ಶಿವಮೊಗ್ಗ: ತಾವರೆಕೊಪ್ಪದ ಟೈಗರ್ ಅಂಡ್ ಲಯನ್ ಸಫಾರಿಯ ಸಿಂಹ ಸಾವು

By Girish Goudar  |  First Published Jul 8, 2022, 9:52 PM IST

*  ಅನಾರೋಗ್ಯದಿಂದ ಸಾವನ್ನಪ್ಪಿದ 11 ವರ್ಷದ ಸಿಂಹ ಯಶವಂತ 
*  ಪ್ರೋಟೋಸ್​ವೊನ್​ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಯಶವಂತ 
*  ಕಳೆದ ವರ್ಷ ಕೂಡ ಸಫಾರಿಯ ಸಿಂಹವೊಂದು ಸಾವು ಕಂಡಿತ್ತು


ಶಿವಮೊಗ್ಗ(ಜು.08):  ಶಿವಮೊಗ್ಗದ ತಾವರೆಕೊಪ್ಪದ ಟೈಗರ್ ಅಂಡ್ ಲಯನ್ ಸಫಾರಿಯ 11 ವರ್ಷದ ಸಿಂಹ ಯಶವಂತ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. 

ಪ್ರೋಟೋಸ್​ವೊನ್​ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಯಶವಂತನ ಸಾವಿಗೆ ರಕ್ತಕಣದ ಕೊರತೆ ಕಾರಣದಿಂದಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ. 

Tap to resize

Latest Videos

BENGALURU CRIME NEWS: ಹರ್ಷ ಕೊಲೆ ಪ್ರಕರಣ: ವಿಚಾರಣಾ ಖೈದಿಗಳಿಂದ ವಿಡಿಯೋ ಕಾಲ್: FIR ದಾಖಲು

ಬೆಂಗಳೂರಿನ ಬನ್ನೇರುಘಟ್ಟದಿಂದ 10 ತಿಂಗಳ ಹಿಂದಷ್ಟೆ ಯಶವಂತ ನನ್ನು ಶಿವಮೊಗ್ಗದ ತಾವರೆಕೊಪ್ಪದ ಸಫಾರಿಗೆ  ಕರೆತರಲಾಗಿತ್ತು. ಕಳೆದ ವರ್ಷ ಕೂಡ ಸಫಾರಿಯ ಸಿಂಹವೊಂದು ಸಾವು ಕಂಡಿತ್ತು. ಇದೀಗ ಯಶವಂತನ ಸಾವಿನಿಂದ ಸಿಂಹದಾಮದಲ್ಲಿ ಸಿಂಹಗಳ ಸಂಖ್ಯೆ 4 ಕ್ಕೆ ಇಳಿಕೆ ಕಂಡಿದೆ. ಸಫಾರಿಯ ಬಹು ಆಕರ್ಷಣೆಯ ಯಶವಂತನ ಸಾವು ಪ್ರಾಣಿ ಪ್ರಿಯರಲ್ಲಿ ನೋವುಂಟು ಮಾಡಿದೆ.
 

click me!