ಮೀಸಲಾತಿ ನೀಡದಿದ್ದರೆ ಸಿಎಂ ನಿವಾಸ ಮುಂಭಾಗ ಧರಣಿ: ಜಯಮೃತ್ಯುಂಜಯ ಸ್ವಾಮೀಜಿ

By Govindaraj S  |  First Published Jan 13, 2023, 11:13 PM IST

ಸಿಎಂ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದೆ 2ಡಿ ಮೀಸಲಾತಿ ನೀಡಿ ಸಮಾಜದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಪಂಚಮಸಾಲಿ ಸಮಾಜದ ಕೂಡಲಸಂಗಮದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರದ ವಿರುದ್ಧ ಕಿಡಿಕಾರಿದರು. 


ಹಗರಿಬೊಮ್ಮನಹಳ್ಳಿ (ಜ.13): ಸಿಎಂ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದೆ 2ಡಿ ಮೀಸಲಾತಿ ನೀಡಿ ಸಮಾಜದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಪಂಚಮಸಾಲಿ ಸಮಾಜದ ಕೂಡಲಸಂಗಮದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಪಟ್ಟಣದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಭದ್ರವಾಡಿ ಚಂದ್ರಶೇಖರ ನಿವಾಸದ ಮುಂಭಾಗ ನಡೆದ ಪಂಚಮಸಾಲಿ ಸಮುದಾಯದ ಸಭೆಯಲ್ಲಿ ಮಾತನಾಡಿದರು. ಜ.12ರಂದು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಗಡುವು ನೀಡಲಾಗಿದೆ. 

ಸರ್ಕಾರ ಗಡುವು ಮೀರಿದರೆ, ಜ.13ರಂದು ಸಿಎಂ ಬಸವರಾಜ ಬೊಮ್ಮಾಯಿಯವರ ಶಿಗ್ಗಾವಿಯ ನಿವಾಸದ ಮುಂಭಾಗ ಸಮಾಜದವರೊಂದಿಗೆ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು. ವಿಧಾನಸಭಾ ಚುನಾವಣೆ ಘೋಷಣೆ ಒಳಗೆ ಸಮುದಾಯಕ್ಕೆ ಮೀಸಲಾತಿ ಆದೇಶ ಪತ್ರ ವಿತರಿಸಬೇಕು. ಮಾತು ಮೀರಿದರೆ ರಾಜ್ಯದ ಪಂಚಮಸಾಲಿ ಸಮುದಾಯ ಈಗೀರುವ ಸರ್ಕಾರದ ವಿರುದ್ಧ ತಿರುಗಿ ಬೀಳಬೇಕಾಗುತ್ತದೆ. ರಾಜ್ಯದ ಜನತೆ ಸರ್ಕಾರದ ವಿರುದ್ಧ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕಾಗುತ್ತದೆ. 2ಡಿ ಮೀಸಲಾತಿಯಿಂದ ಪಂಚಮಸಾಲಿ ಸಮಾಜಕ್ಕೆ ಅನುಕೂಲ ಇಲ್ಲದಿದ್ದರಿಂದ ಸಮಾಜದದವರು ಎಲ್ಲಿಯೂ ಸಂಭ್ರಮಾಚರಣೆ ಮಾಡಿಲ್ಲ. ಮೀಸಲಾತಿ ವಿಚಾರದಲ್ಲಿ ಸಮಾಜವನ್ನು ರಾಜ್ಯ ಸರ್ಕಾರ ಕಡೆಗಣಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹರಿಹಾಯ್ದರು.

Tap to resize

Latest Videos

undefined

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿ: ವಚನಾನಂದ ಸ್ವಾಮೀಜಿ

ಹೂವಿನಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ಪಂಚಮಸಾಲಿ ಸಮುದಾಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ. ಸಮಾಜಕ್ಕೆ 2ಎ ಮೀಸಲಾತಿ ಕಡ್ಡಾಯವಾಗಿ ಬೇಕಾಗಿದೆ. ಸಮಾಜವನ್ನು ಸುಮ್ಮನಿರಿಸುವ ಸಲುವಾಗಿ ಸರ್ಕಾರ 2ಡಿ ಮೀಸಲಾತಿ ನೀಡಿ ಕೈತೊಳೆದು ಕೊಂಡಿರುವುದು ಸಮಂಜಸವಲ್ಲ. ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ, ಸರ್ಕಾರ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ಸಮಾಜದ ಜಿಲ್ಲಾಧ್ಯಕ್ಷ ಭದ್ರವಾಡಿ ಚಂದ್ರಶೇಖರ,ಹರಪನಹಳ್ಳಿ ವೀರಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜದ ಕುಂಚೂರು ಕೊಟ್ರೇಶ, ಎಚ್‌.ಎ.ಕೊಟ್ರೇಶ, ಚಿತ್ತವಾಡ್ಗಿ ಪ್ರಕಾಶ್‌, ನೇತಾಜಿಗೌಡ್ರು,ವೀರೇಶ್‌ ನಂದಿ,ಉಮಾಶಂಕರ, ಕೊಟ್ಟೂರು ಶಿವಣ್ಣ, ನರೇಗಲ್‌ ಮಲ್ಲಿಕಾರ್ಜುನ,ಗಂಗಾಧರಗೌಡ, ಮೋರಿಗೇರಿ ವಿಶ್ವನಾಥ,ವಿಜಯಕುಮಾರ,ಅಶೋಕ ಇತರರಿದ್ದರು.ಇಟಿಗಿ ಗುರುಬಸವರಾಜ ನಿರ್ವಹಿಸಿದರು.

2ಎ ಮೀಸಲಿಗಾಗಿ ಬೃಹತ್‌ ಜಾಗೃತಿ ಸಮಾವೇಶ: ಸಮಸ್ತ ವೀರಶೈವ ಲಿಂಗಾಯತ ಒಳ ಪಂಗಡಗಳಿಗೆ ಕೇಂದ್ರದಲ್ಲಿ ಒಬಿಸಿ ಹಾಗೂ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಬೃಹತ್‌ ಜನಜಾಗೃತಿ ಸಮಾವೇಶಗಳು ಈ ಬಾರಿಯ ಹರಜಾತ್ರೆಯ ಪ್ರಮುಖ ವಿಷಯ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಹೇಳಿದರು. ಪಂಚಮಸಾಲಿ ಪೀಠದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹರಜಾತ್ರಾ ಮಹೋತ್ಸವದ ಪೂರ್ವಸಿದ್ಧತೆ ಬಗ್ಗೆ ಮಾತನಾಡಿ ಜ.14 ಮತ್ತು 15ರಂದು ಜರುಗುವ ಹರ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭಾಗವಹಿಸಲಿದ್ದಾರೆ ಎಂದರು.

ಕೇಂದ್ರ, ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಶಾಸಕಿ ರೂಪಾಲಿ

14ರ ಬೆಳಿಗ್ಗೆ 8.30ರಿಂದ 10.30ರವರೆಗೆ ಹರಿಹರ ಬೈಪಾಸ್‌ ರಸ್ತೆಯಿಂದ ಶ್ರೀಮಠದವರೆಗೆ ವಿವಿಧ ಕಲಾತಂಡಗಳು, ಮಹಿಳೆಯರ ಪೂರ್ಣಕುಂಭ ಹಾಗೂ ರೊಟ್ಟಿ, ಬುತ್ತಿಯೊಂದಿಗೆ ಬೃಹತ್‌ ಮೆರವಣಿಗೆ ನಡೆಯಲಿದೆ. ನಂತರ 11 ಗಂಟೆಗೆ ಸಮಸ್ತ ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರದಲ್ಲಿ ಒಬಿಸಿ ಹಾಗೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಬೃಹತ್‌ ಜನಜಾಗೃತಿ ಸಮಾವೇಶದಲ್ಲಿ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟ ಅಲಗೂರು ಜಮಖಂಡಿಯ ಮಹಾದೇವ ಶ್ರೀ, ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀ , ಹಗರಿಬೊಮ್ಮನಹಳ್ಳಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶಾಖಾ ಮಠದ ಮಹಾಂತ ಶ್ರೀ, ಮನಗೂಳಿ ಹಿರೇಮಠದ ಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸುವರು.

click me!