ನೀರು ಬಿಟ್ಟು ಸರ್ವ ಪಕ್ಷ ಸಭೆ ಕರೆಯುವುದು ಸರಿಯಲ್ಲ: ಎಂಟಿಬಿ ನಾಗರಾಜ್‌

By Kannadaprabha News  |  First Published Aug 25, 2023, 11:30 PM IST

ಸರ್ಕಾರ ಬುಧವಾರ ಸರ್ವಪಕ್ಷ ಸಭೆ ಕರೆದು ಹಲವಾರು ರೀತಿಯಲ್ಲಿ ಚರ್ಚೆ ನಡೆಸಿ, ಸಲಹೆ ಸೂಚನೆಗಳನ್ನು ಸಹ ಪಡೆದುಕೊಂಡಿದೆ. ಆದರೆ ಸರ್ಕಾರ ನೀರು ಹರಿಸಿ ಸರ್ವಪಕ್ಷ ಸಭೆ ಕರೆದಿದ್ದು ಸೂಕ್ತವಲ್ಲ. ಬದಲಾಗಿ ನೀರು ಬಿಡುವ ಮೊದಲೆ ಕರೆಯಬೇಕಿತ್ತು ಎಂದ ಮಾಜಿ ಸಚಿವ ಎಂಟಿಬಿ ನಾಗರಾಜ್‌ 


ಹೊಸಕೋಟೆ(ಆ.25): ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಉಂಟಾಗಿರುವ ಗೊಂದಲಕ್ಕೆ ಸರ್ಕಾರ ನೀರು ಹರಿಸಿ ಸರ್ವ ಪಕ್ಷ ಸಭೆ ಕರೆಯುವ ಬದಲಾಗಿ ನೀರು ಬಿಡುವ ಮೊದಲೆ ಸಭೆ ಕರೆಯಬೇಕಿತ್ತು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಕೂಡ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಸಾಕಷ್ಟು ಗೊಂದಲಗಳು, ರೈತರ ಪ್ರತಿಭಟನೆಗಳು ನಡೆಯುತ್ತಲೆ ಇರುತ್ತವೆ. ಅದೇ ರೀತಿ ಈಗಲೂ ಸಹ ಸಮಸ್ಯೆ ಉದ್ಬವವಾಗಿದೆ. ಆದರೆ ಸರ್ಕಾರ ಬುಧವಾರ ಸರ್ವಪಕ್ಷ ಸಭೆ ಕರೆದು ಹಲವಾರು ರೀತಿಯಲ್ಲಿ ಚರ್ಚೆ ನಡೆಸಿ, ಸಲಹೆ ಸೂಚನೆಗಳನ್ನು ಸಹ ಪಡೆದುಕೊಂಡಿದೆ. ಆದರೆ ಸರ್ಕಾರ ನೀರು ಹರಿಸಿ ಸರ್ವಪಕ್ಷ ಸಭೆ ಕರೆದಿದ್ದು ಸೂಕ್ತವಲ್ಲ. ಬದಲಾಗಿ ನೀರು ಬಿಡುವ ಮೊದಲೆ ಕರೆಯಬೇಕಿತ್ತು.

Latest Videos

undefined

ಖರ್ಗೆಗೆ ಕೆಲಸ ಮಾಡಲು ಬಿಡದ ಗಾಂಧಿ ಕುಟುಂಬ: ಸಂಸದ ಲೇಹರ್‌ ಟೀಕೆ

ರಾಜ್ಯದಲ್ಲಿ ಬರಗಾಲ:

ಪ್ರಮುಖವಾಗಿ ರಾಜ್ಯದಲ್ಲಿ ಸಕಾಲಕ್ಕೆ ಬೀಳಬೇಕಾದ ಮಳೆಗಳು ಬೀಳದ ಪರಿಣಾಮ ಸಾಕಷ್ಟುನೀರಿನ ಲಭ್ಯತೆ ರಾಜ್ಯದಲ್ಲಿಲ್ಲ. ಈಗಾಗಲೆ ಬರಗಾಲ ಪೀಡಿತ ತಾಲೂಕುಗಳನ್ನು ಸರ್ಕಾರ ಘೋಷಣೆ ಸಹ ಕೆಲವೇ ದಿನಗಳಲ್ಲಿ ಮಾಡಲಿದೆ. ಕಾವೇರಿ ನೀರು ಸಹ ಬೆಂಗಳೂರು ಸೇರಿದಂತೆ ಮೈಸೂರು ಭಾಗದ ರೈತರ ಕೃಷಿಗೆ ಅಗತ್ಯತೆಗಿಂತ ಕಡಿಮೆ ಲಭ್ಯವಾಗುತ್ತಿದೆ. ಆದ್ದರಿಂದ ರಾಜ್ಯದ ನೀರಿನ ಬಗ್ಗೆ ಇರುವ ವಾಸ್ತವ ಪರಿಸ್ಥಿತಿಯನ್ನು ಸುಪ್ರಿಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು ಎಂದರು.

ಚಂದ್ರಯಾನ 3 ಯಶಸ್ವಿಯಿಂದ ಭಾರತದ ಹಿರಿಮೆ ಹೆಚ್ಚಿದೆ

ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್‌ ಆಗಿದ್ದು ಭಾರತದ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ. ಇಸ್ರೋ ವಿಜ್ಞಾನಿಗಳ ಸತತ ಪರಿಶ್ರಮವಾಗಿ ಚಂದ್ರಯಾನ 3 ಯಶಸ್ವಿಯಾಗಲು ಕಾರಣವಾಯಿತು. ಇದರಿಂದ ಇಡೀ ವಿಶ್ವವೇ ಭಾರತದತ್ತ ನೋಡುವಂತಾಗಿದೆ. ಅಷ್ಟೇ ಅಲ್ಲದೆ ದೇಶದ ಹಿರಿಮೆ ಸಹ ಹೆಚ್ಚಿದೆ. ಪ್ರಮುಖವಾಗಿ ಇಸ್ರೋ ವಿಜ್ಞಾನಿಗಳಿಗೆ ಸಾಕಷ್ಟುಬೆಂಬಲವಾಗಿ ನಿಂತು ಮುಂದಿನ ಅನ್ವೇಷಣೆಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಚಂದ್ರಯಾನ ಯಶಸ್ವಿ ಹಿನ್ನೆಲೆ ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿಯವರೆ ಆಗಮಿಸಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಪ್ರಮುಖವಾಗಿ ಚಂದ್ರನ ಮೇಲೆ ಇಳಿದ ದೇಶಗಳಲ್ಲಿ ಭಾರತ ನಾಲ್ಕನೇ ದೇಶವಾಗಿದ್ದರೆ, ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಭಾರತವಾಗಿದೆ. ಪ್ರಮುಖವಾಗಿ ಕಡಿಮೆ ವೆಚ್ಚದಲ್ಲಿ ಚಂದ್ರಯಾನ 3ನ್ನು ವಿಜ್ಞಾನಿಗಳು ಯಶಸ್ವಿಗೊಳಿಸಿದ್ದಾರೆ, ಆದ್ದರಿಂದ ದೇಶದ ಪ್ರತಿಯೊಬ್ಬ ನಾಗರಿಕ ಕೂಡ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

click me!