ಅಖಂಡ ಭಾರತದ ಕನಸು ನನಸಿಗೆ ಪಣ ತೊಡಿ: ಜಗದೀಶ್‌ ಕಾರಂತ

Published : Aug 11, 2022, 01:11 PM IST
ಅಖಂಡ ಭಾರತದ ಕನಸು ನನಸಿಗೆ ಪಣ ತೊಡಿ: ಜಗದೀಶ್‌ ಕಾರಂತ

ಸಾರಾಂಶ

\ಅಖಂಡ ಭಾರತದ ಕನಸು ನನಸಿಗೆ ಪಣ ತೊಡುವಂತೆ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ್‌ ಕರೆ ನೀಡಿದ್ದಾರೆ. ವಿರಾಜಪೇಟೆಯಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ. ಹಿಂ.ಜಾ.ವೇ. ಸಹಸ್ರಾರು ಕಾರ್ಯಕರ್ತರು ಭಾಗಿ  

ವಿರಾಜಪೇಟೆ (ಆ.11) : ಅಖಂಡ ಭಾರತದ ಮೇಲೆ ಪರಕೀಯರಿಂದ ದಾಳಿಗಳು ನಡೆದು ದೇಶವು ವಿಭಜನೆಗೊಂಡಿತ್ತು. ಅಸಂಖ್ಯಾತ ದೇಶ ಭಕ್ತರು ಹರಿಸಿದ ನೆತ್ತರಕೊಡಿಯ ಋುಣವನ್ನು ತಿರಿಸುವಲ್ಲಿ ದೇಶಭಕ್ತ ಜಾಗೃತ ಹಿಂದೂ ಸಮಾಜವು ಒಂದಾಗುವ ಪಣತೊಡುವಂತೆ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ್‌ (Jagadeesh Karat)ಕರೆ ನೀಡಿದ್ದಾರೆ. ಹಿಂದೂ ಜಾಗರಣ ವೇದಿಕೆ ವಿರಾಜಪೇಟೆ ತಾಲೂಕು ಪ್ರಖಂಡದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಗರದಲ್ಲಿ ಏರ್ಪಡಿಸಲಾಗಿದ್ದ ಪಂಜಿನ ಮೆರವಣಿಗೆ ಮತ್ತು ತಾಲೂಕು ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮಕ್ಕೆ ಆಗಮಿಸಿ ದೀಪ ಬೆಳಗಿಸಿ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದರು.

Stop Illegal Mining: ದ.ಕ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಡಿ. ಸಿ ಕೊರಳ ಪಟ್ಟಿ ಹಿಡಿತೀವಿ: ಜಗದೀಶ್ ಕಾರಂತ್

 

ಯುವ ಪೀಳಿಗೆಗೆ ಸ್ವತಂತ್ರ ಪೂರ್ವ ಭಾರತದ ಹಿನ್ನಲೆ ತಿಳಿಸಿಕೊಡುವ ಮತ್ತು ಅಖಂಡ ಭಾರತವು ತುಂಡಾಗಿದ್ದು ಒಂದಾಗಿಸುವ ನಿಟ್ಟಿನಲ್ಲಿ ಹಿಂದೂ ಸಮಾಜವು ಜಾಗೃತರಾಗಿ ಒಂದಾಗಿಸುವ ಸಂಕಲ್ಪಕ್ಕಾಗಿ ಅಖಂಡ ಭಾರತ ಸಂಕಲ್ಪ ದಿನವನ್ನು ಹಿಂದೂ ಜಾಗರಣ ವೇದಿಕೆಯು ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದೆ. ಅಸಂಖ್ಯಾತ ದೇಶ ಭಕ್ತರು ಪ್ರಾಣ ತ್ಯಾಗ ಮಾಡಿದ ಪರಿಣಾಮ ಇಂದು ಸ್ವತಂತ್ರ ಭಾರತದಲ್ಲಿ ನಾವಿದ್ದೇವೆ ಎಂದರು.

ದೇಶದ್ರೋಹಿಗಳನ್ನು ಹುಟ್ಟಡಗಿಸಿ, ದೇಶ ವಿರೋಧಿ ಘೋಷಣೆಗಳು ಮೊಳಗದಂತೆ, ಪ್ರತಿಯೊಬ್ಬ ನಾಗರಿಕನು ಜಾಗೃತನಾಗಬೇಕು. ಪ್ರತಿಯೋಬ್ಬ ನಾಗರಿಕನೂ ಸಂಘಟಿತರಾಗಬೇಕು. ಮೂರನೆ ತಲೆಮಾರಿನ ಕುಟುಂಬದ ಅಂಗಗಳಿಗೆ ಸುರಕ್ಷಿತವಾದ ಸಮಾಜದ ನಿರ್ಮಾಣಕ್ಕೆ ಪಣ ತೊಡುವ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸೇನಾಧಿಕಾರಿ, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ ಮಾತನಾಡಿ, ಕಾಶ್ಮೀರವು ಎಂದಿಗೂ ದೇಶದ ಮುಕುಟವೇ. ಅದನ್ನೂ ಮರಳಿ ಪಡೆಯುವ ಎಲ್ಲಾ ಶಕ್ತಿಯು ದೇಶದ ಬಳಿಯಲ್ಲಿವೆ. ದೇಶದ ಜನತೆಯು ಸಹಕಾರ ನೀಡುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಎಂದರು.

ಹಿಂದೂ ಜಾಗರಣ ವೇದಿಕೆ(Hidu Jagaran Vedike)ಯಿಂದ ಹಮ್ಮಿಕೊಳ್ಳಲಾದ ಪಂಜಿನ ಮೆರವಣಿಗೆ ಸಂಜೆ 6.30ಕ್ಕೆ ತೆಲುಗರ ಬೀದಿ ಮಾರಿಯಮ್ಮ ದೇಗುಲದಿಂದ ಆರಂಭವಾಗಿ ಮುಖ್ಯ ರಸ್ತೆಗಳಾಗಿ ಸಂಚರಿಸಿ 7.30 ಕ್ಕೆ ತಾಲೂಕು ಮೈದಾನದಲ್ಲಿ ಮುಕ್ತಾಯ ಕಂಡಿತು. ಸಮಾರಂಭದ ವೇದಿಕೆಯಲ್ಲಿ ಮಡಿಕೇರಿ ಜಿಲ್ಲಾ ಸಹ ಸಂಯೋಜಕ್‌ ಚೇತನ್‌, ಸಿದ್ದಾಪುರ ತಾಲೂಕು ಸಂಯೋಜಕ್‌ ಅನಿಲ್‌ ಇದ್ದರು. ಅನಿಮೋಳ್‌ ರಾಜೇಶ್‌ ಅಚಾರ್ಯ ಪ್ರಾರ್ಥಿಸಿದರು. ನಗರ ಸಂಯೋಜಕ್‌ ದಿನೇಶ್‌ ನಾಯರ್‌ ಸ್ವಾಗತಿಸಿದರು. ಪ್ರಾಂತ ಕಾರ್ಯಕಾರಿಣಿ ಸದಸ್ಯ ಜೀವನ್‌ ನಿರೂಪಿಸಿದರು. ಶ್ರಾವ್ಯ ಕೆ.ಪಿ. ಮತ್ತು ನವ್ಯ ಕೆ. ವಂದೇ ಮಾತರಂ ಹಾಡಿದರು. ಜಿಲ್ಲಾ ಸಹ ಸಂಯೋಜಕ್‌ ಮಂಜುನಾಥ್‌ ವಂದಿಸಿದರು.

Hindu Leader in Trouble : ದಕ್ಷಿಣ ಕನ್ನಡ ಡಿಸಿಯಿಂದ ಹಿಂದೂ ಮುಖಂಡ ಕಾರಂತ್ ವಿರುದ್ಧ ದೂರು

ಜಿಲ್ಲಾ ಸಹ ಸಂಯೋಜಕ್‌ ಯೋಗೇಶ್‌, ಮಡಿಕೇರಿ ಹಿಂದೂ ಯುವ ವಾಹಿನಿ ಜಿಲ್ಲಾ ಸಂಯೋಜಕ್‌ ವಿನಯ್‌, ಜಿಲ್ಲಾ ಮಾತೃ ಸುರಕ್ಷಾ ಸಹ ಸಂಯೋಜಕ್‌ ಸುನೀಲ್‌ ಮಾದಾಪುರ ಮತ್ತಿತರರು ಹಾಜರಿದ್ದರು.

PREV
Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!