ಮೈಸೂರು (ಜೂ.28): ಕಳೆದ ಎರಡು ತಿಂಗಳಿಂದ ಲಾಕ್‌ಡೌನ್ ಆಗಿದ್ದ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣವು ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ (ಜೂ.28) ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಇದರೊಂದಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸಹ ಆರಂಭವಾಗುತ್ತಿದೆ.
ಹೌದು, ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ, ವಹಿವಾಟಿಗೆ ಅನುಮತಿ ಸಿಕ್ಕಿದ್ದು, ಶನಿವಾರ ಮತ್ತು ಭಾನುವಾರ ವಾರಾಂತ್ಯ ಕಪ್ರ್ಯೂ ಜಾರಿಯಲ್ಲಿ ಇರಲಿದೆ.
undefined
ಸೋಮವಾರದಿಂದ ಎಲ್ಲಾ ಅಗತ್ಯ ವಸ್ತುಗಳು ತಯಾರಿಕೆ ಮತ್ತು ಉತ್ಪಾದನ ಘಟಕಗಳು ಶೇ.50 ರಷ್ಟುನೌಕರರೊಂದಿಗೆ ಕಾರ್ಯಾರಂಭ ಮಾಡಬಹುದು. ಗಾರ್ಮೆಂಟ್ಸ್‌ಗಳು ಶೇ.30 ರಷ್ಟುನೌಕರರೊಂದಿಗೆ ಕಾರ್ಯಾರಂಭ, ಆಹಾರ, ಪಡಿತರ, ಹಣ್ಣು, ತರಕಾರಿ, ಮಾಂಸ, ಮೀನು, ಹಾಲು, ಪ್ರಾಣಿಗಳ ಆಹಾರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತೆಯೇ ರಸ್ತೆ ಬದಿ ವ್ಯಾಪಾರಕ್ಕೂ ಅವಕಾಶವಿದ್ದು, ದಿನದ 24 ಗಂಟೆಯೂ ಅಗತ್ಯ ವಸ್ತುಗಳನ್ನು ಹೋಂ ಡಿಲೇವರಿಗೆ ಅನುಮತಿ ನೀಡಲಾಗಿದೆ.
ಮೈಸೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ಕೆಎಸ್ಆರ್‌ಟಿಸಿ ..
ಎಲ್ಲಾ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ಇದ್ದು, ಅದಕ್ಕೆ ಸಂಬಂಧಿಸಿದ ಸಿಮೆಂಟ್, ಕಬ್ಬಿಣ ಮತ್ತಿತರ ವಸ್ತುಗಳ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಬೆಳಗ್ಗೆ 5 ರಿಂದ 10 ಗಂಟೆವರೆಗೆ ವಾಯುವಿಹಾರಕ್ಕೆ ಅವಕಾಶವಿದೆ. ಟ್ಯಾಕ್ಸಿ ಮ್ತತು ಆಟೋಗೆ ಮಧ್ಯಾಹ್ನ 2 ಗಂಟೆವರೆಗೆ ಅವಕಾಶವಿದ್ದು, ಇಬ್ಬರು ಪ್ರಯಾಣಿಕರನ್ನು ಮಾತ್ರ ಹೊಂದಿರಬೇಕು. ಉಳಿದಂತೆ ಸರ್ಕಾರದ ಎಲ್ಲಾ ಕಚೇರಿಗಳು ಕಾರ್ಯ ನಿರ್ವಹಿಸಲಿವೆ. ಕನ್ನಡಕದ ಅಂಗಡಿ, ಕೌಶಲ್ಯ ತರಬೇತಿಗೆ ಅವಕಾಶ ಇರುತ್ತದೆ.
ಬಸ್ ಸಂಚಾರ: ಕೆಎಸ್‌ಆರ್‌ಟಿಸಿ ಬಸ್ ಸಂಚಾರವು ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 6 ರಿಂದ ಮತ್ತೆ ಆರಂಭವಾಗಲಿದೆ. ಪ್ರತಿ ಬಸ್ ಸೀಟಿನ ಶೇ.50 ರಷ್ಟುಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಸಾರಿಗೆ ಸೇವೆಗಳನ್ನು ಅವಶ್ಯಕತೆಗೆ ಅನುಗುಣವಾಗಿ ನಗರ, ಸಾಮಾನ್ಯ, ಅಂತರ ಜಿಲ್ಲಾ ದೂರ ಮಾರ್ಗದಲ್ಲಿ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಾಗಿದೆ.
ಕೊರೋನಾ ಕಾರಣ ಕೆಲಸ ಇಲ್ಲ, ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ, ನೆರವಿನ ನಿರೀಕ್ಷೆಯಲ್ಲಿ 45 ಮೇದಾರ ಕುಟುಂಬ! ...
ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗೆ ಕೋವಿಡ್ ನೆಗೆಟೀವ್ ವರದಿ ಪಡೆದಿದ್ದು, ವ್ಯಾಕ್ಸಿನ್ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹಾಗೂ ಆಗಾಗ್ಗೆ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವಂತೆ ಸೂಚಿಸಲಾಗಿದೆ. ಕಾರ್ಯಾಚರಣೆಗೆ ನಿಯೋಜಿಸುವ ಎಲ್ಲಾ ವಾಹನಗಳನ್ನು ಮಾರ್ಗಕ್ಕೆ ನಿಯೋಜಿಸುವ ಮುನ್ನ ಹಾಗೂ ಮಾರ್ಗದಿಂದ ಹಿಂತಿರುಗಿದ ತಕ್ಷಣ ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಭಾನುವಾರ ವಾರಾಂತ್ಯ ಕಫä್ರ್ಯ ನಡುವೆಯೂ ಬಸ್ ನಿಲ್ದಾಣವನ್ನು ಸಿಬ್ಬಂದಿ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಿದ್ದಾರೆ. ಕಳೆದ 2 ತಿಂಗಳಿಂದ ಬಿಕೋ ಎನ್ನುತ್ತಿದ್ದ ಕೆಎಸ್‌ಆರ್‌ಟಿಸಿ ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸೋಮವಾರ ಬೆಳಗ್ಗೆ ಬಸ್‌ಗಳು ಪ್ರವೇಶಿಸಲಿವೆ. ಇದರಿಂದ ಬಡವರು, ಮಧ್ಯಮ ವರ್ಗದ ಜನ ಸಾಮಾನ್ಯರು ಒಂದೆಡೆಯಿಂದ ಮತ್ತೊಂದೆಡೆ ಹೋಗಿ ಬರಲು ಅನುಕೂಲವಾಗಲಿದೆ.