ಮೈಸೂರು: ಕೆ.ಆರ್‌.ನಗರ ತಾಲೂಕಲ್ಲಿ ಬೋನಿಗೆ ಸೆರೆಸಿಕ್ಕ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

By Kannadaprabha News  |  First Published Aug 26, 2023, 12:00 AM IST

ಕಾವಲ ಹೊಸೂರು, ಬಟಿಗನಹಳ್ಳಿ, ಭೇರ್ಯ, ಗೇರದಡ, ಮುಂಜನಹಳ್ಳಿ, ಹರಂಬಳ್ಳಿ ಹೊಸ ಅಗ್ರಹಾರ, ದೊಡ್ಡವಡ್ಡರಗುಡಿ ಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ಚಿರತೆಯ ಉಪಟಳ ಹೆಚ್ಚಾಗಿದ್ದು, ಮೇಕೆ, ಕುರಿ, ಹಸುಗಳನ್ನು ತಿಂದು ಹಾಕಿತ್ತು.

ಭೇರ್ಯ(ಆ.25): ಕಳೆದ ಒಂದು ತಿಂಗಳಿಂದ ಮಠದ ಕಾವಲ್‌ ರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕಾಣಿಸಿಕೊಂಡು ಜನರಿಗೆ ನಿತ್ಯ ಉಪಟಳ ಕೊಡುತ್ತಿದ್ದ ಚಿರತೆಯು ಕೆ.ಆರ್‌.ನಗರ ತಾಲೂಕಿನ ದೊಡ್ಡವಡ್ಡರಗುಡಿ ಗ್ರಾಮದ ಬಳಿ ಕೊನೆಗೂ ಬೋನಿಗೆ ಬಿದ್ದಿದ್ದು, ಸುತ್ತಲ ಗ್ರಾಮಸ್ಥರು ನಿಟ್ಟುಸಿರಾಗಿದ್ದಾರೆ.

ಕಾವಲ ಹೊಸೂರು, ಬಟಿಗನಹಳ್ಳಿ, ಭೇರ್ಯ, ಗೇರದಡ, ಮುಂಜನಹಳ್ಳಿ, ಹರಂಬಳ್ಳಿ ಹೊಸ ಅಗ್ರಹಾರ, ದೊಡ್ಡವಡ್ಡರಗುಡಿ ಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ಚಿರತೆಯ ಉಪಟಳ ಹೆಚ್ಚಾಗಿದ್ದು, ಮೇಕೆ, ಕುರಿ, ಹಸುಗಳನ್ನು ತಿಂದು ಹಾಕಿತ್ತು.

Latest Videos

undefined

ಆ.30ರಂದು ಮೈಸೂರಿನಲ್ಲಿ ‘ಗೃಹಲಕ್ಷ್ಮೀ’ ಗೆ ಚಾಲನೆ, ದೇಶದಲ್ಲೇ ಅತಿ ದೊಡ್ಡ ಕಾರ್ಯಕ್ರಮ ಇದು: ಡಿಕೆಶಿ

ಕಳೆದ ಮೂರು ನಾಲ್ಕು ದಿನಗಳಿಂದ ಚಿರತೆಯು ದೊಡ್ಡವಡ್ಡರಗುಡಿ ಗ್ರಾಮದ ಸುತ್ತ ಪತ್ತೆಯಾದ ಹಿನ್ನೆಲೆಯಲ್ಲಿ ಇದರ ಜಾಡು ಹಿಡಿದು ಅರಣ್ಯಾಧಿಕಾರಿಗಳು ಕಬ್ಬಿನ ಗದ್ದೆಯೊಂದರಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಚಿರತೆಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಗುವುದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

click me!