Tumakuru: ಚೆಕ್‌ಡ್ಯಾಮ್‌ನಲ್ಲಿ ಈಜಲು ಹೋಗಿ ಜಲಸಮಾಧಿಯಾದ ಬಾಲಕಿಯರು

By Sathish Kumar KHFirst Published Dec 28, 2022, 5:18 PM IST
Highlights

ಬಟ್ಟೆ ಒಗೆಯಲು ಮನೆಯವರ ಜೊತೆಗೆ ಹೋಗಿದ್ದ ಬಾಲಕಿಯರು ಪಕ್ಕದ ಚೆಕ್‌ಡ್ಯಾಮ್‌ನಲ್ಲಿ ಈಜಾಡುತ್ತಿದ್ದ ವೇಳೆ ಆಳದ ಗುಂಡಿ ಕಡೆಗೆ ಹೋಗಿ ಈಜು ಬಾರದೇ ಮುಳುಗಿ ಸಾವನ್ನಪ್ಪಿದ ಘಟನೆ ಮಧುಗಿರಿ ತಾಲ್ಲೂಕಿನ ವೀರಾಪುರದಲ್ಲಿ ನಡೆದಿದೆ.

ತುಮಕೂರು (ಡಿ.28): ಬಟ್ಟೆ ಒಗೆಯಲು ಮನೆಯವರ ಜೊತೆಗೆ ಹೋಗಿದ್ದ ಬಾಲಕಿಯರು ಪಕ್ಕದ ಚೆಕ್‌ಡ್ಯಾಮ್‌ನಲ್ಲಿ ಈಜಾಡುತ್ತಿದ್ದ ವೇಳೆ ಆಳದ ಗುಂಡಿ ಕಡೆಗೆ ಹೋಗಿ ಈಜು ಬಾರದೇ ಮುಳುಗಿ ಸಾವನ್ನಪ್ಪಿದ ಘಟನೆ ಮಧುಗಿರಿ ತಾಲ್ಲೂಕಿನ ವೀರಾಪುರದಲ್ಲಿ ನಡೆದಿದೆ.

ವೀರಾಪುರ ಗ್ರಾಮದ ಬಳಿ ಹರಿಯುವ ಜಯಮಂಗಲಿ ನದಿಗೆ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ಅಲ್ಲಿಗೆ ಪ್ರತಿನಿತ್ಯ ಬಟ್ಟೆಗಳನ್ನು ಒಗೆಯಲು ನದಿಗೆ ಹೋಗುತ್ತಿದ್ದ ಪೋಷಕರು ಇಂದು ಮನೆಯಲ್ಲಿದ್ದ ಇಬ್ಬರು ಮಕ್ಕಳನ್ನೂ ನದಿಗೆ ಕರೆದುಕೊಂಡು ಹೋಗಿದ್ದಾರೆ. ಪೋಷಕರನ್ನು ಬಿಟ್ಟು ಮಕ್ಕಳಿಬ್ಬರು ಜಯಮಂಗಲಿ ನದಿಯಲ್ಲಿ ಈಜಲು ಹೋಗಿದ್ದಾರೆ. ಚೆಕ್ ಡ್ಯಾಂನಲ್ಲಿದ್ದ ನೀರಿನಲ್ಲಿ ಈಜಲು ಹೋಗಿದ್ದ ಐವರು ಮಕ್ಕಳು ಹೋಗಿದ್ದಾರೆ. ಈ ವೇಳೆ ಇಬ್ಬರು ಬಾಲಕಿಯರು ಈಜು ಬರದೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Tumakuru: ಕಾಂಗ್ರೆಸ್‌ ಸಭೆಯಲ್ಲಿ ಕುಸಿದುಬಿದ್ದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಾವು

ಇನ್ನುನದಿಯಲ್ಲಿ ಮುಳುಗಿ ಸಾವನ್ನಪ್ಪಿದವರನ್ನು ಪ್ರಿಯಾಂಕಾ (8) ಹಾಗೂ ಬಿಂದು (9) ಎಂದು ಗುರುತಿಸಿದ್ದಾರೆ.  ಇನ್ನು ಇಬ್ಬರೂ ಸಹೋದರಿಯರು ಆಗಿದ್ದಾರೆ. ಕೆಂಪಾಪುರ ಗ್ರಾಮದ ಬಾಬು ಹಾಗೂ ಲಕ್ಷ್ಮೀನಾರಾಯಣ್ ಅವರ ಮಕ್ಕಳಾಗಿದ್ದಾರೆ. ಇನ್ನು ಮುಳುಗುತ್ತಿದ್ದ ಘಟನೆ ನಡೆಯುತ್ತಿದ್ದಂತೆ ಚೀರಾಡುತ್ತಿದ್ದ ಉಳಿದ ಮೂವರು ಮಕ್ಕಳನ್ನು ಪಕ್ಕದಲ್ಲಿಯೇ ಬಟ್ಟೆ ಒಗೆಯುತ್ತಿದ್ದ ಮಹಿಳೆಯರು ರಕ್ಷಣೆ ಮಾಡಿದ್ದಾರೆ. ಇಂದು ಮಧ್ಯಾಹ್ನ  3ಗಂಟೆಗೆ ನಡೆದ ಘಟನೆ. ನಡೆದಿದ್ದು, ಸ್ಥಳಕ್ಕೆ ಕೊಡಗೇನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾರೆ.

click me!