ಗ್ರಾಮೀಣ ಭಾಗದಲ್ಲಿದ್ದ ಚಿರತೆಗಳು ನಗರದ ಪಕ್ಕದಲ್ಲಿಯೇ ಬಂದಿವೆ.
ಆತಂಕದಲ್ಲಿಯೇ ನಿತ್ಯ ವಾಯುವಿಹಾರ ಮಾಡುತ್ತಿರುವ ಸ್ಥಳೀಯ ಜನರು.
ಚಿರತೆಗಳನ್ನು ಸೆರೆ ಹಿಡಿಯುವಂತೆ ಸ್ಥಳೀಯರ ಆಗ್ರಹ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಡಿ.28): ಇಲ್ಲಿಯ ತನಕ ಕೋಟೆನಾಡಿನ ಹಳ್ಳಿಗಳಿಗೆ ಲಗ್ಗೆ ಇಡ್ತಿದ್ದ ಚಿರತೆ ಇದೀಗ ಚಿತ್ರದುರ್ಗ ನಗರದೊಳಗಿನ ಬಂಡೆ ಮೇಲೆ ಪ್ರತ್ಯಕ್ಷವಾಗಿದೆ. ಹೀಗಾಗಿ ಶಾಲಾ ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ನಾಗರೀಕರಲ್ಲಿ ಬಾರಿ ಪ್ರಾಣ ಭಯ ಸೃಷ್ಟಿಸಿದೆ. ಅಕಸ್ಮಾತ್ ಬಡಾವಣೆಗಳಿಗ ನುಗ್ಗಿದ್ರೆ ನಾವೇನು ಮಾಡೋದು ಅಂತ ಆತಂಕದಲ್ಲಿ ಇದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
undefined
ಚಿತ್ರದುರ್ಗದ ಚಂದ್ರವಳ್ಳಿ ಸಮೀಪದ ಬೆಟ್ಟಗಳಲ್ಲಿ ಈ ಚಿರತೆಗಳು ಪ್ರತ್ಯಕಗಷವಾಗಿವೆ. ಬಂಡೆ ಮೇಲೆ ಓಡಾಡ್ತಿರುವ ಚಿರತೆಗಳನ್ನು ಕಂಡು ಜನರು ಭಯ ಭೀತರಾಗಿದ್ದಾರೆ. ಚಂದ್ರವಳ್ಳಿಗೆ ಕೋಟೆನಾಡಿನ ಜನರು ವಾಯು ವಿಹಾರಕ್ಕೆ ಬರ್ತಾರೆ. ಪ್ರವಾಸಿಗರು ಇಲ್ಲಿನ ಗುಹೆಯನ್ನು ನೋಡಲು ಆಗಮಿಸ್ತಾರೆ. ಅಲ್ದೇ ಸಮೀಪದಲ್ಲೇ ಇರುವ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳು ಇಲ್ಲಿಯೇ ಚಂದ್ರವಳ್ಳಿಯ ಆಟದ ಮೈದಾನದಲ್ಲಿ ಆಟವಾಡ್ತಾರೆ. ಆದರೆ ಇಂದು ಈ ಮೈದಾನದ ಪಕ್ಕದಲ್ಲೇ ಇರುವ ಬೆಟ್ಟದ ಮೇಲೆ ದಿಡೀರ್ ಅಂತ 2 ಚಿರತೆಗಳು ಪ್ರತ್ಯಕ್ಷವಾಗಿ ಜನರಲ್ಲಿ ಬಾರಿ ಭಯಭೀತಿ ಸೃಷ್ಠಿಸಿದೆ. ಹಾಗೆಯೇ ಚಂದ್ರವಳ್ಳಿ ಬಳಿಯ ಬಡಾವಣೆಗಳ ಜನರಲ್ಲೂ ಆತಂಕ ಮನೆ ಮಾಡಿದೆ. ಚಿರತೆಗಳು ಬಡಾವಣೆಗೆ ನುಗ್ಗಿದರೆ ಗತಿಯೇನು ಎಂಬ ಪ್ರಾಣಭಯ ಮಹಿಳೆಯರು, ಮಕ್ಕಳು ಸೇರಿದಂತೆ ಜನರಲ್ಲಿದೆ. ಹೀಗಾಗಿ ಚಿರತೆಗಳ ಸೆರೆಗೆ ಸ್ಥಳೀಯರು ಹಾಗೂ ವಾಯು ವಿಹಾರಿಗಳು ಆಗ್ರಹಿಸಿದ್ದಾರೆ.
Mysuru : ಚಿರತೆ ದಾಳಿ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸಿ
ಮುಸ್ಸಂಜೆ ವೇಳೆ ನಗರದೊಳಗೂ ಚಿರತೆ ಪ್ರವೇಶ: ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ ಹಾಗು ಚಂದ್ರವಳ್ಳಿ ಪ್ರದೇಶದಲ್ಲಿ ಆಗಾಗ್ಗೆ 3 ಚಿರತೆಗಳು ಆಗಮಿಸುತ್ತಿದ್ದು, ಬೆಳಗಿನ ಜಾವ ಹಾಗೂ ಸಂಜೆ ವೇಳೆ ನಗರ ಪ್ರದೇಶದೊಳಗೂ ಸಹ ಬರುತ್ತಿವೆ. ಹೀಗಾಗಿ ಗಾಬರಿಯಾಗಿರೋ ಜನರು ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರಲು ಯೋಚಿಸ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ ನಾವು ಹಗಲು ರಾತ್ರಿ ಎನ್ನದೇ ಗಸ್ತು ನಡೆಸ್ತಿದ್ದೇವೆ. ಚಿರತೆಯು ಬಡಾವಣೆಗಳಿಗೆ ಎಂಟ್ರಿಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಆದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯುತ್ತೇವೆಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಭರವಸೆ ನೀಡಿದ್ದಾರೆ.
ಒಟ್ಟಾರೆ ಚಿರತೆಗಳ ಹಾವಳಿಯಿಂದ ಚಿತ್ರದುರ್ಗದ ಜನ ರೋಸಿಹೋಗಿದ್ದಾರೆ. ನಿತ್ಯವೂ ಕೆಲಸ ಕಾರ್ಯಗಳನ್ನು ಬಿಟ್ಟು ಭಯದ ವಾತವರಣದಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ಅರಣ್ಯ ಇಲಾಖೆ ಅಧಿಕಾರಿಗಳು ಈ ಚಿರತೆ ಗಳನ್ನು ಸೆರೆ ಹಿಡಿದು ಇಲ್ಲಿನ ಜನರ ಆತಂಕವನ್ನು ಶಮನ ಗೊಳಿಸಬೇಕಿದೆ.
ಟಿ. ನರಸೀಪುರದಲ್ಲಿ ಮುಸ್ಸಂಜೆ ನಂತರ ಜಮೀನಿಗೆ ಹೋಗಬೇಡಿ: ಇತ್ತೀಚಿನ ದಿನಗಳಲ್ಲಿ ಜನರ ಮೇಲೆ ಚಿರತೆ ದಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಸಾರ್ವಜನಿಕರಿಗೆ ಪೊಲೀಸರು ಸುರಕ್ಷತೆಯ ದೃಷ್ಟಿಯಿಂದ ರಾತ್ರಿ ವೇಳೆ ಮನೆಯಲ್ಲಿಯೇ ಇರುವಂತೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. ತಾಲೂಕಿನಲ್ಲಿ ಇತ್ತೀಚೆಗೆ ಜನರ ಮೇಲೆ ಚಿರತೆ (Leopard) ದಾಳಿ ಹೆಚ್ಚಾಗಿದೆ. ತಾಲೂಕಿನಲ್ಲೂ ಈಗಾಗಲೇ ಇಬ್ಬರು ಚಿರತೆ ದಾಳಿಗೆ ಬಲಿಯಾಗಿರುವುದರಿಂದ ಸಾರ್ವಜನಿಕರು ಮುಸ್ಸಂಜೆಯ ನಂತರ ಪಟ್ಟಣದ ಹೊರವಲಯ ಹಾಗೂ ಜಮೀನುಗಳ (Land) ಕಡೆ ಒಬ್ಬಂಟಿಗರಾಗಿ ಹೋಗಬಾರದೆಂದು ತಿಳಿಸಿದ್ದಾರೆ.
Mysuru: ತಿ.ನರಸೀಪುರದಲ್ಲಿ ಬೋನಿಗೆ ಬಿದ್ದ ಮೊದಲ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ರಾತ್ರಿ ಮನೆಯೊಳಗೇ ಇರಿ: ರಾತ್ರಿ ವೇಳೆಯಲ್ಲಿ ಪಟ್ಟಣದ ಹೊರವಲಯದಲ್ಲಿ ಸುತ್ತಾಡುವುದು, ಮದ್ಯಪಾನ ಮಾಡಿಕೊಂಡು ಗುಂಪು ಸೇರುತ್ತಿರುವುದು, ಮನೆಯ ಹೊರಗಡೆ ಪಡಸಾಲೆಗಳಲ್ಲಿ ಮಲಗುವುದು ಸೂಕ್ತವಲ್ಲ, ಕಾಡು ಪ್ರಾಣಿಗಳು ಆ ಸಂದರ್ಭದಲ್ಲಿ ನಿಮ್ಮ ಮೇಲೆ ದಾಳಿ ನಡೆಸಬಹುದು, ಆದ್ದರಿಂದ ಸಂಜೆ ಮತ್ತು ರಾತ್ರಿ ವೇಳೆಯಲಿ ಮನೆಯೊಳಗೆ ಇರಲು ಸೂಚಿಸಿದ್ದಾರೆ. ತಡರಾತ್ರಿವರೆಗೂ ರಸ್ತೆ ಬದಿ ವ್ಯಾಪಾರಸ್ಥರು ಮತ್ತು ತಳ್ಳುವ ಗಾಡಿ ವ್ಯಾಪಾರಸ್ಥರು ವ್ಯಾಪಾರ ಮಾಡುವುದನ್ನು ತಾತಕಾಳಿಕವಾಗಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.