ಬಳ್ಳಾರಿ ಹೃದಯ ಭಾಗದ ಗುಡ್ಡದ ಮೇಲೆ ಚಿರತೆ ಪ್ರತ್ಯಕ್ಷ!

By Ravi Nayak  |  First Published Aug 6, 2022, 11:31 AM IST
  • ಬಳ್ಳಾರಿ ಹೃದಯ ಭಾಗದ ಗುಡ್ಡದ ಮೇಲೆ ಚಿರತೆ ಪ್ರತ್ಯಕ್ಷ
  • ಗುಡ್ಡದ ಮೇಲಿನ ಚಿರತೆ ಕಂಡು ಆತಂಕಗೊಂಡ ಜನರು
  • ರಾತ್ರಿಯ ವೇಳೆ ಒಬ್ಬರೇ ಓಡಾಟ ಮಾಡದಂತೆ ಎಚ್ಚರಿಸಿದ ಪೊಲೀಸರು

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಆ.6) ಬಳ್ಳಾರಿ ನಗರದ ಗುಡ್ಡ ಪ್ರದೇಶದಲ್ಲಿ ಶುಕ್ರವಾರ ಸಂಜೆ ವೇಳೆ ಎರಡು ಚಿರತೆಗಳು ಪ್ರತ್ಯೇಕ್ಷವಾಗಿರೋದೋ ಸ್ಥಳೀಯರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ. ಇನ್ನೂ ಸ್ಥಳೀಯರ ಮೊಬೈಲ್ ನಲ್ಲಿ ಚಿರತೆ ಓಡಾಟದ ಚಿತ್ರ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿವೈರಲ್‌ ಆಗಿದೆ. ಕೂಡಲೇ ಜಿಲ್ಲಾಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಪತ್ತೆಯ ಕಾರ್ಯಚರಣೆ ಯಲ್ಲಿ ತೊಡಗಿಸಿಕೊಂಡಿದ್ದಾರೆ.

Tap to resize

Latest Videos

undefined

ಗುಡ್ಡದ ಮೇಲೆ ಪದೇ ಪದೇ ಬರುವ ಚಿರತೆ:

Chitradurga ಜಿಲ್ಲೆಯ ಹಲವೆಡೆ ಚಿರತೆ ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ

ನಗರದ ಇನ್‌ಫ್ಯಾಂಟ್ರಿ ರಸ್ತೆ(Infantry)ಯ ಕುಷ್ಠರೋಗಿಗಳ ದಯಾ ಕೇಂದ್ರದ ಬಳಿಯ ಗುಡ್ಡ ಪ್ರದೇಶದಲ್ಲಿ ಶುಕ್ರವಾರ ಸಂಜೆ ಚಿರತೆಯೊಂದು ಕಾಣಿಸಿಕೊಂಡಿದೆ. ಆ ಚಿರತೆ ಚಿತ್ರ ಸೆರೆಹಿಡಿಯುತ್ತಿರೋವಾಗಲೇ ಮತ್ತೊಂದು ಕಡೆ ಇನ್ನೊಂದು ಚಿರತೆ ಕಾಣಿಸಿಕೊಂಡಿರೋದು ಸ್ಥಳೀಯರ ಅತಂಕ ಹೆಚ್ಚುವಂತೆ ಮಾಡಿದೆ..

ವಿಷಯ ತಿಳಿಯುತ್ತಲೇ ಎಚ್ಚೇತ್ತು ಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಕಾರ್ಯಚರಣೆಗೆ ಮುಂದಾಗಿದ್ದಾರೆ. ಚಿರತೆ ಪತ್ತೆಯಾದ ಸ್ಥಳ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಚಿರತೆ ಪತ್ತೆಗಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯೇಕ್ಷವಾಗಿರುವುದು ಗುಡ್ಡದ ಅಂಚಿನಲ್ಲಿ ವಾಸವಿರುವ ಕುಟುಂಬಗಳಿಗೆ ಆತಂಕ ಮನೆ ಮಾಡಿದೆ.

ಕಳೆದೊಂದು ವಾರದಿಂದ ನಿರಂತರ ಕಾಣಿಸಿಕೊಳ್ಳುತ್ತಿದೆ 

ನಗರದ ಗುಡ್ಡ ಪ್ರದೇಶದಲ್ಲಿಕಳೆದ ಒಂದು ವಾರದಿಂದ ಚಿರತೆ ಪ್ರತ್ಯೇಕ್ಷವಾಗುತ್ತಿರುವ ವಿಡಿಯೋ, ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿವೈರಲ್‌ ಆಗುತ್ತಿವೆ. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಸಹ ಕೂಡಲೇ ಗುಡ್ಡ ಪ್ರದೇಶಕ್ಕೆ ತೆರಳಿ ಚಿರತೆ ಪತ್ತೆಗೆ ಮುಂದಾಗಿದ್ದರು. ಆದರೆ, ಚಿರತೆ  ಸುಳಿವು ಸಿಗದ ಪರಿಣಾಮ ಕಾರ್ಯಚರಣೆಯಿಂದ ಹಿಂದೆ ಸರಿದಿದ್ದರು. ಈಗ ಪುನಃ ನಿನ್ನೆಯಿಂದ ಚಿರತೆ ಪ್ರತ್ಯೇಕ್ಷವಾಗಿರೋದು ದೊಡ್ಡ ತಲೆ ನೋವಿಗೆ ಕಾರಣವಾಗಿದೆ.

ದಾವಣಗೆರೆ: ಹೊನ್ನಾಳಿಯಲ್ಲಿ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಜನತೆ

ಈ ಕುರಿತು ಡಿಸಿಎಫ್‌ ಸಂದೀಪ್‌ ಸೂರ್ಯವಂಶಿ(DCF Sandeep Suryavamshi) ಮಾತನಾಡಿ, ನಗರದಲ್ಲಿ ಚಿರತೆ(Cheeta) ಪ್ರತ್ಯೇಕ್ಷವಾಗಿರುವ ಬಗ್ಗೆ ವಿಡಿಯೋ(Video), ಫೋಟೋ(Photos)ಗಳು  ದೊರೆತಿವೆ.  ಚಿರತೆ ಪತ್ತೆಯಾದ ಸ್ಥಳದಲ್ಲಿ ಸಿಬ್ಬಂದಿಯಿಂದ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದರು. ಇನ್ನೂ ಜಿಲ್ಲೆಯಲ್ಲಿನ ಗುಡ್ಡ ಪ್ರದೇಶದಲ್ಲಿ ಚಿರತೆಗಳು  ಪ್ರತ್ಯೇಕ್ಷವಾಗುತ್ತಿರುವುದು ಇತ್ತಿಚೆಗೆ ಸಾಮಾನ್ಯವಾಗಿದೆ. ಆದರೆ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಗುಡ್ಡದಂಚಿನ ಜನವಸತಿ ಸ್ಥಳದಲ್ಲಿ ಚಿರತೆ ಪ್ರತ್ಯೇಕ್ಷವಾಗುತ್ತಿರುವುದು ಮಾತ್ರ ಜನರಲ್ಲಿಆತಂಕ ಮೂಡಿಸಿದೆ. ಈ ಹಿಂದೆ ಜಿಲ್ಲೆಯ ಹಳೇ ದರೋಜಿ, ಮೆಟ್ರಿ, ದೇವಲಾಪುರ ಭಾಗಗಳಲ್ಲಿ ಹಾಗೂ ಬಳ್ಳಾರಿಯ ಕೆಎಂಎಫ್‌ ಹಿಂಭಾಗದಲ್ಲಿ ಚಿರತೆ ಪ್ರತ್ಯೇಕ್ಷವಾಗಿ ಮೇಕೆ, ಕುರಿ ಸೇರಿದಂತೆ ಜನರ ಪ್ರಾಣಿಗಳ ಮೇಲೆ ದಾಳಿಯಾಗಿರೋ ಘಟನೆಗಳು ಸಹ ನಡೆದಿವೆ. ಹೀಗಾಗಿ, ಗುಡ್ಡದಂಚಿನ ಜನವಸತಿ ಪ್ರದೇಶದಲ್ಲಿಚಿರತೆ ಪ್ರತ್ಯೇಕ್ಷದ ಸುದ್ದಿ ಕೇಳುತ್ತಿದ್ದಂತೆ ಜನತೆ ಬೆಚ್ಚಿಬಿಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 

ಪೊಲೀಸರ ನಿಯೋಜನೆ: ಇನ್ನೂ ಚಿರತೆ ಓಡಾಡ್ತಿರೋ ಗುಡ್ಡದ ಪ್ರದೇಶ ಸೇರಿದಂತೆ ಇಂಧ್ರನಗರ, ಸಂಜಯ್ ಗಾಂಧಿ ನಗರದಲ್ಲಿ ರಾತ್ರಿಯ ವೇಳೆ ಒಬ್ಬೊಬ್ಬರೇ ಓಡಾಡದಂತೆ ಪೊಲೀಸರು ಮೈಕ್ ಮೂಲಕ ಅನೌನ್ಸ್ ಮೆಂಟ್ ಮಾಡ್ತಿದ್ದಾರೆ..

click me!