ರಾಮನಗರ: ಮಲಗಿದ್ದ ಮಗು ಹೊತ್ತೊಯ್ದು ತಿಂದು ಭಕ್ಷಿಸಿದ ಚಿರತೆ..!

Published : May 09, 2020, 12:23 PM ISTUpdated : May 09, 2020, 12:32 PM IST
ರಾಮನಗರ: ಮಲಗಿದ್ದ ಮಗು ಹೊತ್ತೊಯ್ದು ತಿಂದು ಭಕ್ಷಿಸಿದ ಚಿರತೆ..!

ಸಾರಾಂಶ

ಮಗು ಹೊತ್ತುಯ್ದು ತಿಂದು ಸಾಯಿಸಿದ ಚಿರತೆ| ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯದಲ್ಲಿ ಗ್ರಾಮದಲ್ಲಿ ನಡೆದ ಘಟನೆ| ಸ್ಥಳಕ್ಕೆ ಅರಣ್ಯ ಇಲಾಖೆ‌ ಅಧಿಕಾರಿಗಳು, ಪೊಲೀಸರು ದೌಡು| ಪರಿಶೀಲನೆ ನಡೆಸಿದ ಅಧಿಕಾರಿಗಳು|

ರಾಮನಗರ(ಮೇ.09):  ಮಲಗಿದ್ದ ಮಗುವನ್ನು ಚಿರತೆಯೊಂದು ಹೊತ್ತುಯ್ದು ತಿಂದು ಸಾಯಿಸಿದ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯದಲ್ಲಿ ಗ್ರಾಮದಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. ಈ ಘಟನೆಯಿಂದ ಗ್ರಾಮಸ್ಥರು ಮನೆಬಿಟ್ಟು ಹೊರಗಡೆ ಬರುವುದಕ್ಕೂ ಹೆದರುತ್ತಿದ್ದಾರೆ.  

ಬೇಸಿಗೆ ಕಾಲವಾದ ಕಾರಣ ಸೆಕೆ, ಧಗೆ ಹೆಚ್ಚಾಗಿದ್ದರಿಂದ ಬಾಗಿಲನ್ನ ತೆಗೆದು ಮಲಗಿದ್ದರು. ಈ ವೇಳೆ ಆಗಮಿಸಿದ ಚಿರತೆ ಮೂರು ವರ್ಷದ ಗಂಡು ಮಗುವನ್ನ ಹೊತ್ತುಯ್ದು ದೂರದ ಅರಣ್ಯ ಪ್ರದೇಶದಲ್ಲಿ ಅರ್ಧ ತಿಂದು ಬಿಟ್ಟು ಹೋಗಿದೆ. 

ಕಲಬುರಗಿ: ಕೊರೋನಾ ಆತಂಕದ ಮಧ್ಯೆ ಚಿರತೆ ಪ್ರತ್ಯಕ್ಷ, ಬೆಚ್ಚಿಬಿದ್ದ ಗ್ರಾಮಸ್ಥರು..!

ವಿಷಯ ತಿಳಿದ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಅರಣ್ಯದಲ್ಲಿ ಪರಿಶೀಲಿಸಿದಾಗ ಮಗುವಿನ ಶವ ಸಿಕ್ಕಿದೆ. ಈ ವೇಳೆ ಮಗುವಿನ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 

PREV
click me!

Recommended Stories

ಐಬಿ ಅಧಿಕಾರಿ ಕೊಂದವನ ಪರ ಪೋಸ್ಟ್‌, ಸ್ವಾತಂತ್ರ್ಯ ದಿನವೇ ದೇಶದ್ರೋಹಿಯ ಪರ ನಿಂತ ನಟ ಕಿಶೋರ್‌
'ಇದಕ್ಕೇ ಭಂಡರು ಅಂತಾರೆ..' ಆರ್‌ಎಸ್‌ಎಸ್‌ ಮುಂದೆಯೂ ನೋಂದಣಿ ಆಗೋಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಕಾಶಪ್ಪನವರ್ ಕಿಡಿ