8, 9ನೇ ತರಗತಿ ಫಲಿತಾಂಶ ಎಸ್‌ಎಟಿಎಸ್‌ನಲ್ಲಿ ಆಪ್‌ಲೋಡ್..?

By Kannadaprabha NewsFirst Published May 9, 2020, 12:07 PM IST
Highlights

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಸುವುದರ ಜೊತೆಗೆ 8 ಮತ್ತು 9ನೇ ತರಗತಿ ಫಲಿತಾಂಶವನ್ನು ಎಸ್‌ಎಟಿಎಸ್‌ನಲ್ಲಿ ಅಪ್‌ಲೋಡ್‌ ಮಾಡಲು ಕ್ರಮವಹಿಸಿ ಹಾಗೂ ಅಕ್ಷರ ದಾಸೋಹ ದಾಸ್ತಾನನ್ನು ಆನ್‌ಲೈನ್‌ ತಂತ್ರಾಂಶದಲ್ಲಿ ತುಂಬಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

ಕೋಲಾರ(ಮೇ 09): ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಸುವುದರ ಜೊತೆಗೆ 8 ಮತ್ತು 9ನೇ ತರಗತಿ ಫಲಿತಾಂಶವನ್ನು ಎಸ್‌ಎಟಿಎಸ್‌ನಲ್ಲಿ ಅಪ್‌ಲೋಡ್‌ ಮಾಡಲು ಕ್ರಮವಹಿಸಿ ಹಾಗೂ ಅಕ್ಷರ ದಾಸೋಹ ದಾಸ್ತಾನನ್ನು ಆನ್‌ಲೈನ್‌ ತಂತ್ರಾಂಶದಲ್ಲಿ ತುಂಬಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.

ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆದ ತಾಲೂಕಿನ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾ, ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆಗಳ ಕುರಿತು ಮುಖ್ಯ ಅಧೀಕ್ಷಕರಿಂದ ಮಾಹಿತಿ ಪಡೆದ ಅವರು, ಚಂದನ ವಾಹಿನಿಯಲ್ಲಿ, ಯೂಟ್ಯೂಬ್‌ನಲ್ಲಿ ಪ್ರಸಾರವಾಗುತ್ತಿರುವ ಪರೀಕ್ಷಾ ಮಾಹಿತಿಯನ್ನು ಗಮನಿಸಲು ಮಕ್ಕಳಿಗೆ ಸೂಚಿಸಿದ್ದೀರಾ ಎಂದು ಪ್ರಶ್ನಿಸಿದರು.

'ಆನ್‌ಲೈನ್ ಬೇಡ': ಶಾಲೆ ಕಂಪೌಂಡ್ ಒಳಗಡೆ ನಡೆಯುತ್ತಾ ಪಾಠ..?

ಈಗಾಗಲೇ ಡಿಡಿಪಿಐ ಅವರು ಮೂರು ಬಾರಿ ಫೋನ್‌ಇನ್‌ ಕಾರ್ಯಕ್ರಮ ನಡೆಸಿ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ, ನೀವು ಶಾಲಾ ಹಂತದಲ್ಲಿ ಮಕ್ಕಳನ್ನು ಸಂಪರ್ಕಿಸಿ ಅವರ ಕಲಿಕಾ ಅಭ್ಯಾಸವನ್ನು ಗಮನಿಸುವ ಕೆಲಸ ಮಾಡಿ ಎಂದು ತಾಕೀತು ಮಾಡಿದರು. ರಾಜ್ಯ ಶಿಕ್ಷಣ ಸಚಿವರು ಈಗಾಗಲೇ ಪರೀಕ್ಷೆ ನಡೆಸುವ ಕುರಿತು ಸುಳಿವು ನೀಡಿರುವುದರಿಂದ ನೀವು ಎಚ್ಚೆತ್ತುಕೊಳ್ಳಬೇಕು ಮಕ್ಕಳನ್ನು ಸಂಪರ್ಕಿಸಿ ಅವರಿಗೆ ಆನ್‌ಲೈನ್‌ ತಂತ್ರಾಂಶದ ಮೂಲಕ ಸಾಧ್ಯವಾದಷ್ಟುಮಾರ್ಗದರ್ಶನ ನೀಡಬೇಕು ಎಂದರು.

ಹಾಗೆಯೇ 2ನೇ ಜೊತೆ ಸಮವಸ್ತ್ರವನ್ನು ಮಕ್ಕಳಿಗೆ ಒದಗಿಸಲು ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಈ ಕುರಿತು ಕ್ರಮವಹಿಸಬೇಕು. ಶಾಲಾ ಪರಿಸರ, ಕೋಣೆಗಳ ಸ್ವಚ್ಛತೆಗೆ ಗಮನಹರಿಸಿ, ಮೇ 4ರಿಂದ ಮುಖ್ಯ ಶಿಕ್ಷಕರು, ಗುಮಾಸ್ತ, ಡಿ ಗ್ರೂಪ್‌ ನೌಕರರ ಶೇ. 100ರಷ್ಟುಹಾಜರಾಗಿಕಡ್ಡಾಯಗೊಳಿಸಲಾಗಿದೆ. ಮಕ್ಕಳಿಂದ ಹಳೆಯ ಪಠ್ಯಪುಸ್ತಕಗಳನ್ನು ವಾಪಸ್ಸು ಪಡೆದುಕೊಳ್ಳಿ ಮತ್ತು ಈ ಕುರಿತು ಮಾಡಿರುವ ಸಂಗ್ರಹದ ಕುರಿತು ಮಾಹಿತಿ ನೀಡಲು ಸೂಚಿಸಿದರು.

ಕೊರೋನಾ ವಾರಿಯ​ರ್‍ಸ್ಗೆ ಗೌರವ ಸೆಲ್ಯೂಟ್‌:

ಮುಖ್ಯ ಶಿಕ್ಷಕರ ಸಭೆಯಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವಾರಿಯ​ರ್‍ಸ್ಗೆ ಸೆಲ್ಯೂಟ್‌ ಅರ್ಪಿಸಲಾಯಿತು ಮತ್ತು ಇತ್ತೀಚೆಗೆ ನಿಧನರಾದ ಕವಿ ನಿಸಾರ್‌ ಅಹಮದ್‌ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.ಸಭೆಯಲ್ಲಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ, ಇಸಿಒ ಮುನಿರತ್ನಯ್ಯಶೆಟ್ಟಿಸೇರಿದಂತೆ ತಾಲ್ಲೂಕಿನ ಎಲ್ಲಾ ಮುಖ್ಯ ಶಿಕ್ಷಕರು ಹಾಜರಿದ್ದರು.

click me!