ಲಿಂಗಸುಗೂರು ಪೊಲೀಸರಿಂದ ತಲೆಮರೆಸಿಕೊಂಡು ಓಡಾಡ್ತಿದ್ದ ಕಳ್ಳರ ಬಂಧನ: 16 ಬೈಕ್, ಚಿನ್ನಾಭರಣ ಜಪ್ತಿ

By Suvarna News  |  First Published Jul 28, 2022, 8:23 PM IST

ಜಿಲ್ಲೆ ಲಿಂಗಸೂಗೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಇಬ್ಬರು ಖದೀಮರನ್ನ ಬಂಧಿಸುವಲ್ಲಿ ಲಿಂಗಸೂಗೂರು ಪೊಲೀಸರು ಯಶಸ್ವಿಯಾಗಿದ್ದಾರೆ.


ರಾಯಚೂರು: ಜಿಲ್ಲೆ ಲಿಂಗಸೂಗೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಇಬ್ಬರು ಖದೀಮರನ್ನ ಬಂಧಿಸುವಲ್ಲಿ ಲಿಂಗಸೂಗೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ಭಾಗಿಯಾಗಿದ್ದ ನಾಲ್ಕು ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ. ಈ ಖದೀಮರು ಹಲವೆಡೆ ಕಳ್ಳತನ ಮಾಡಿ ವಿಜಯಪುರ ‌ಜಿಲ್ಲೆಯಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಹೀಗಾಗಿ ಪೊಲೀಸರು ‌ಎಷ್ಟೇ ಹುಡುಕಾಟ ನಡೆಸಿದರು. ಕಳ್ಳರ ಸುಳಿವು ಮಾತ್ರ ‌ಸಿಗುತ್ತಿರಲಿಲ್ಲ. 

ಸಿಸಿಟಿವಿ ನೀಡಿತ್ತು ಬೈಕ್ ಕಳ್ಳನ ಸುಳಿವು

Tap to resize

Latest Videos

ಲಿಂಗಸೂಗೂರು ಪಟ್ಟಣದಲ್ಲಿ ಬೈಕ್ ಕಳ್ಳತನ ಪ್ರಕರಣ ಆಗುವುದು ತೀರಾ ಕಡಿಮೆ. ಬೈಕ್ ಕಳ್ಳತನ ‌ಆಗಿದ್ರೆ ಪೊಲೀಸರು ನಿರಂತರವಾಗಿ ಬೈಕ್ ಕಳ್ಳನಿಗಾಗಿ ಹತ್ತಾರು ರೀತಿಯಲ್ಲಿ ತನಿಖೆ ನಡೆಸಿ ಖದೀಮರ ಹೆಡಮುರಿ ಕಟ್ಟುತ್ತಾರೆ. ಆದ್ರೆ ವಿಜಯಪುರ ಜಿಲ್ಲೆಯ ಬೈಕ್ ಕಳ್ಳನೊರ್ವ ಲಿಂಗಸೂಗೂರು ‌ಪಟ್ಣಣದಲ್ಲಿ ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿ ‌ಪೊಲೀಸರು ಆ ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಖದೀಮನನ್ನ ಬಂಧಿಸಿ ಠಾಣೆಗೆ ಎಳೆದು ತಂದು ಸತ್ಯ ಬಾಯಿ ಬಿಡಿಸಿದ್ದಾರೆ. ಆಗ ಕಳೆದ ಎರಡು ಮೂರು ವರ್ಷಗಳಿಂದ ಕಳವಾಗಿದ್ದ ಒಟ್ಟು 4 ಲಕ್ಷ  20 ಸಾವಿರ ಮೌಲ್ಯದ 16 ಬೈಕ್‌ಗಳನ್ನು ಲಿಂಗಸೂಗೂರು ಪೊಲೀಸರು ಈತನಿಂದ ಜಪ್ತಿ ಮಾಡಿದ್ದಾರೆ. ಈತ ಬೈಕ್ ಕಳ್ಳತನ ಮಾಡಿ  ಲಿಂಗಸೂಗೂರು ಸೇರಿದಂತೆ ಮೂರು ನಾಲ್ಕು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬೈಕ್ ಮಾರಾಟ ಮಾಡಿರುವುದಾಗಿ  ಬಾಯಿ ಬಿಟ್ಟಿದ್ದಾನೆ.

ಮನೆಗಳ್ಳನ ಬಂಧನ: 

ಲಿಂಗಸೂಗೂರು ‌ಪಟ್ಟಣದಲ್ಲಿ ಮನೆ ಕಳ್ಳತನ ಮಾಡಿಕೊಂಡು ‌ಬಿಂದಾಸ್ ಆಗಿ  ಓಡಾಟ ನಡೆಸುತ್ತಿದ್ದ‌ ಓರ್ವನನ್ನು ಸಣ್ಣ ಅನುಮಾನದ ಮೇಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಖದೀಮನ ನಿಜ ಬಣ್ಣ ಬಯಲಾಗಿದೆ. ಒಂದು ಲಾಡ್ಜ್ ಮತ್ತು ಎರಡು ಮನೆಗಳ್ಳತನ ಮಾಡಿದ ಈತ ಒಂದು ಮನೆ ಕಳ್ಳತನ ಪ್ರಕರಣದಲ್ಲಿ ಚಿನ್ನದ 2 ಅವಲಕ್ಕಿ ಸರ, ಒಂದು ಚೈನ್, ಒಂದು ಉಂಗುರು, ಒಂದು ಜುಮುಕಿ, 30 ತೊಲೆ ಬೆಳ್ಳಿ ಸೇರಿ ಒಟ್ಟು 1,90,000/- ಮೌಲ್ಯದ ಆಭರಣಗಳು ‌ಲೂಟಿ ಮಾಡಿದ್ದ.‌ ಮತ್ತೊಂದು ಮನೆ ಕಳ್ಳತನ ಪ್ರಕರಣದಲ್ಲಿ ಬಂಗಾರದ 4 ಬೋರಮಳ ಸರ, ಒಂದು ಚೈನ್ ಸೇರಿ ಒಟ್ಟು  80 ಸಾವಿರ ರೂಪಾಯಿ ಬೆಲೆ ಬಾಳುವುದನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ  ಲಾಡ್ಜ್‌ ಕಳ್ಳತನ ಪ್ರಕರಣದಲ್ಲಿಯೂ ಇದೇ ಆರೋಪಿ 11 ಸಾವಿರದ ಎರಡು ಮೊಬೈಲ್, 4,800 ರೂಪಾಯಿ ನಗದು ಕಳ್ಳತನ ಮಾಡಿದ್ದ ಎಂದು ತಿಳಿದು ಬಂದಿದೆ.  

ಪೊಲೀಸರ ಕಾರ್ಯಾಚರಣೆ ಬಗ್ಗೆ ಎಸ್‌ಪಿ ಪ್ರಶಂಸೆ ವ್ಯಕ್ತ: 

ಲಿಂಗಸೂಗೂರು ಪೊಲೀಸರು ಕಳೆದ ಎರಡು ವರ್ಷಗಳಿಂದ ಬೇಕಾದ ಮನೆ ಕಳ್ಳ ಮತ್ತು ಬೈಕ್ ಕಳ್ಳರನ್ನು ಬಂಧಿಸಿ ಖದೀಮರಿಂದ 7 ಲಕ್ಷ 5 ಸಾವಿರ 800 ರೂಪಾಯಿ ಜಪ್ತಿ ಮಾಡಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಲಿಂಗಸೂಗೂರು ಡಿವೈಎಸ್ ಪಿ ಮಂಜುನಾಥ, ಲಿಂಗಸೂಗೂರು ಪಿಐ ಮಹಾಂತೇಶ್ ಸಜ್ಜನ್, ಪಿಎಸ್ ಐ ಹನುಮಂತ ಹಾಗೂ  ಚನ್ನಪ್ಪ ಎ.ಎಸ್.ಐ, ಈರಣ್ಣ, ನಾಗರಾಜ,  ಚನ್ನಬಸವ, ಸೂಗುರಪ್ಪ,  ಬಸ್ಸಯ್ಯ, ಶಿವರಾಜ, ಚಂದ್ರಶೇಖರ ಪಾಟೀಲ್,  ಅಮರೇಶ ಕಂಡ್ರಿ, ಶ್ರೀಕಾಂತ್, ನಿಂಗಪ್ಪ,ಭೀಮಣ್ಣ, ಸಿದ್ದಪ್ಪ, ಸೋಮಪ್ಪ, ಅಮರೇಶ, ಗುರುರಾಜ, ಪರಶುರಾಮ, ರಾಮಪ್ಪ  ಸುಷ್ಮಾ, ಎ.ಅಜೀಂ (ತಾಂತ್ರಿಕ ಸಹಾಯಕ) ಕಾರ್ಯದ ಬಗ್ಗೆ ರಾಯಚೂರು ಎಸ್ ಪಿ ನಿಖಿಲ್ ಬಿ. ಲಿಂಗಸೂಗೂರು ಠಾಣೆಗೆ ಭೇಟಿ ‌ನೀಡಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಕಾರ್ಯಾಚರಣೆಯಲ್ಲಿ ತೊಡಗಿದ ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಿದರು.
 

click me!