ಒತ್ತಡದ ಬದುಕಿನಿಂದ ಮುಕ್ತರಾಗಿ ನಾವೆಲ್ಲರೂ ಸಂತೋಷ ಅನುಭವಿಸಬೇಕು. ಸರ್ವರ ಜೀವನದಲ್ಲಿ ಆನಂದ ನೆಲೆಸಲಿ ಎಂದು ಆರ್ಟ್ ಆಫ್ ಲಿವೀಂಗ್ ನ ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದರು.
ಹೊಸಪೇಟೆ (ಫೆ.14) : ಒತ್ತಡದ ಬದುಕಿನಿಂದ ಮುಕ್ತರಾಗಿ ನಾವೆಲ್ಲರೂ ಸಂತೋಷ ಅನುಭವಿಸಬೇಕು. ಸರ್ವರ ಜೀವನದಲ್ಲಿ ಆನಂದ ನೆಲೆಸಲಿ ಎಂದು ಆರ್ಟ್ ಆಫ್ ಲಿವೀಂಗ್ ನ ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದರು.
ಡಾ.ಪುನೀತ್ ರಾಜಕುಮಾರ(Dr Puneeth Rajkumar) ಜಿಲ್ಲಾಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಆನಂದ ವಿಜಯೋತ್ಸವ(Ananda Vijayotsav) ಮಹಾಸತ್ಸಂಗದ ದಿವ್ಯ ಸಾನ್ನಿಧ್ಯ ವಹಿಸಿ, ಸತ್ಸಂಗ ನೀಡಿದ ಶ್ರೀಗಳು, ನಮ್ಮ ಮನಸ್ಸಿನಲ್ಲಿ ಹಲವು ವಿಚಾರಗಳಿರುತ್ತವೆ. ಈ ವಿಚಾರ, ಅಲೋಚನೆಗಳಿಂದ ಹೊರ ಬರೋಣ. ನಾವು ಈಗ ಒತ್ತಡದ ಜೀವನ(A stressful life)ದಲ್ಲಿ ಸಿಲುಕುತ್ತಿದ್ದೇವೆ. ನಾವು ಸಹಜ ಜೀವನ ನಡೆಸಬೇಕು. ಎಲ್ಲರ ಮುಖದಲ್ಲೂ ಮುಗುಳ್ನಗೆ ನೆಲೆಸಬೇಕು. ಇದಕ್ಕಾಗಿ ಜ್ಞಾನ, ಧ್ಯಾನ, ಗಾನದತ್ತ ಹೊರಳಬೇಕು ಎಂದರು. ನಾವು ಬರೀ ಶರೀರ ಅಷ್ಟೇವಲ್ಲ. ನಮ್ಮಮನಸ್ಸು ಆಗಿದ್ದೇವೆ. ಮನಸ್ಸಿನಲ್ಲಿ ಯಾವುದೇ ವಿಚಾರ ಬರಲಿ. ಧ್ಯಾನದಿಂದ ನಾವು ಮುಕ್ತರಾಗೋಣ ಎಂದರು.
undefined
ರಾಸಾಯನಿಕ ಮುಕ್ತ ಆಹಾರ ಬೆಳೆಯೋಣ: ಶ್ರೀಶ್ರೀ ರವಿಶಂಕರ ಗುರೂಜಿ
ಡ್ರಗ್ಸ್ ದಿಂದ ದೂರ ಇರೋಣ:
ಡ್ರಗ್ಸ್(Drugs) ಇಡೀ ಯುವ ಸಮೂಹವನ್ನು ನಾಶಮಾಡಿ ಬಿಡುತ್ತದೆ. ಹಾಗಾಗಿ ನಾವು ನಮ್ಮ ಮಕ್ಕಳನ್ನು ಮಾದಕ ದ್ರವ್ಯದಿಂದ ದೂರ ಇರಿಸುವ ಸಂಕಲ್ಪ ಮಾಡೋಣ. ಕರ್ನಾಟಕದಲ್ಲಿ ಡ್ರಗ್ಸ್ ಹಾವಳಿ ಕಡಿಮೆ ಇದೆ. ಕೆಲ ಕಡೆ ಡ್ರಗ್ಸ್ ಜಾಸ್ತಿ ಇದೆ ಎಂದರು.
ಕೊರೋನಾಗೆ ಔಷಧಿ ಕೊಟ್ಟ ಭಾರತ:
ಒಂದು ದೇಶ ಕೊರೋನಾ(Coronavirus) ಎಂಬ ಕಾಯಿಲೆ ಕೊಟ್ಟರೇ ನಾವು ಜಗತ್ತಿಗೆ ಔಷಧಿಕೊಟ್ಠೇವು.ನಮ್ಮ ಆಶ್ರಮದ ಆಯುರ್ವೇದಿಕ್ ಔಷಧವನ್ನೂ ಜರ್ಮನಿ ದೇಶ ಒಪ್ಪಿಕೊಂಡಿದೆ. ಭಾರತದಲ್ಲಿ ಯಾವತ್ರಿಗೂ ಜ್ಞಾನದ ಔಷಧ ಇದೆ. ಇದನ್ನು ನಮ್ಮಪೂರ್ವಜರು ಬಳುವಳಿಯಾಗಿ ನೀಡಿದ್ದಾರೆ. ಭಾರತ ಜಗತ್ತಿನ ಜ್ಞಾನ ಶಕ್ತಿಯಾಗಿದೆ. ಕೊರೋನಾ ಕಾಲಘಟ್ಟದಲ್ಲಿ ಎಲ್ಲಾ ದೇಶಗಳು ಭಾರತದತ್ತ ನೋಡಿದವು. ಆದರೆ, ಜಗತ್ತಿಗೆ ಔಷಧಿ ನೀಡಿತು ಎಂದರು.
ತಲೆ ಓಡಿಸಿದ್ರೆ ಹೀಗೂ ಹಣ ಗಳಿಸಬಹುದು, ಏನೇನೋ ಚಿಂತಿಸುವ ಅಗತ್ಯವಿಲ್ಲ
ಕೊರೋನಾ ಬಳಿಕ ಇಡೀ ಜಗತ್ತಿನಲ್ಲಿ ಮಾನಸಿಕ ಕಾಯಿಲೆ ಜಾಸ್ತಿಯಾಗಿದೆ. ಅದಕ್ಕಾಗಿ ನಾವು ಧ್ಯಾನ, ಆಧ್ಯಾತ್ಮದ ಕಡೆಗೆ ಹೊರಳಬೇಕು. ಸತ್ಸಂಗದ ಮೂಲಕ ನಾವು ಮಾನಸಿಕ ಒತ್ತಡದಿಂದ ಹೊರಬರಬೇಕು ಎಂದರು.
ಆಂಗ್ಲ ಭಾಷೆಯಲ್ಲೂ ಸಂಸ್ಕೃತ ಶಬ್ದಗಳಿವೆ. ಜಗತ್ತಿಗೆ ಸೊನ್ನೆ ಕೊಟ್ಟಿದ್ದು, ಭಾರತ ಎಂಬುದನ್ನು ಮರೆಯಬಾರದು. ಭಾರತ ಯಾವತ್ತಿಗೂ ಕೊಡುಗೆಗಳನ್ನು ಕೊಡುಗೆಯಾಗಿ ನೀಡುತ್ತಾ ಬಂದಿದೆ. ಈ ವಿಚಾರ ಎಲ್ಲರೂ ತಿಳಿದುಕೊಳ್ಳಬೇಕು ಎಂದು ಶ್ರೀಗಳು ನುಡಿದರು.