ರಾಜ್ಯದಲ್ಲಿ ಕೋಮುವಾದಿ ಮಟ್ಟ ಹಾಕಲು ಯೋಗಿ ಮಾದರಿ ಆಡಳಿತ ಅಗತ್ಯ: ನಾರಾಯಣ ಸಾ ಭಾಂಡಗೆ

By Suvarna News  |  First Published Jul 28, 2022, 7:26 PM IST

ಹಿಂದೂ ಕಾರ್ಯಕರ್ತರನ್ನ ಹುಡುಕಿ ಕೊಲೆ ಮಾಡೋ ಧೈರ್ಯ ಉಗ್ರವಾದಿಗಳಿಗೆ ಹೇಗೆ ಬಂತು...? ಎಂದು ಬಾಗಲಕೋಟೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡ ಹೇಳಿಕೆ ನೀಡಿದ್ದಾರೆ. 
 


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, 

ಬಾಗಲಕೋಟೆ (ಜು.28): ರಾಜ್ಯದಲ್ಲಿ ಕೋಮುವಾದಿ, ರಾಷ್ಟ್ರ ವಿರೋಧಿಗಳ ಮಟ್ಟ ಹಾಕಲು ಉತ್ತರಪ್ರದೇಶದ  ಯೋಗಿ ಆದಿತ್ಯನಾಥ್ ಅವರ ಮಾದರಿ ಆಡಳಿತ ಅಗತ್ಯವಾಗಿ ಬೇಕಿದೆ ಎಂದು , ಹಿರಿಯ ಆರ್.ಎಸ್.ಎಸ್. ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು. ಅವರು ಬಾಗಲಕೋಟೆಯಲ್ಲಿ ಮಾದ್ಯಮಗಳೊಂದಿಗೆ ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಮ್ಮ ಪಕ್ಷದ ಕಾರ್ಯಕರ್ತರೇ ಬೇಜಾರುಗೊಂಡರೆ ನಾವು ಯಾರನ್ನ ಕಟ್ಟಿಕೊಂಡು ನಾವು ಪಕ್ಷ ಕಟ್ಟಬೇಕು. ಪ್ರತೀ ಸಲ ಹೇಳ್ತೀರಿ, ಆದ್ರೆ ತಾವು ಏನು  ಮಾಡ್ತೀರಿ ಎಂದು ತಮ್ಮ ಪಕ್ಷದ ಮುಖಂಡರಿಗೆ ಪ್ರಶ್ನಿಸಿದ ಅವರು, ಎಲ್ಲಿಯವರೆಗೆ ಒಂದೆರೆಡು ಎನ್  ಕೌಂಟರ್ ಆಗೋದಿಲ್ವೋ, ಕೋಮುವಾದಿ, ರಾಷ್ಟ್ರ ವಿರೋಧಿ, ಟೆರರಿಸ್ಟ್ ಗಳ ಮನೆ ಮೇಲೆ ಬುಲ್ಡೋಜರ್ ಹಾಕೋದಿಲ್ಲವೋ, ಅಲ್ಲಿಯವರೆಗೆ ಇಂತಹ ಘಟನೆ ನಿಲ್ಲೋದಿಲ್ಲ ಎಂದರು. ಇನ್ನು ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಯಾವ ರೀತಿ ಕಾನೂನು ತಂದಿದ್ದಾರೋ, ಅದನ್ನ ಕರ್ನಾಟಕದಲ್ಲಿ ತರಬೇಕು, ಅದೊಂದೇ ಉತ್ತರವಾಗಬೇಕು. ಕೋರ್ಟು ಕಚೇರಿ ಆಮೇಲೆ, ಗೂಂಡಾಗಿರಿ ಮಾಡುವವರಿಗೆ ಮೊದಲು ಗೊತ್ತಾಗಬೇಕು.

Tap to resize

Latest Videos

undefined

 ಕರ್ನಾಟಕದಲ್ಲಿ ಇಂತಹದ್ದಕ್ಕೆಲ್ಲಾ  ಅವಕಾಶ ಇಲ್ಲ ಅಂತ ಗೊತ್ತಾಗಬೇಕು, ಅದಕ್ಕೆ ಒಂದೆರಡು ಎನ್ ಕೌಂಟರ್ ಆಗಬೇಕು, ನಮ್ಮ ಆತ್ಮ ರಕ್ಷಣೆ ನಾವೇ ಮಾಡಿಕೊಳ್ಳುವ ಪರಿಸ್ಥಿತಿ ಇವತ್ತು ಬಂದಿದೆ. ಎಲ್ಲ ಕಡೆ ಪೊಲೀಸರು ಇರೋದಿಲ್ಲ. ಪ್ರತಿಯೊಬ್ಬ ಹಿಂದೂ ನಿಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳಲು ಸಿದ್ಧರಿರಬೇಕು. ಕಾನೂನು ಕೈಯಲ್ಲಿ ತೆಗೆದುಕೊಳ್ಳಬಾರದು ಅಂತ ಹೇಳ್ತಾರೆ ಆದರೆ ಮನೆಯವರೆಗೆ ಬಂದು ನನ್ನನ್ನು ಚುಚ್ಚಿ ಹೋದಾಗೂ ನಾನು ಕಾನೂನು ಕೈಗೆ ತೆಗೆದುಕೊಳ್ಳಬಾರದು ಅಂತ ಸುಮ್ನೆ ಕೂತರೆ ನನ್ನ ಚುಚ್ಚಿ ಹೋಗ್ತಾರೆ. ಅಂತಹ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಳ್ಳಬೇಕಾಗಿದೆ. ಮುಂದೆ ಬರೋ ದಿನಗಳು ಇನ್ನೂ ಕಠಿಣವಾಗಿವೆ ಎಂದರು.

ಕೇವಲ ಅಧಿಕಾರಕ್ಕಾಗಿ ಬಿಜೆಪಿ ಪಕ್ಷ ಕಟ್ಟಿಲ್ಲ ,ಜನರ ನಂಬಿಕೆ ಕಳೆದುಕೊಳ್ಳೋದು ಬೇಡ: ಕೇವಲ ಅಧಿಕಾರದಲ್ಲಿ ಇರಲು ಮಾತ್ರ   ಬಿಜೆಪಿ ಪಕ್ಷ ಕಟ್ಟಿಲ್ಲ ಎಂದ ನಾರಾಯಣಸಾ ಭಾಂಡಗೆ ಅವರು, ಹಿಂದುತ್ವ ಮತ್ತು ರಾಷ್ಟ್ರೀಯತೆ ಆಧಾರದ ಮೇಲೆ ಒಂದು ಪಕ್ಷ ಇರಬೇಕು ಅದಕ್ಕೆ ಬಿಜೆಪಿ ಕಟ್ಟಿದ್ದೇವೆ. ಈಗ ಜನ ನಮ್ಮನ್ನು ನಂಬಿದ್ದಾರೆ, ಕೇಂದ್ರ ಮತ್ತು ರಾಜ್ಯದಲ್ಲಿ ನಾವು ಅಧಿಕಾರದಲ್ಲಿ ಇದ್ದೇವೆ. ಈಗ ನಾವು ಜನರ ನಂಬಿಕೆ ಕಳೆದುಕೊಳ್ಳಬಾರದು. ಆದ್ರೆ ಕೆಲವರು ಲಕ್ ನಿಂದ ಬರ್ತಾರೆ ಅವರಿಗೆ ನೋವು ಗೊತ್ತಾಗಲ್ಲ ಎಂದು ಭಾಂಡಗೆ ಹೇಳಿದರು.

ಪ್ರವೀಣ್‌ ನೆಟ್ಟಾರು ಹತ್ಯೆಯಿಂದ ಭುಗಿಲೆದ್ದ ಆಕ್ರೋಶ; ಬಿಜೆಪಿ ಕಾರ್ಯಕರ್ತರು ಬೇರೆ ಪಕ್ಷಗಳಿಗೆ ಶಿಫ್ಟ್ ಆಗ್ತಾರಾ?

ಪ್ರವೀಣ್ ಹತ್ಯೆ ನಮ್ಮ ಕಣ್ಣಲ್ಲಿ ನೀರಲ್ಲ, ರಕ್ತ ತರಿಸ್ತಿದೆ: ಇನ್ನು ನಮ್ಮ ಬಿಜೆಪಿ ಪಕ್ಷದಲ್ಲಿ ಕೆಲವರು ಬೈ ಲಕ್ ನಿಂದ ಬಂದವರಿದ್ದಾರೆ, ಅವರಿಗೆ ಅಷ್ಟೊಂದು ನೋವಾಗೋದಿಲ್ಲ ಎಂದ ಸಂಘ ಪರಿವಾರದ ಹಿರಿಯ ನಾಯಕ ನಾರಾಯಣ್ ಸಾ ಭಾಂಡಗೆ, ಇದು ಆಕ್ರೋಶದಿಂದ ಅಲ್ಲ, ನಾಚಿಕೆ ಪಟ್ಟು ಇಂದು ಸುದ್ದಿಗೋಷ್ಠಿ ಕರೆದು ಹೇಳುತ್ತಿದ್ದೇನೆ ಎಂದರಲ್ಲದೆ, ಪ್ರವೀಣ್ ಹತ್ಯೆ ನಮ್ಮ ಕಣ್ಣಲ್ಲಿ ನೀರಲ್ಲ, ರಕ್ತ ತರಿಸ್ತಿದೆ. ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರ ಕೊಡುವ ಪರಿಸ್ಥಿತಿಯಲ್ಲಿ  ನಾವು ಇಲ್ಲ. ಈ ಹಿಂದೆ ಹರ್ಷನ ಹತ್ಯೆಯಾಯ್ತು, ನಂತ್ರ ಒಂದೇ ತಿಂಗಳಲ್ಲಿ ಪ್ರವೀಣ್ ನ ಹತ್ಯೆ ಆಯ್ತು. ಇದು ಪ್ರಿಪ್ಲಾನ್ ಮಾಡಿ ಮಾಡ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ. ಆದ್ರೂ ಹಿಂದೂ ಕಾರ್ಯಕರ್ತರನಮ ಹುಡುಕಿ ಕೊಲೆ ಮಾಡೋ ಧೈರ್ಯ ಉಗ್ರವಾದಿಗಳಿಗೆ ಹೇಗೆ ಬಂತು. ಪ್ರತಿ ಸಂಧರ್ಭದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಅಂತ ಸರ್ಕಾರ ಹೇಳುತ್ತೆ. ಆದ್ರೆ ಜನ ಕೇಳ್ತಾರೆ, ಕಾರ್ಯಕರ್ತರು ಕೇಳ್ತಾರೆ ಯಾವ ಕಠಿಣ ಕ್ರಮ ಕೈಗೊಂಡಿದ್ದೀರಿ ಅಂತ. ಈ ಪ್ರಶ್ನೆಗೆ ನಮ್ಮ ಬಳಿ ಉತ್ತರ ಇಲ್ಲ ಎಂದರು.

ಪ್ರವೀಣ್ ನೆಟ್ಟಾರು ಹತ್ಯೆ: ಇಬ್ಬರು ಪ್ರಮುಖ ಆರೋಪಿಗಳ ಬಂಧನ

ಬಿಜೆಪಿ ಹಿಂದುತ್ವದಿಂದ ಹಿಂದೆ ಸರೀತಿದೆ ಅನ್ನೋ ಭಾವನೆ ಕಾರ್ಯಕರ್ತರಲ್ಲಿ ಬರ್ತಿದೆ: ಹೌದು, ಬಿಜೆಪಿ ಹಿಂದುತ್ವದಿಂದ ಹಿಂದೆ ಸರಿಯುತ್ತಿದೆಯೇ ಅನ್ನೋ ಭಾವನೆ ಈಗ ಕಾರ್ಯಕರ್ತರಲ್ಲಿ ಬರ್ತಿದೆ, ಅದು ಸಹಜ ಕೂಡ ಇದೆ. ಅದಕ್ಕೆ ಕಾರಣ ನಮ್ಮ ಪಕ್ಷದಲ್ಲಿ ಆಯ್ಕೆಯಾದ ಅನೇಕ ಶಾಸಕರು, ಮಂತ್ರಿಗಳು ಪರಿವಾರದ ಹಿನ್ನೆಲೆಯಲ್ಲಿ ಬಂದವರಲ್ಲ, ಕೆಲವರಿಗೆ ಹಿಂದುತ್ವದ ಪರವಾಗಿ ಹೋರಾಟ ಮಾಡಿ ಗೊತ್ತಿಲ್ಲ, ಕಾರ್ಯಕರ್ತರ ಆಶೀರ್ವಾದದಿಂದ ಶಾಸಕರು, ಮಂತ್ರಿಗಳು ಆಗಿದ್ದೇವೆ. ಜೈಲಿಗೆ ಹೋಗಿ ಗೊತ್ತಿಲ್ಲ, ಹೋರಾಟ ಮಾಡಿ ಗೊತ್ತಿಲ್ಲ, ಪೊಲೀಸರ ಏಟು ತಿಂದಿಲ್ಲ, ಕೋರ್ಟ್ ಕೇಸ್ ಗಳಿಗೆ ಹೋಗಿಲ್ಲ. ಹೀಗಾಗಿ ಕಾರ್ಯಕರ್ತರಿಗೆ ಹಿಂದುತ್ವದಿಂದ ಹಿಂದೆ ಸರಿತಿದ್ದೀವಿ ಅನ್ನಿಸ್ತಿದೆ ಎಂದು ನಾರಾಯಣ್ ಸಾ ಭಾಂಡಗೆ ಹೇಳಿದರು.

click me!