ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಹು ಖ್ಯಾತಿಯ ಸಾಹಿತಿ ಖಾಸಿಂಸಾಬ್ ಇನ್ನಿಲ್ಲ

By Suvarna News  |  First Published Sep 4, 2022, 9:01 AM IST

ಜಾನಪದ ಸಾಹಿತ್ಯದಲ್ಲಿ ಕೃಷಿ ಮಾಡಿ ಕಾಹು ಎಂದೇ ಹೆಸರುವಾಸಿಯಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಸಾಹಿತಿ ಖಾಸಿಂಸಾಬ್ ಹುಸೇನಸಾಬ್ ಇನ್ನಿಲ್ಲ. 
 


ವಿಜಯಪುರ, (ಸೆಪ್ಟೆಂಬರ್.04): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಸಾಹಿತಿ ಖಾಸಿಂಸಾಬ್ ಹುಸೇನಸಾಬ್ ಬಿಜಾಪುರ(88) ನಿಧನರಾಗಿದ್ದಾರೆ. 

ವಯೋ ಸಹಜ ಕಾಯಿಲೆ ಹಾಗೂ ಮೆದುಳಿಗೆ ಪಾರ್ಶ್ವವಾಯುವಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಕಾಹು ಭಾನುವಾರ ತಡರಾತ್ರಿ  ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ.

Tap to resize

Latest Videos

ವಿಜಯಪುರ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಾನಪದ ಸಾಹಿತ್ಯದಲ್ಲಿ ಕೃಷಿ ಮಾಡಿ ಕಾಹು ಎಂದೇ ಹೆಸರುವಾಸಿಯಾಗಿದ್ದರು. 1935 ಫೆಬ್ರವರಿ 4 ರಂದು ಜನಿಸಿದ್ದ ಕಾಹು 2003 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

ಮೃತರು ಇಬ್ಬರು ಪುತ್ರರು ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಾಸೀಮಸಾಬ ಹುಸೇನಸಾಬ ಬಿಜಾಪುರ ಅಗಲಿಕೆಯಿಂದ ಜಾನಪದ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಕಾಹು ಬಿಜಾಪುರ ಅಗಲಿಕೆಗೆ ಜಾನಪದ ಸಾಹಿತಿಗಳು  ಸಂತಾಪ ಸೂಚಿಸಿದ್ದಾರೆ.

click me!