ಜಗತ್ತಿನಲ್ಲೆಡೆ ಕೊರೋನಾ ವೈರಸ್ ಭಯ ತಾಂಡವಾಡುತ್ತಿರುವ ನಡುವೆ ಸಕಲೇಶಪುರ ಪಟ್ಟಣ ವ್ಯಾಪ್ತಿಯಲ್ಲಿ ಕೆಲವಡೆ ಕಾಗೆಗಳು ವಿಚಿತ್ರ ರೋಗಕ್ಕೆ ಸಾಮೂಹಿಕವಾಗಿ ಸಾವನ್ನಪ್ಪುತ್ತಿವೆ.
ಸಕಲೇಶಪುರ(ಮಾ.07): ಜಗತ್ತಿನಲ್ಲೆಡೆ ಕೊರೋನಾ ವೈರಸ್ ಭಯ ತಾಂಡವಾಡುತ್ತಿರುವ ನಡುವೆ ಸಕಲೇಶಪುರ ಪಟ್ಟಣ ವ್ಯಾಪ್ತಿಯಲ್ಲಿ ಕೆಲವಡೆ ಕಾಗೆಗಳು ವಿಚಿತ್ರ ರೋಗಕ್ಕೆ ಸಾಮೂಹಿಕವಾಗಿ ಸಾವನ್ನಪ್ಪುತ್ತಿವೆ.
ಪಟ್ಟಣ ವ್ಯಾಪ್ತಿಯ ಹೇಮಾವತಿ ನದಿ ತೀರದ ಆಜಾದ್ ರಸ್ತೆ, ಮಲ್ಲಮ್ಮನ ಬೀದಿ ಹಿಂಭಾಗ, ಹಿಂದೂ ಸ್ಮಶಾನ, ಸುಭಾಷ್ ಮೈದಾನ ಸೇರಿದಂತೆ ಹಲವಡೆ ಕಾಗೆಗಳು 15 ದಿನಗಳಿಂದ ಸಾಮೂಹಿಕವಾಗಿ ಸಾವನ್ನಪ್ಪುತ್ತಿದ್ದು ಜನರನ್ನು ಭಯಬೀತಗೊಳಿಸಿದೆ.
undefined
ಬೆಂಗಳೂರು-ಗೋವಾ ರೈಲು: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ಎಲ್ಲೆಲ್ಲಿ..?
ಮೊದಲಿಗೆ ಒಂದೆರಡು ಕಾಗೆಗಳು ಸಾವನ್ನಪ್ಪಿದ್ದು ಜನ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಯಾವಾಗ ಕಾಗೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುವುದು ಪ್ರಾರಂಭವಾಯಿತೋ ಅಲ್ಲಿಂದ ಆತಂಕ ಆರಂಭವಾಯಿತು. ಹೇಮಾವತಿ ನದಿ ತೀರದ ಪಕ್ಕದ ಹಿಂದೂ ಸ್ಮಶಾನದಲ್ಲಿ ಪುರಸಭೆಯ ಕಸವನ್ನು ವಿಲೇವಾರಿ ಮಾಡಲಾಗುತ್ತಿದ್ದು ಇಲ್ಲಿ ಕಾಗೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದೆ.
ಇಲ್ಲಿ ಸಾವನ್ನಪ್ಪುವ ಕಾಗೆಗಳ ವೈರಾಣುಗಳು ಹೇಮಾವತಿ ನದಿ ಸೇರುವುದರಿಂದ ಈ ಕುರಿತು ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ. ಇದರಿಂದ ಯಾವುದೇ ರೀತಿಯ ಸಾಂಕ್ರಾಂಮಿಕ ರೋಗಗಳು ಹರಡದಂತೆ ಪುರಸಭೆ, ಆರೋಗ್ಯ ಇಲಾಖೆ, ಪಶು ವೈದ್ಯಕೀಯ ಸೇವಾ ಇಲಾಖೆ ಮುನ್ನೆಚ್ಚರಿಕೆವಹಿಸಬೇಕಾಗಿದೆ.
ಹಣ, ಚಿನ್ನ ಕದಿಯೋಕೆ ಬಂದವ್ರು ವಿದೇಶಿ ಮದ್ಯ ದೋಚಿದ್ರು..!
ಕಾಗೆಗಳ ಸಾವಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಕೇವಲ ಕಾಗೆಗಳು ಮಾತ್ರ ಸಾವನ್ನಪ್ಪುತ್ತಿದ್ದು ಒಂದು ಸತ್ತಿರುವ ಕಾಗೆ ಮತ್ತೊಂದು ಜೀವವಿರುವ ಕಾಗೆಯನ್ನು ಹಾಸನದ ಪಶು ವಿಜ್ಞಾನ ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಜ್ಞರ ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು ವೆಂಕಟೇಶ್ ಹೇಳಿದ್ದಾರೆ.