ಶಿವಮೊಗ್ಗ ಇರಿತ ಕೇಸ್‌ ಆರೋಪಿಗೆ ಉಗ್ರ ನಂಟು, ಎನ್‌ಐಎ ತನಿಖೆ: ಆರಗ ಜ್ಞಾನೇಂದ್ರ

By Kannadaprabha News  |  First Published Sep 4, 2022, 8:28 AM IST

ಜಬೀವುಲ್ಲಾನ ಹಿನ್ನೆಲೆ ಅತ್ಯಂತ ಭಯಾನಕವಾಗಿದೆ. ಆತನಿಗೆ ವಿವಿಧ ಭಯೋತ್ಪಾದನೆ ಸಂಘಟನೆಗಳ ಜತೆಗೆ ಲಿಂಕ್‌ ಇರುವ ಮಾಹಿತಿಗಳು ಸಿಗುತ್ತಿವೆ. ಈ ಕುರಿತು ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ: ಆರಗ


ಶಿವಮೊಗ್ಗ(ಸೆ.04):  ಶಿವಮೊಗ್ಗ ಗಲಾಟೆ ವೇಳೆ ನಡೆದ ಚೂರಿ ಇರಿತ ಪ್ರಕರಣದ ಪ್ರಮುಖ ಆರೋಪಿ ಝಬೀವುಲ್ಲಾನಿಗೆ ಭಯೋತ್ಪಾದಕರ ಜತೆ ಸಂಬಂಧ ಇರುವ ಮಾಹಿತಿ ಬಹಿರಂಗವಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಶನಿವಾರ ಈ ವಿಚಾರವಾಗಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಜಬೀವುಲ್ಲಾನ ಹಿನ್ನೆಲೆ ಅತ್ಯಂತ ಭಯಾನಕವಾಗಿದೆ. ಆತನಿಗೆ ವಿವಿಧ ಭಯೋತ್ಪಾದನೆ ಸಂಘಟನೆಗಳ ಜತೆಗೆ ಲಿಂಕ್‌ ಇರುವ ಮಾಹಿತಿಗಳು ಸಿಗುತ್ತಿವೆ. ಈ ಕುರಿತು ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ. ಸದ್ಯದಲ್ಲೇ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದರು.

ಶಿವಮೊಗ್ಗ ಇದೀಗ ಸಂಪೂರ್ಣ ಶಾಂತಿಯುತವಾಗಿದೆ. ಆಗಾಗ ಆಕಸ್ಮಿಕ ಘಟನೆಗಳು ನಡೆಯುತ್ತವೆ ಅಷ್ಟೆಎಂದು ಅವರು ತಿಳಿಸಿದರು. ಸ್ವಾತಂತ್ರ್ಯ ದಿನಾಚರಣೆಯಂದು ಶಿವಮೊಗ್ಗದ ಅಮೀರ್‌ ಅಹಮ್ಮದ್‌ ಸರ್ಕಲ್‌ನಲ್ಲಿ ಸಾವರ್ಕರ್‌ ಹಾಗೂ ಟಿಪ್ಪು ಫ್ಲೆಕ್ಸ್‌ ವಿಚಾರವಾಗಿ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಗಲಾಟೆ ನಡೆದು, ಆ ಬಳಿಕ ಬಟ್ಟೆಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್‌ ಸಿಂಗ್‌ ಎಂಬ ವ್ಯಕ್ತಿಗೆ ಚೂರಿ ಇರಿದು ಹತ್ಯೆಗೆ ಯತ್ನಿಸಲಾಗಿತ್ತು. ಈ ಸಂಬಂಧ ಆರೋಪಿಗಳಾದ ಮೊಹಮ್ಮದ್‌ ಝಬೀವುಲ್ಲ, ನದೀಂ, ರೆಹಮಾನ್‌ ಮತ್ತು ಅಹಮದ್‌ ಎಂಬುವರನ್ನು ಬಂಧಿಸಲಾಗಿತ್ತು.

Tap to resize

Latest Videos

ಮುರುಘಾ ಶ್ರೀ ಬಂಧಿಸಲು ವಿಳಂಬವೇಕೆ? ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಿಷ್ಟು!

ಮುರುಘಾ ಶ್ರೀ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ಇಲ್ಲ: ಸಚಿವ ಜ್ಞಾನೇಂದ್ರ

ಶಿವಮೊಗ್ಗ: ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಚಿತ್ರದುರ್ಗ ಮುರುಘಾ ಶ್ರೀಗಳ ಪ್ರಕರಣದಲ್ಲಿ ಸರ್ಕಾರ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಪ್ರಕರಣ ವಿಚಾರವಾಗಿ ಸದ್ಯ ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿಗೆ ಏನನ್ನು ಹೇಳುವುದಿಲ್ಲ. ಮುರುಘಾ ಮಠಕ್ಕೆ ಸೂಕ್ತ ಬಂದೋಬಸ್‌್ತ ಕಲ್ಪಿಸಲಾಗಿದೆ. ಭದ್ರತೆಗೆ 7 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಸೆ.8ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಪ್ರಧಾನಿಯಾಗಿ ಏನು ಕೆಲಸ ಮಾಡಬೇಕೋ ಅದನ್ನು ಮೋದಿ ಮಾಡುತ್ತಾರೆ. ಪ್ರಧಾನಿ ಕುರಿತಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಸರಿಯಲ್ಲ. ಮಳೆ ಹಾನಿಗೆ ಸರ್ಕಾರ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಂಡಿದೆ ಎಂದು ತಿರುಗೇಟು ನೀಡಿದರು.

ಎನ್‌ಐಎಗೆ ಪ್ರೇಮ್‌ ಸಿಂಗ್‌ ಪ್ರಕರಣ:

ಶಿವಮೊಗ್ಗದ ಪ್ರೇಮ್‌ ಸಿಂಗ್‌ಗೆ ಚೂರಿ ಇರಿತ ಪ್ರಕರಣದ ಪ್ರಮುಖ ಆರೋಪಿ ಜಬೀವುಲ್ಲಾ ಎಂಬಾತನಿಗೆ ಇರುವ ಲಿಂಕ್‌ ಭಯಾನಕವಾಗಿದೆ. ಭಯೋತ್ಪಾದಕರ ಜೊತೆ ಸಂಬಂಧ ಇರುವುದು ಬಹಿರಂಗವಾಗುತ್ತಿದೆ. ಸದ್ಯದಲ್ಲೇ ಈ ಪ್ರಕರಣವನ್ನು ಎನ್‌.ಐ.ಎ.ಗೆ ಹಸ್ತಾಂತರ ಮಾಡಲಾಗುತ್ತಿದೆ. ಶಿವಮೊಗ್ಗ ಸಂಪೂರ್ಣ ಶಾಂತಿಯುತವಾಗಿದೆ. ಆಗಾಗ ಆಕಸ್ಮಿಕ ಘಟನೆಗಳು ನಡೆಯುತ್ತವೆ ಅಷ್ಟೇ. ಟೆರರಿಸ್ಟ್‌ ಜೊತೆ ಲಿಂಕ್‌ ಇದ್ದವರೊಂದಿಗೆ ಶಾಂತಿ ನಡಿಗೆ ನಡೆಸಲಿ ಎಂದು ಶಿವಮೊಗ್ಗದಲ್ಲಿ ಶಾಂತಿಗಾಗಿ ಕಾಲ್ನಡಿಗೆ ಜಾಥಾ ಕುರಿತು ಪ್ರತಿಕ್ರಿಯೆ ನೀಡಿದರು.
 

click me!