ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಆ.11) : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನರು ತತ್ತರಿಸಿಹೋಗುತ್ತಿದ್ದಾರೆ. ಕೆರೆ ಕಟ್ಟೆಗಳು ತುಂಬಿ ಜಮೀನುಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ. ರೈತರು ಜಮೀನುನಲ್ಲಿ ಬೆಳೆದ ಬೆಳೆ ಕಳೆದುಕೊಂಡು ಮನೆಯೂ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದಿದ್ದಾರೆ ಇಂಥ ಪರಿಸ್ಥಿತಿಯಲ್ಲಿ ಹಳ್ಳಿಗಳಿಗೆ ಕಾಡಾನೆಗಳು ನುಗ್ಗಿ ದಂಧಲೆ ಎಬ್ಬಿಸಿವೆ. ಕಾಡಾನೆ ಕಾಟವೂ ಜಾಸ್ತಿಯಾಗಿದ್ದು ಮಲೆನಾಡಿನ ಜನರು ಬದುಕು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ...
ಕಾಡಾನೆ ದಾಳಿ : ಬೈಕ್ ಬಿಟ್ಟೋಡಿ ಪ್ರಾಣ ಉಳಿಸಿಕೊಂಡ ಸವಾರ
ಕಾಡಾನೆಗಳಪುಂಡಾಟ :ಕಾರಿನಲ್ಲಿದ್ದವರುವ ಪಾರು: ಕಾಫಿನಾಡಿನಲ್ಲಿ ಕಾಡಾನೆಗಳ(Wild Elephants) ಪುಂಡಾಟ ಮುಂದುವರೆದಿದ್ದು ಕಾರಿನಲ್ಲಿ ಹೋಗುತಿದ್ದವರನ್ನು ಕಾಡಾನೆಯೊಂದು ಅಟ್ಟಾಡಿಸಿಕೊಂಡು ಹೋದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ(Devaramane) ಬಳಿ ನಡೆದಿದೆ. ಜಿಲ್ಲೆಯಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ಕಾಫಿ, ಅಡಿಕೆ ಕೃಷಿ ತೋಟಗಳನ್ನು ಪುಡಿಗಟ್ಟಿವೆ ಅಲ್ಲದೆ ಮೂಡಿಗೆರೆ(Mudigere) ತಾಲೂಕಿನ ದೇವರಮನೆ ಬಳಿ ಕಾಡಾನೆಯೊಂದು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರನ್ನು ಬೆನ್ನಟ್ಟಿದೆ ಈ ವೇಳೆ ಕಾರು ಚಾಲಕ ಪ್ರಾಣಾಪಾಯದಿಂದ ಕಾರು ಚಲಾಯಿಸಿ ರಕ್ಷಣೆಗೆ ಮುಂದಾಗಿದ್ದಾನೆ ಆದರೆ ಚಾಲಕನ ನಿಯಂತ್ರಣ ತಪ್ಪಿ ಕಾರು ಚರಂಡಿಗೆ ನುಗ್ಗಿದೆ ಕಾರಿನಲ್ಲಿದ್ದ ಚಾಲಕ ಸೇರಿ ಒಟ್ಟು ಮೂವರು ಅಲ್ಲಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ.
ಚಿತೆ ಮೇಲಿದ್ದ ಮಹಿಳೆಯ ಶವ ಎತ್ತಿ ನೆಲಕ್ಕೆ ಬಡಿದು, ಕಾಲಿನಿಂದ ತುಳಿದ ಕಾಡಾನೆ!
ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ : ಕಾಡಾನೆಗಳ ಹಿಂಡು ಪ್ರತ್ಯಕ್ಷ\ ಮೂಡಿಗೆರೆ ತಾಲೂಕಿನ ಹಾಂದಿ, ವಿಜಯನಗರ, ಹೊಸಪೇಟೆ ಸುತ್ತಮುತ್ತ ಇಂದು ಮುಂಜಾನೆ 13 ಕಾಡಾನೆ ಲಗ್ಗೆ ಇಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಕಾಫಿ, ಅಡಿಕೆ ತೋಟಗಳಿಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಕೃಷಿ, ಬೆಳೆ ನಾಶ ಮಾಡಿದೆ.ಇದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಿಡಿಕಾರಿದ್ದಾರೆ.ಕಳೆದ ಹಲವು ದಿನಗಳಿಂದ ಕಾಡಾನೆಗಳು ದಾಳಿ ನಡೆಸುತ್ತಿದ್ದು ಆನೆಗಳ ದಾಳಿ ತಡೆಗೆ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳದಿರುವುದರಿಂದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.