* ಆನೆಗೊಂದಿಯಲ್ಲಿ ಆನಂದಯ್ಯನ ಔಷಧ ವಿತರಣೆ
* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅನೆಗೊಂದಿ
* ಕೊರೋನಾ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ ಈ ಔಷಧಿ
ಗಂಗಾವತಿ(ಜೂ.28): ತಾಲೂಕಿನ ಆನೆಗೊಂದಿಯಲ್ಲಿ ಕೊರೋನಾ ಔಷಧ ಎಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನಲ್ಲಿ ಸಂಚಲನ ಸೃಷ್ಟಿಸಿದ ಅವರವನ್ನು ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಉಚಿತವಾಗಿ ವಿತರಣೆ ಮಾಡಿದ್ದಾರೆ.
ಆನೆಗೊಂದಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮದ ಜನರು ಆಗಮಿಸಿ ಔಷಧ ಪಡೆದರು. ರಂಗನಾಥ ದೇವಸ್ಥಾನದಲ್ಲಿ ಔಷಧ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಈ ಔಷಧಕ್ಕೆ ದ ಆಯುಷ್ ಇಲಾಖೆ ಪರವಾನಗಿ ನೀಡಿದೆ. ಇದರಿಂದ ಕೊರೋನಾ ನಿಯಂತ್ರಣವಾಗುವುದಲ್ಲದೆ, ಔಷಧ ಸೇವಿಸಿದವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಔಷಧ ಪಡೆದವರು ಒಂದು ಗಂಟೆಗಳ ಕಾಲ ಆಹಾರ ಸೇವನೆ ಮಾಡಬಾರದು, ಮೂರು ಗಂಟೆಗಳ ಕಾಲ ನಿದ್ದೆ ಮಾಡಬಾರದು. ಒಂದು ವಾರ ಮದ್ಯ, ಮಾಂಸ ಸೇವನೆ ಮಾಡಬಾರದು ಎಂದು ತಿಳಿಸಿದರು.
ಆನಂದಯ್ಯನ ಕೊರೋನಾ ಔಷಧಕ್ಕೆ ಮತ್ತೆ ಮುಗಿಬಿದ್ದ ಜನ!
ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧವಾಗಿದ್ದು, ಕೊರೋನಾ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಈ ಔಷಧವನ್ನು ಕೊರೋನಾದಿಂದ ತೀರಾ ಸಮಸ್ಯೆಯಾದ ರೋಗಿಗಳಿಗೆ ನೀಡಲಾಗಿದ್ದು, ಭಾರಿ ಪರಿಣಾಮಕಾರಿಯಾಗಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.