಾಮಗಾರಿ ಈ ವರ್ಷಾಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, ಶೀಘ್ರ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಅವರು ತಮ್ಮ ಗೃಹ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

Latest Videos

undefined

ಕಳೆದ 6 ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಆದಾಗ್ಯೂ ಈವರೆಗೂ ಪೂರ್ಣವಾಗಿಲ್ಲ. ಶೀಘ್ರವಾಗಿ ಕುಡಿಯುವ ನೀರಿನ ಸಂಪರ್ಕ, ವಿದ್ಯುಚ್ಛಕ್ತಿ ಸಂಪರ್ಕ ಕಲ್ಪಿಸಲು ಅಗತ್ಯ ವಾದ ಅನುದಾನವನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿದರು. ಓರ್ವ ಫಲಾನುಭವಿ 10 ಸಾವಿರ ವಂತಿಗೆ ಕಟ್ಟಬೇಕಿದ್ದು, ಇವರೆಗೂ 551 ಮಂದಿ ಮಾತ್ರ ಹಣ ಕಟ್ಟಿದ್ದಾರೆ ಉಳಿದ ವರ ಪೈಕಿ ಬಡವರಿದ್ದು, ಅವರ ವಂತಿಗೆ ಹಣವನ್ನು ಯಾವ ರೀತಿಯಲ್ಲಿ ಪಾವತಿಸುವ ಅವಕಾಶ ಇದೆ ಎಂದು ಪರಿಶೀಲನೆ ನಡೆಸಿ ಅನುಕೂಲ ಕಲ್ಪಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಅಜಯ್‌ಕುಮಾರ್‌, ಎಇಇ ಲೋಕೇಶ್ವರಪ್ಪ, ಪ್ರಾಜೆಕ್ಟ್ ಇಂಜಿನಿಯರ್‌ ಸುನೀಲ್‌ ಸೇರಿದಂತೆ ಹಲವರು ಹಾಜರಿದ್ದರು.

ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ

 ಶಿರಾ :  ಶಿರಾ ಜನತೆಯ ಆರ್ಶೀವಾದದಿಂದ ಶಾಸಕನಾಗಿ ಆಯ್ಕೆಯಾದ ಬಳಿಕ ಭದ್ರಾ, ಎತ್ತಿನಹೊಳೆ ನೀರಾವರಿ ಯೋಜನೆಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ ಶಿರಾ ಕ್ಷೇತ್ರದಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆಗೆ ಮುಕ್ತಿ ಕಾಣಿಸುತ್ತೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ.ಜಯಚಂದ್ರ ಹೇಳಿದರು.

ಹೊನ್ನಗೊಂಡನಹಳ್ಳಿ, ಮಾಗೋಡು ಹಾಗೂ ರತ್ನಸಂದ್ರ ಗ್ರಾ.ಪಂ.ನ ವಿವಿಧ ಹಳ್ಳಿಗಳಲ್ಲಿ ಪ್ರಚಾರ ಕೈಗೊಂಡು ಮಾತನಾಡಿದರು. ಚಿಕ್ಕ ವಯಸ್ಸಿನಲ್ಲೇ ಶಾಸಕನಾಗಿ ವಿಧಾನಸಭೆ ಪ್ರವೇಶಿಸಿದ ನನಗೆ ನಾಲ್ಕು ದಶಕಗಳ ಅನುಭವ, ಸಂಪರ್ಕದ ಕಾರಣದಿಂದ 3500 ಕೋಟಿ ಅನುದಾನವನ್ನು ಶಿರಾಕ್ಕೆ ತರಲು ಸಾಧ್ಯವಾಯಿತು. ಈ ಬಾರಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟುಕೈಗಾರಿಕೆಗಳನ್ನು ಆರಂಭಿಸಲು ಸಹಕಾರ ನೀಡಿ ಉದ್ಯೋಗ ಸೃಷ್ಟಿಸಲಾಗುವುದು ಎಂದರು.

ಶಿರಾ ಅಭಿವೃದ್ಧಿ ಆಗಿರಲಿಲ್ಲ, ನಾನೇ ಅಭಿವೃದ್ಧಿ ಮಾಡಿರೋದು, ನಾನು ಬಂದ ನಂತರವೇ ಎಲ್ಲಾ ಅಭಿವೃದ್ಧಿ ಆಗಿದೆ ಎನ್ನುವ ರೀತಿಯಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಅವರ ದರ್ಪದ ಮಾತು ಈವರೆಗೂ ಕ್ಷೇತ್ರದಲ್ಲಿ ಪ್ರತಿನಿಧಿಸಿದ್ದ ಶಾಸಕರನ್ನು ಅವಮಾನಿಸಿದ ಹಾಗೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಟಿ.ಲೋಕೇಶ್‌, ಜಿ.ಪಂ.ಮಾಜಿ ಸದಸ್ಯ ಅರೇಹಳ್ಳಿ ರಮೇಶ್‌, ಸಿ.ಆರ್‌.ಉಮೇಶ್‌, ಮುಖಂಡರಾದ ಗುಳಿಗೇನಹಳ್ಳಿ ನಾಗರಾಜ್‌, ಚಿಕ್ಕತಿಮ್ಮಣ್ಣ, ಬಾಂಬೆ ರಾಜಣ್ಣ, ಶೋಭ ನಾಗರಾಜ್‌, ಸುರೇಶ್‌, ಅಶೋಕ್‌, ಮಹದೇವಣ್ಣ, ಲಕ್ಷ್ಮೀಕಾಂತ್‌, ವಿಜಯಮ್ಮ, ಮಂಜುನಾಥ್‌, ರಾಜಣ್ಣ, ಸೋಮಣ್ಣ, ಹೇಮಂತ್‌ ಗೌಡ ಸೇರಿದಂತೆ ಹಲವರು ಹಾಜರಿದ್ದರು.

29ಶಿರಾ2: ಶಿರಾ ತಾಲೂಕಿನ ಹೊನ್ನಗೊಂಡನಹಳ್ಳಿ, ಮಾಗೋಡು ಹಾಗೂ ರತ್ನಸಂದ್ರ ಗ್ರಾಪಂನ ವಿವಿಧ ಹಳ್ಳಿಗಳಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು.

ಕಾಡುಗೊಲ್ಲರ ಧ್ವನಿ ಎತ್ತಿದ್ದು ಜಯಚಂದ್ರ

  ಶಿರಾ :  ಕಾಡುಗೊಲ್ಲ ಸಮುದಾಯಕ್ಕೆ ನ್ಯಾಯ ಒದಗಿಸಿದ್ದು ಕಾಂಗ್ರೆಸ್‌ ಪಕ್ಷ. ಕಾಡುಗೊಲ್ಲ ಸಮುದಾಯವನ್ನು ಜಾತಿಪಟ್ಟಿಗೆ ಸೇರಿಸಲು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದು ಮಾಜಿ ಸಚಿವ ಟಿ.ಬಿ.ಜಯಚಂದ್ರ. ಆದ್ದರಿಂದ ಬಿಜೆಪಿ ಪಕ್ಷದಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲು ತೀರ್ಮಾನಿಸಿದ್ದೇವೆ ಎಂದು ಕಾಡುಗೊಲ್ಲ ಮುಖಂಡರಾದ ಹಾರೋಗೆರೆ ಮಾರಣ್ಣ ಹೇಳಿದರು.

click me!