ಬೆಳಗಾವಿಯಲ್ಲಿ ಸಾವರ್ಕರ್ ಮೂರ್ತಿ ಪ್ರತಿಷ್ಠಾಪನೆ ಕಿಚ್ಚು ಮತ್ತೆ ಮುನ್ನೆಲೆಗೆ

By Suvarna News  |  First Published Sep 4, 2022, 8:39 AM IST

ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೋ ಅಭಿಯಾನ ಆಯ್ತು. ಇದೀಗ ಬೆಳಗಾವಿಯಲ್ಲಿ ವೀರ್ ಸಾವರ್ಕರ್ ಮೂರ್ತಿ ಪ್ರತಿಷ್ಠಾಪನೆಯ ಕಿಚ್ಚು ಹೊತ್ತಿಕೊಂಡಿದೆ.


ಬೆಳಗಾವಿ, (ಸೆಪ್ಟೆಂಬರ್.04): ಕರ್ನಾಟಕದಲ್ಲಿ ಒಂದಿಲ್ಲೊಂದು ಧಾರ್ಮಿಕ ವಿವಾದಗಳು ನಡೆಯುತ್ತಲೇ ಇವೆ. ಹಿಜಾಬ್, ಶಾಲಾ ಪಠ್ಯ, ಹಲಾಲ್ ಹೀಗೆ ನಾನಾ ವಿಚಾರದಲ್ಲಿ ಭಾರೀ ವಿವಾದಗಳು ಶುರುವಾಗಿ ತಣ್ಣಗಾಗಿವೆ. ಇದೀಗ ವೀರ್ ಸಾವರ್ಕರ್ ಬಗ್ಗೆ ಪರ-ವಿರೋಧ ಕಿಚ್ಚು ಜೋರಾಗಿದೆ.

ಹೌದು....ಹಿಂದೂ ಸಂಗಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ವೀರ ಸಾರ್ವಕರ್ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಎಂದು ಎಲ್ಲೆಡೆ ಅವರ ಬಗ್ಗೆ ಅಭಿಯಾನ ಶುರುಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಇತ್ತ ಕಾಂಗ್ರೆಸಸ್ ಹಾಗೂ ಎಡಪಂಥಿಯರು ವಿರೋಧಿಸುತ್ತಿದ್ದಾರೆ.

Tap to resize

Latest Videos

ಐತಿಹಾಸಿಕ ಬೆಳಗಾವಿ ಗಣೇಶೋತ್ಸವದಲ್ಲಿ 'ವೀರ್ ಸಾವರ್ಕರ್' ಹವಾ..!

ಬೆಳಗಾವಿಯಲ್ಲಿ ಸಾವರ್ಕರ್ ಮೂರ್ತಿ ಪ್ರತಿಷ್ಠಾಪನೆಯ ಕಿಚ್ಚು
ಯೆಸ್... ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೋ ಅಭಿಯಾನ ಆಯ್ತು. ಇದೀಗ ಬೆಳಗಾವಿಯಲ್ಲಿ ವೀರ್ ಸಾವರ್ಕರ್ ಮೂರ್ತಿ ಪ್ರತಿಷ್ಠಾಪನೆಯ ಕಿಚ್ಚು ಹೊತ್ತಿಕೊಂಡಿದೆ.

ಬೆಳಗಾವಿ ಹಿಂಡಲಗಾ ಜೈಲು ಎದುರು ಸಾವರ್ಕರ್ ಪುತ್ಥಳಿ ನಿರ್ಮಾಣ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು,  ಹಿಂಡಲಗಾ ಜೈಲಿನ ಎದುರು ಸಾವರ್ಕರ್ ಮೂರ್ತಿ ಪ್ರತಿಷ್ಠಾಪಿಸುತ್ತೇವೆ ಎಂದ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಹೇಳಿದ್ದಾರೆ.

ಹಿಂಡಲಗಾ ಗ್ರಾ.ಪಂ. ಅಧ್ಯಕ್ಷರು, ಸದಸ್ಯರ ಜೊತೆ ಮಾತನಾಡ್ತೀವಿ . ಹಿಂಡಲಗಾ ಗ್ರಾ.ಪಂ. ಅನುಮತಿ ಪಡೆದು ಸಾವರ್ಕರ್ ಮೂರ್ತಿ ಪ್ರತಿಷ್ಠಾಪನೆ ಮಾಡ್ತೀವಿ ಎಂದು ಹೇಳಿದರು.

 ಸಾವರ್ಕರ್‌ಗೂ ಬೆಳಗಾವಿ ನಂಟು
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ  ಸಾವರ್ಕರ್ 100 ದಿನ ಸೆರೆವಾಸ ಅನುಭವಿಸಿದ್ದಾರೆ ಎನ್ನಲಾಗಿದೆ.  1950ರಲ್ಲಿ ಪಾಕಿಸ್ತಾನ ಪ್ರಧಾನಿ ಲಿಯಾಕತ್ ಅಲಿ ಖಾನ್ ಭಾರತ ಭೇಟಿಯನ್ನು ವಿನಾಯಕ್ ದಾಮೋದರ್ ಸಾವರ್ಕರ್‌ ವಿರೋಧಿಸಿದ್ದರು. ಆ ವೇಳೆ ಮುಂಜಾಗ್ರತಾ ಕ್ರಮವಾಗಿ ಸಾವರ್ಕರ್‌ ನನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು.

100 ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿ ಇದ್ದ ಸಾವರ್ಕರ್, ಈ ವೇಳೆ ಬಾಂಬೆ ಹೈಕೋರ್ಟ್‌ಗೆ ಸಾವರ್ಕರ್ ಪುತ್ರನಿಂದ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾಗಿತ್ತು.ಬಳಿಕ  1950ರ ಜುಲೈ 13ರಂದು ಹಿಂಡಲಗಾ ಜೈಲಿನಿಂದ ವೀರ್ ಸಾವರ್ಕರ್ ಬಿಡುಗಡೆಗೊಂಡೆಯಾಗಿದ್ದರು.

ಇದರಿಂದ ಹಿಂದೂ ಸಂಘಟನೆಗಳು ಹಿಂಡಲಗಾ ಜೈಲು ಎದುರು ಪ್ರತಿ ವರ್ಷ ಸಾವರ್ಕರ್ ಜನ್ಮದಿನ ಹಾಗೂ ಸ್ಮೃತಿ ದಿನ(ಪುಣ್ಯ ತಿಥಿ) ಆಚಸುತ್ತವೆ. ಪ್ರತಿ ವರ್ಷ ಮೇ 28ರಂದು ಜನ್ಮದಿನ ಹಾಗೂ ಫೆಬ್ರವರಿ 26ರಂದು ಪುಣ್ಯತಿಥಿ ಆಚರಿಸಿಕೊಂಡು ಬರುತ್ತಿವೆ.

2016ರಲ್ಲಿ ಹಿಂಡಲಗಾ ಜೈಲಿನ ಎದುರು ಸಾವರ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಪ್ರತಿಭಟನೆಯೂ ನಡೆದಿತ್ತು. ಈಗ ಮತ್ತೆ ಹಿಂಡಲಗಾ ಜೈಲಿನ ಎದುರು ಸಾವರ್ಕರ್ ಮೂರ್ತಿ ಪ್ರತಿಷ್ಠಾಪನೆ ವಿಚಾರ ಮುನ್ನಲೆಗೆ ಬಂದಿದೆ.

click me!