ಬಳ್ಳಾರಿ ಹೃದಯ ಭಾಗದ ಗುಡ್ಡದ ಮೇಲೆ ಚಿರತೆ ಪ್ರತ್ಯಕ್ಷ: ಆತಂಕಗೊಂಡ ಜನರು

Published : Aug 06, 2022, 11:26 AM IST
ಬಳ್ಳಾರಿ ಹೃದಯ ಭಾಗದ ಗುಡ್ಡದ ಮೇಲೆ ಚಿರತೆ ಪ್ರತ್ಯಕ್ಷ: ಆತಂಕಗೊಂಡ ಜನರು

ಸಾರಾಂಶ

ನಗರದ ಗುಡ್ಡ ಪ್ರದೇಶದಲ್ಲಿ ಶುಕ್ರವಾರ ಸಂಜೆ ವೇಳೆ ಎರಡು ಚಿರತೆಗಳು ಪ್ರತ್ಯೇಕ್ಷವಾಗಿರೋದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ. ಇನ್ನೂ ಸ್ಥಳೀಯರ ಮೊಬೈಲ್‌ನಲ್ಲಿ ಚಿರತೆ ಓಡಾಟದ ಚಿತ್ರ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿದೆ. 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ (ಆ.06): ನಗರದ ಗುಡ್ಡ ಪ್ರದೇಶದಲ್ಲಿ ಶುಕ್ರವಾರ ಸಂಜೆ ವೇಳೆ ಎರಡು ಚಿರತೆಗಳು ಪ್ರತ್ಯೇಕ್ಷವಾಗಿರೋದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ. ಇನ್ನೂ ಸ್ಥಳೀಯರ ಮೊಬೈಲ್‌ನಲ್ಲಿ ಚಿರತೆ ಓಡಾಟದ ಚಿತ್ರ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿದೆ. ಕೂಡಲೇ ಜಿಲ್ಲಾಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಪತ್ತೆಯ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗುಡ್ಡದ ಮೇಲೆ ಪದೇ ಪದೇ ಬರುವ ಚಿರತೆ: ನಗರದ ಇನ್‌ಫ್ಯಾಂಟ್ರಿ ರಸ್ತೆಯ ಕುಷ್ಠರೋಗಿಗಳ ದಯಾ ಕೇಂದ್ರದ ಬಳಿಯ ಗುಡ್ಡ ಪ್ರದೇಶದಲ್ಲಿ ಶುಕ್ರವಾರ ಸಂಜೆ ಚಿರತೆಯೊಂದು ಕಾಣಿಸಿಕೊಂಡಿದೆ. 

ಆ ಚಿರತೆ ಚಿತ್ರ ಸೆರೆ ಹಿಡಿಯುತ್ತಿರೋವಾಗಲೇ ಮತ್ತೊಂದು ಕಡೆ ಇನ್ನೊಂದು ಚಿರತೆ ಕಾಣಿಸಿಕೊಂಡಿರೋದು ಸ್ಥಳೀಯರ ಅತಂಕ ಹೆಚ್ಚುವಂತೆ ಮಾಡಿದೆ. ವಿಷಯ ತಿಳಿಯುತ್ತಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಚಿರತೆ ಪತ್ತೆಯಾದ ಸ್ಥಳ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಚಿರತೆ ಪತ್ತೆಗಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯೇಕ್ಷವಾಗಿರುವುದು ಗುಡ್ಡದ ಅಂಚಿನಲ್ಲಿ ವಾಸವಿರುವ ಕುಟುಂಬಗಳಿಗೆ ಆತಂಕ ಮನೆ ಮಾಡಿದೆ.

ರೋಚಕ RESCUE OPERATION: ಚಾಲಕ ಬಚಾವ್; ಕ್ಲೀನರ್ ನಾಪತ್ತೆ!

ಕಳೆದೊಂದು ವಾರದಿಂದ ನಿರಂತರ ಕಾಣಿಸಿಕೊಳ್ಳುತ್ತಿದೆ: ನಗರದ ಗುಡ್ಡ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಚಿರತೆ ಪ್ರತ್ಯಕ್ಷವಾಗುತ್ತಿರುವ ವಿಡಿಯೋ, ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಈ ಹಿನ್ನಲೆ ಅರಣ್ಯ ಇಲಾಖೆ ಅಧಿಕಾರಿಗಳು ಸಹ ಕೂಡಲೇ ಗುಡ್ಡ ಪ್ರದೇಶಕ್ಕೆ ತೆರಳಿ ಚಿರತೆ ಪತ್ತೆಗೆ ಮುಂದಾಗಿದ್ದರು. ಆದರೆ, ಚಿರತೆ ಸುಳಿವು ಸಿಗದ ಪರಿಣಾಮ ಕಾರ್ಯಾಚರಣೆಯಿಂದ ಹಿಂದೆ ಸರಿದಿದ್ದರು.

ಈಗ ಪುನಃ ನಿನ್ನೆಯಿಂದ ಚಿರತೆ ಪ್ರತ್ಯಕ್ಷವಾಗಿರೋದು ದೊಡ್ಡ ತಲೆ ನೋವಿಗೆ ಕಾರಣವಾಗಿದೆ. ಈ ಕುರಿತು ಡಿಸಿಎಫ್‌ ಸಂದೀಪ್‌ ಸೂರ್ಯವಂಶಿ ಮಾತನಾಡಿ, ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ವಿಡಿಯೋ, ಫೋಟೋಗಳು ದೊರೆತಿವೆ. ಚಿರತೆ ಪತ್ತೆಯಾದ ಸ್ಥಳದಲ್ಲಿ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು. ಇನ್ನೂ ಜಿಲ್ಲೆಯಲ್ಲಿನ ಗುಡ್ಡ ಪ್ರದೇಶದಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿರುವುದು ಇತ್ತಿಚೆಗೆ ಸಾಮಾನ್ಯವಾಗಿದೆ. 

ಆದರೆ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಗುಡ್ಡದಂಚಿನ ಜನವಸತಿ ಸ್ಥಳದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿರುವುದು ಮಾತ್ರ ಜನರಲ್ಲಿಆತಂಕ ಮೂಡಿಸಿದೆ. ಈ ಹಿಂದೆ ಜಿಲ್ಲೆಯ ಹಳೇ ದರೋಜಿ, ಮೆಟ್ರಿ, ದೇವಲಾಪುರ ಭಾಗಗಳಲ್ಲಿ ಹಾಗೂ ಬಳ್ಳಾರಿಯ ಕೆಎಂಎಫ್‌ ಹಿಂಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿ ಮೇಕೆ, ಕುರಿ ಸೇರಿದಂತೆ ಜನರ ಪ್ರಾಣಿಗಳ ಮೇಲೆ ದಾಳಿಯಾಗಿರೋ ಘಟನೆಗಳು ಸಹ ನಡೆದಿವೆ. ಹೀಗಾಗಿ, ಗುಡ್ಡದಂಚಿನ ಜನವಸತಿ ಪ್ರದೇಶದಲ್ಲಿಚಿರತೆ ಪ್ರತ್ಯಕ್ಷದ ಸುದ್ದಿ ಕೇಳುತ್ತಿದ್ದಂತೆ ಜನತೆ ಬೆಚ್ಚಿ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 

ಬಳ್ಳಾರಿ-ವಿಜಯನಗರದಲ್ಲಿ ಮಳೆ ಅವಾಂತರ, ರೈತ ಬಲಿ

ಪೊಲೀಸರ ನಿಯೋಜನೆ: ಇನ್ನೂ ಚಿರತೆ ಓಡಾಡ್ತಿರೋ ಗುಡ್ಡದ ಪ್ರದೇಶ ಸೇರಿದಂತೆ ಇಂಧ್ರನಗರ, ಸಂಜಯ್ ಗಾಂಧಿ ನಗರದಲ್ಲಿ ರಾತ್ರಿಯ ವೇಳೆ ಒಬ್ಬೊಬ್ಬರೇ ಓಡಾಡದಂತೆ ಪೊಲೀಸರು ಮೈಕ್ ಮೂಲಕ ಅನೌನ್ಸ್‌ಮೆಂಟ್ ಮಾಡ್ತಿದ್ದಾರೆ.

PREV
Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ