ತಜ್ಞರ ಜತೆ ಚರ್ಚಿಸಿ ನೂತನ ಶಿಕ್ಷಣ ನೀತಿಯಲ್ಲಿನ ದೋಷ ಸರಿಪಡಿಸಲಿ: ಎಚ್‌.ಕೆ.ಪಾಟೀಲ್‌

By Govindaraj S  |  First Published Jan 13, 2023, 11:33 PM IST

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಲೋಪ-ದೋಷಗಳನ್ನು ಶಿಕ್ಷಣ ತಜ್ಞರ ಹಾಗೂ ಶಿಕ್ಷಕರ ಸಂಘಟನೆಗಳೊಂದಿಗೆ ಚರ್ಚೆ ಮಾಡಿ ಸರಿಪಡಿಸಬೇಕು. ಇದರಲ್ಲಿ ಸಂಘಟನೆಯ ಹಾಗೂ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ ಎಂದು ಗದಗ ಶಾಸಕರಾದ ಎಚ್‌.ಕೆ. ಪಾಟೀಲ ಹೇಳಿ​ದರು.


ಗದ​ಗ (ಜ.13): ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಲೋಪ-ದೋಷಗಳನ್ನು ಶಿಕ್ಷಣ ತಜ್ಞರ ಹಾಗೂ ಶಿಕ್ಷಕರ ಸಂಘಟನೆಗಳೊಂದಿಗೆ ಚರ್ಚೆ ಮಾಡಿ ಸರಿಪಡಿಸಬೇಕು. ಇದರಲ್ಲಿ ಸಂಘಟನೆಯ ಹಾಗೂ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ ಎಂದು ಗದಗ ಶಾಸಕರಾದ ಎಚ್‌.ಕೆ. ಪಾಟೀಲ ಹೇಳಿ​ದರು. ನಗರದ ಕನಕ ಭವನದಲ್ಲಿ ಆಯೋಜನೆ ಮಾಡಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಹಾಗೂ ಗದಗ ತಾಲೂಕು ಗ್ರಾಮೀಣ ಘಟಕದ ವತಿಯಿಂದ, ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚರಣೆ ಅಂಗವಾಗಿ, ಶೈಕ್ಷಣಿಕ ಕಾರ್ಯಗಾರ, ಶೈಕ್ಷಣಿಕ ಆ್ಯಪ್‌ ಬಿಡುಗಡೆ, ಪ್ರತಿಭಾ ಪುರಸ್ಕಾರ ಹಾಗೂ ಅಕ್ಷರ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿವೇಕಾನಂದರ ಜಯಂತಿ ದಿನ ಏರ್ಪಡಿಸಿದ್ದು ಸಂತೋಷದ ವಿಚಾರವಾಗಿದೆ. ನಮ್ಮ ತಾಲೂಕಿನ ಶಿಕ್ಷಕರಿಗೆ ಯಾವುದೇ ಶೋಷಣೆ, ದೋಷಣೆ ಇಲ್ಲ. ತಾಲೂಕಿನ ಎಲ್ಲ ಶಿಕ್ಷಕರಿಗೂ ಕೆಲಸ ಮಾಡಲು ಮುಕ್ತ ವಾತಾವರಣವಿದೆ. ಅಧಿಕಾರಿಗಳಿಂದ ಒತ್ತಡ ಇದ್ದರೆ, ನಿಮ್ಮ ಸ್ನೇಹಿತನಾಗಿ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದು ಅಭಯ ನೀಡಿದರು. ಹಕ್ಕುಗಳನ್ನು ರಕ್ಷಿಸುವ ಸಂಘಟನೆಗಳಿಗೆ ಸದಾ ನಮ್ಮ ಬೆಂಬಲ ಇರುತ್ತದೆ. ಶಿಕ್ಷಣದ ಬಗ್ಗೆ ಸಂಘಗಳು ವಿಚಾರ ಮಾಡಬೇಕು. ಶಿಕ್ಷಕರಿಗೆ ಸಮಾಜದಲ್ಲಿ ಅತ್ಯುತ್ತಮ ಸ್ಥಾನವಿದೆ. ಹೀಗಾಗಿ ಒಬ್ಬ ಶಿಕ್ಷಕ ಒಂದು ಸುಭದ್ರ ದೇಶವನ್ನು ಕಟ್ಟುವಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾನೆ ಎಂದು ತಿಳಿ​ಸಿ​ದ​ರು

Tap to resize

Latest Videos

undefined

ಕೇಂದ್ರ, ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಶಾಸಕಿ ರೂಪಾಲಿ

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮಾತನಾಡಿ, ಶಿಕ್ಷಕರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡಬೇಕು. ಬಿಸಿಯೂಟ ಹಾಗೂ ಅನೇಕ ಹೆಚ್ಚುವರಿ ಕೆಲಸಗಳಿಂದ ಮುಕ್ತಗೊಳಿಸಿ ಮಕ್ಕಳಿಗೆ ಸರಿಯಾಗಿ ಬೋಧನೆ ಮಾಡುವ ಮೂಲಕ ಜೀವನ ರೂಪಿಸಲು ಅವರಿಗೆ ಅವಕಾಶ ನೀಡಿ. ಶಿಕ್ಷಕರ ವೇತನ ತಾರತಮ್ಯ ನಿವಾರಿಸಬೇಕು ಎಂದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಶಿಕ್ಷಕರು ಕೊಠಡಿಯಲ್ಲಿ ನಿರ್ಭಯವಾಗಿ ಭೋದನೆ ಮಾಡಬೇಕಾದರೆ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಇಲಾಖೆ, ಸರ್ಕಾರ ಸರಿಪಡಿಸಬೇಕು. 

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶಿಕ್ಷಕರ ಸಂಘಟನೆಯೊಂದಿಗೆ ಚರ್ಚಿಸಿ ನಿರ್ಧರಿಸಬೇಕು. ಸರ್ಕಾರಿ ಶಾಲೆಗಳು ಹೊಸ ಯೋಜನೆಗಳಿಗೆ ಪ್ರಯೋಗ ಶಾಲೆಗಳಾಗಿವೆ. ಖಾಸಗಿ ಶಾಲೆಗಳಲ್ಲೂ ಪ್ರಯೋಗಿಸಬೇಕು ಎಂದು ತಿಳಿ​ಸಿ​ದ​ರು. ಸಾನಿಧ್ಯ ವಹಿಸಿದ್ದ ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮಿಗಳು ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ಕೇವಲ ಒಬ್ಬ ಶಿಕ್ಷಕಿಯಾಗಿರದೇ ಸಮಾಜದ ಒಳಿತನ್ನು ಬಯಸುವ, ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಸಮ ಸಮಾಜದ ಸಂದೇಶ ಸಾರಿದವರು ಎಂದ​ರು. ಈ ವೇಳೆ ಸುಧಾ ಹುಚ್ಚಣ್ಣವರ ಮಾತನಾಡಿದರು. ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಅಕ್ಷರ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಜ.19ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ: ಸಚಿವ ಆರ್.ಅಶೋಕ್‌ರಿಂದ ಪೂರ್ವಸಿದ್ಧತೆ ಪರಿಶೀಲನೆ

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ, ಬಸವರಾಜ ಗುರಿಕಾರ, ಉಪನಿರ್ದೇಶಕ ಬಸವಲಿಂಗಪ್ಪ, ಶರಣ ಬಸನಗೌಡ ಪಾಟೀಲ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗದಗ ಗ್ರಾಮೀಣ ಅಧ್ಯಕ್ಷ ಶಿವಯೋಗಿ ಆರ್‌.ಬಂಡಿ, ಬಾರಾಟಕೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ, ಜೆ.ಎ. ಬಾವಿಕಟ್ಟಿ, ಜಿ.ಎಸ್‌. ಗೌಡರ, ಮಹೇಶ ಕುರಿ, ವಿ.ಎ. ಹಾದಿಮನಿ, ಎಸ್‌.ಟಿ. ಸಜ್ಜನರ, ಎಸ್‌.ಕೆ. ಮಂಗಳಗುಡ್ಡ, ಎಸ್‌.ಎಫ್‌. ಮಠದ, ಎಸ್‌.ವಿ. ಕ್ಯಾಮನಗೌಡ್ರ, ಎಸ್‌.ಡಿ. ಗುಂಜಳ, ಐ.ಕೆ. ಮೋಟಗಿ, ಪಿ.ವಿ. ಬೇವಿನಮರದ, ಎನ್‌.ಆರ್‌. ಶೈಲಾ, ಪಿ.ಎಸ್‌. ಮುಧೋಳಮಠ ಸೇರಿದಂತೆ ತಾಲೂಕಿನ ಶಿಕ್ಷಕರು ಉಪಸ್ಥಿತರಿದ್ದರು.

click me!