ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಕ್ಷೇತ್ರ ಬಲಪಡಿಸಲು ನಿರ್ಧರಿಸಿರುವ ಶಾಸಕ ಡಾ. ವೀರಣ್ಣ ಚರಂತಿಮಠ ಪ್ರಯತ್ನದ ಫಲವಾಗಿ ಭಗವತಿ ಹಾಗೂ ಶಿರೂರ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ . 580 ಕೋಟಿ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬಾಗಲಕೋಟೆ (ಆ.6) : ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಕ್ಷೇತ್ರ ಬಲಪಡಿಸಲು ನಿರ್ಧರಿಸಿರುವ ಶಾಸಕ ಡಾ. ವೀರಣ್ಣ ಚರಂತಿಮಠ ಪ್ರಯತ್ನದ ಫಲವಾಗಿ ಭಗವತಿ ಹಾಗೂ ಶಿರೂರ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ . 580 ಕೋಟಿ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಕುರಿತು ಸರ್ಕಾರದ ಆದೇಶದ ಪ್ರತಿಗಳ ಜೊತೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ. ವೀರಣ್ಣ ಚರಂತಿಮಠ, ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ರೈತರ ಪ್ರಮುಖ ಬೇಡಿಕೆಯಾಗಿದ್ದ ಎರಡು ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಅನುಮೋದನೆ ನೀಡಿದ್ದು ಶೀಘ್ರದಲ್ಲಿಯೇ ಕಾಮಗಾರಿಗಳಿಗಾಗಿ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.
ಕೊಪ್ಪಳ: ನೀರು ಬಾರದ ಕಾಲುವೆಗೆ ಕೋಟ್ಯಂತರ ರು. ವೆಚ್ಚ!
undefined
50 ಸಾವಿರ ಎಕರೆ ನೀರಾವರಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿಜಲಾಶಯದಿಂದ ನೀರನ್ನು ಬಳಸಿಕೊಂಡು ಭಗವತಿ ಏತ ನೀರಾವರಿ ಯೋಜನಾ ವ್ಯಾಪ್ತಿಯ 14 ಗ್ರಾಮಗಳ ಭೂಮಿಗಳಿಗೆ ಹಾಗೂ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಜೊತೆಗೆ ನಾಲ್ಕು ಗ್ರಾಮಗಳ ಕೆರೆಗಳನ್ನು ಸಹ ತುಂಬಿಸುವ ಯೋಜನೆ ಇದಾಗಿದೆ. ಭಗವತಿ ಏತ ನೀರಾವರಿಗೆ 1.563 ಟಿಎಂಸಿ ನೀರಿನ ಕೋರಿಕೆಯೊಂದಿಗೆ ಯೋಜನೆಗೆ ಬೇಕಾದ . 346 ಕೋಟಿ ಅಂದಾಜು ಮೊತ್ತದ ಪ್ರಸ್ತಾವನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆ ಸಾಕಾರಗೊಂಡಾಗ 22 ಸಾವಿರ ಎಕರೆ ಪ್ರದೇಶಕ್ಕೆ ನೀರು ತಲುಪಲಿದೆ ಎಂದು ತಿಳಿಸಿದರು.
ಶಿರೂರ ಏತ ನೀರಾವರಿ ಯೋಜನೆಗೂ ಸರ್ಕಾರ ಅನುಮತಿ ನೀಡಿದ್ದು, . 243 ಕೊಟಿ ವೆಚ್ಚದಲ್ಲಿ 26 ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಜೊತೆಗೆ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರು ತಲುಪಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಸರ್ಕಾರ ಒಪ್ಪಿಗೆ ನಿಡಿದೆ. ಬಾದಾಮಿ ಹಾಗೂ ಬಾಗಲಕೋಟೆ ತಾಲೂಕಿನ ಘಟಪ್ರಭಾ ಬಲದಂಡೆಯ ಕಾಲುವೆಗಳ ಮೂಲಕ ಕೃಷ್ಣಾ ನದಿಯಿಂದ ನೀರು ಒದಗಿಸುವ ಈ ಯೋಜನೆ ಸಾಕಾರಗೊಂಡರೆ ನಿಶ್ಚಿತವಾಗಿಯೂ ಬರಡು ಭೂಮಿ ನೀರಿನಿಂದ ಕಂಗೊಳಿಸಲಿದೆ ಎಂದು ಹೇಳಿದರು.
ಏತ ನೀರಾವರಿ ಯೋಜನೆಗೆ ಬೊಮ್ಮಾಯಿ ಚಾಲನೆ, ಸಿಎಂಗೆ ಗೋ ಕಾಣಿಕೆ ನೀಡಿದ ರೈತರು..!
2 ಏತ ನೀರಾವರಿ ಯೋಜನೆಗಳು ಕೃಷ್ಣಾ ನದಿ ನೀರಿನಿಂದ ಸಕಾರಗೊಳ್ಳಲಿದ್ದು, ಈಗಾಗಲೇ ಸಂಬಂಧಿಸಿದ ಜಲ ಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮ, ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಯೋಜನಾ ವರದಿ ಸಿದ್ಧಗೊಮಡಿದ್ದು, ಸದ್ಯದಲ್ಲಿಯೇ ಅನುಷ್ಠಾನಗೊಳ್ಳಲಿದೆ ಎಂದರು.
ಮುಚಖಂಡಿ ಕೆರೆ ತುಂಬಿಸಲು . 49 ಕೋಟಿ: ಬಾಗಲಕೋಟೆ ಸಮೀಪದ ಐತಿಹಾಸಿಕ 878 ಎಕರೆ ವಿಸ್ತಾರದ ಮುಚಖಂಡಿ ಕೆರೆಗೆ ನೀರು ತುಂಬಿಸುವ ಕಾಮಗಾರಿಗಾಗಿ ಸಣ್ಣ ನೀರಾವರಿ ಇಲಾಖೆ ಎರಡನೆ ಹಂತದ ಯೋಜನೆಗೆ ಅನುಮತಿ ನೀಡಿದ್ದು ಇದಕ್ಕಾಗಿ . 49 ಕೋಟಿ ನೀಡಲಿದೆ. ಸಣ್ಣ ನೀರಾವರಿ ಇಲಾಖೆ ಈ ಮೊದಲು ಘಟಪ್ರಭಾ ನದಿಯಿಂದ ನೀರನ್ನು ಎತ್ತಿ ಮುಚಖಂಡಿ ಕೆರೆಗೆ ನೀರು ತುಂಬಿಸಲು . 12 ಕೋಟಿ ಹಣದಲ್ಲಿ ಕಾಮಗಾರಿ ಕೈಗೊಂಡಿದ್ದು, ಆದರೆ, ಆ ಯೋಜನೆ ಪೂರ್ಣ ಸಾಕಾರಗೊಂಡಿರಲಿಲ್ಲ. ಹೀಗಾಗಿ ಇದೀಗ . 49 ಕೊಟಿ ವೆಚ್ಚದಲ್ಲಿ ಮತ್ತೆ ಹೊಸ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಸದ್ಯದಲ್ಲಿಯೇ ಚಾಲನೆ ಸಿಗಲಿದೆ.