ಮದ್ಯ ಸೇವಿಸಿ ಕೊರೋನಾ ಚೆಕ್‌ಪೋಸ್ಟ್‌ ಮೇಲೆ ಲಾರಿ ಹತ್ತಿಸಿದ ಚಾಲಕ..!

By Kannadaprabha News  |  First Published May 9, 2020, 12:16 PM IST

ಲಾಕ್‌ಡೌನ್ ಇದ್ದರೂ ಈ ಮಧ್ಯೆ ಮದ್ಯ ಮಾರಾಟ ನಡೆಯುತ್ತಿದ್ದು, ನಶೆಯಲ್ಲಿದ್ದ ಲಾರಿ ಚಾಲಕ ಕರ್ತವ್ಯದಲ್ಲಿದ್ದ ಕೊರೋನಾ ಚೆಕ್‌ಪೋಸ್ಟ್ ಮೇಲೆ ಲಾರಿ ಹರಿಸಿದ ಘಟನೆ ನಡೆದಿದೆ.


ತುಮಕೂರು(ಮೇ 09): ಲಾಕ್‌ಡೌನ್ ಇದ್ದರೂ ಈ ಮಧ್ಯೆ ಮದ್ಯ ಮಾರಾಟ ನಡೆಯುತ್ತಿದ್ದು, ನಶೆಯಲ್ಲಿದ್ದ ಲಾರಿ ಚಾಲಕ ಕರ್ತವ್ಯದಲ್ಲಿದ್ದ ಕೊರೋನಾ ಚೆಕ್‌ಪೋಸ್ಟ್ ಮೇಲೆ ಲಾರಿ ಹರಿಸಿದ ಘಟನೆ ನಡೆದಿದೆ.

ಕುಣಿಗಲ್‌: ಕೊರೋನಾ ಲಾಕ್‌ಡೌನ್‌ ಹಿನ್ನೆಲೆ ನಿರ್ಮಿಸಲಾಗಿದ್ದ ಚೆಕ್‌ಪೋಸ್ಟ್‌ ಮೇಲೆ ಲಾರಿ ನುಗ್ಗಿ ಘಟನೆ ಯಡಿಯೂರಿನಲ್ಲಿ ನಡೆದಿದೆ. ಲಾರಿ ಚಾಲಕ ಪಾನಮತ್ತರಾಗಿ ಚೆಕ್‌ಪೋಸ್ಟ್‌ ಮೇಲೆ ನುಗ್ಗಸುತ್ತಿದ್ದುದನ್ನು ಕಂಡ ಸಿಬ್ಬಂದಿ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

Tap to resize

Latest Videos

undefined

8, 9ನೇ ತರಗತಿ ಫಲಿತಾಂಶ ಎಸ್‌ಎಟಿಎಸ್‌ನಲ್ಲಿ ಆಪ್‌ಲೋಡ್..?

ಚೆಕ್‌ಪೋಸ್ಟ್‌ ಮೇಲೆ ಲಾರಿ ನುಗ್ಗಿದ ಪರಿಣಾಮ ಚೆಕ್‌ಪೋಸ್ಟ್‌ ಧ್ವಂಸಗೊಂಡಿದೆ. ನಂತರ ಮುಂದೆ ಸಾಗಿದ ಲಾರಿ ಎದುರು ಬರುತಿದ್ದ ಕ್ಯಾಂಟರ್‌ ಗೆ ಡಿಕ್ಕಿ ಹೊಡೆದಿದೆ. ಕ್ಯಾಂಟರ್‌ ಮತ್ತು ಲಾರಿ ಚಾಲಕರು, ಕ್ಲೀನರ್‌ಗಳು ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ತಹಸಿಲ್ದಾರ್‌ ವಿಶ್ವನಾಥ್‌ ಸ್ಥಳ ಪರಿಶೀಲಿಸಿದರು. ಅಮೃತೂರು ಠಾಣೆಯಲ್ಲಿ ಪ್ರಕರಣ ದಾಲಾಗಿದೆ.

click me!