ಕಟ್ಟಡ ಕಾಮಗಾರಿ ವೇಳೆ ಮಂಗಳೂರಿನಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ. ಇದೀಗ ಸತತ ಎರಡು ಗಂಟೆ ಹೆಚ್ಚು ಕಾಲ ಮಣ್ಣಿನಡಿ ಸಿಲುಕಿದ ಓರ್ವ ಕಾರ್ಮಿಕನ್ನು ರಕ್ಷಣೆ ಮಾಡಲಾಗಿದೆ.
ಮಂಗಳೂರು (ಜು.3): ಕಟ್ಟಡ ಕಾಮಗಾರಿ ವೇಳೆ ಮಂಗಳೂರಿನಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ. ಇದೀಗ ಸತತ ಎರಡು ಗಂಟೆ ಹೆಚ್ಚು ಕಾಲ ಮಣ್ಣಿನಡಿ ಸಿಲುಕಿದ ಓರ್ವ ಕಾರ್ಮಿಕನ್ನು ರಕ್ಷಣೆ ಮಾಡಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮತ್ತೋರ್ವನ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ.
ಮಂಗಳೂರಿನ ಬಲ್ಮಠ ರೋಡ್ ಸಮೀಪದ ರೋಹನ್ ಕಾರ್ಪೋರೇಶನ್ ಗೆ ಸೇರಿದ ಕಟ್ಟಡ ನಿರ್ಮಾಣ ವೇಳೆ ಈ ದುರ್ಘಟನೆ ನಡೆದಿದೆ. ಸುಮಾರು 40 ಅಡಿ ಗುಂಡಿ ಅಗೆದು ಕಾಮಗಾರಿ ನಡೆಸಲಾಗುತ್ತಿತ್ತು. ನಾಲ್ಕೈದು ದಿನಗಳ ಕಾಲ ಸುರಿದ ಭಾರಿ ಮಳೆಗೆ ಮಣ್ಣು ಸಡಿಲಗೊಂಡಿದ್ದ ಪರಿಣಾಮ ಏಕಾಎಕಿ ತಡೆಗೋಡೆ ಪಕ್ಕವೇ ಮಣ್ಣು ಕುಸಿದು, ಕಾಂಕ್ರೀಟ್ ಸ್ಲ್ಯಾಬ್ ಮಧ್ಯೆ ಇಬ್ಬರು ಕಾರ್ಮಿಕರು ಸಿಲುಕಿದ್ದಾರೆ. ಎಸ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಪೊಲೀಸರು ಹಾಗೂ ಕಾರ್ಮಿಕರಿಂದ ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ. ಓರ್ವ ಕಾರ್ಮಿಕನನ್ನು ಈಗಾಗಲೇ ರಕ್ಷಣೆ ಮಾಡಲಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಾಗಮಲೆಗೆ ಭಕ್ತರಿಗೆ, ಚಾರಣಿಗರಿಗೆ ನಿಷೇಧ ಭಕ್ತಾಧಿಗಳ ನಂಬಿ ಬದುಕಿದ್ದ ಜನರ ಕೈ ಖಾಲಿ!
ಸ್ಥಳಕ್ಕೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಕಳೆದ ಮೂರು ದಿನದ ಹಿಂದೆ ಸುರಿದ ಮಳೆಯಿಂದ ಮಣ್ಣಿನ ದಿಬ್ಬ ಸಡಿಲಗೊಂಡಿದ್ದ ಪರಿಣಾಮ ಈ ದುರಂತ ನಡೆದಿದೆ. ಬಿಹಾರ ಮೂಲದ ಇಬ್ಬರು ಕಾರ್ಮಿಕರು ಎಂದು ತಿಳಿದುಬಂದಿದ್ದು, ಚಂದನ್ ಮತ್ತು ರಾಜಕುಮಾರ್ ಮಣ್ಣಿನಡಿ ಸಿಲುಕಿರುವ ಕಾರ್ಮಿಕರಾಗಿದ್ದಾರೆ. ಘಟನಾ ಸ್ಥಳದ ಬಳಿ ಸಹ ಕಾರ್ಮಿಕರು ಅಳುತ್ತಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಜ್‌ಕುಮಾರ್ ನನ್ನು ರಕ್ಷಣೆ ಮಾಡಿದ್ದು, ಚಂದನ್ ಕುಮಾರ್ ರಕ್ಷಣೆಗೆ ಕಾರ್ಯಾಚರಣೆ ತೀವ್ರಗೊಂಡಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಸ್ಥಳದಲ್ಲೇ ಇದ್ದಾರೆ.
ಮಣ್ಣಿನಡಿ ಸಿಲುಕಿರೋ ಕಾರ್ಮಿಕ ಚಂದನ್ ಚಲನವಲನ ಮಾನಿಟರ್ ಮಾಡಲಾಗುತ್ತಿದೆ. ವೆನ್ ಲಾಕ್ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರಿಂದ ತಪಾಸಣೆ ನಡೆಯುತ್ತಿದೆ. ಎನ್ ಡಿಆರ್ ಎಫ್ ಟೀಂ ಕಾಂಕ್ರೀಟ್ ತಡೆಗೋಡೆ ಕೊರೆದ ಕನ್ನದಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಚಂದನ್ ಚಲನವಲನ ಒಳಭಾಗದಲ್ಲಿ ವೈದ್ಯರಿಗೆ ಕಾಣಿಸುತ್ತಿದೆ. ಹೀಗಾಗಿ ವೈದ್ಯರ ತಂಡ ಹೊರಗಿನಿಂದಲೇ ಪರಿಶೀಲನೆ ನಡೆಸ್ತಿದೆ. ಕಾರ್ಮಿಕ ಚಂದನ್ ಕೈ ಹೊರ ಭಾಗಕ್ಕೆ ಕಾಣುತ್ತಿರೋದ್ರಿಂದ ಪಲ್ಸ್ ಮೀಟರ್ ಮೂಲಕ ಚಂದನ್ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ರಕ್ತದೊತ್ತಡದ ಸಮಸ್ಯೆಯಿಂದ ಚಂದನ್ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ಸದ್ಯ ಡ್ರಿಪ್ಸ್ ಹಾಗೂ ಆಕ್ಸಿಜನ್ ನೀಡುವ ಮೂಲಕ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ದೆಹಲಿಯ ಕರ್ನಾಟಕ ಭವನದಲ್ಲಿ ಕಿಚನ್ ವಿಭಾಗದ ನೌಕರನಾಗಿದ್ದ ಯುವಕ ಆತ್ಮಹತ್ಯೆ!
ಮಣ್ಣು ಕುಸಿದ ಜಾಗಕ್ಕೆ ಕ್ರೇನ್ ಮೂಲಕ ಜೆಸಿಬಿ ಇಳಿಸೋ ಕಾರ್ಯ ನಡೆಯುತ್ತಿದೆ. ಕಾರ್ಯಾಚರಣೆ ಭಾರೀ ಮಳೆ ಅಡ್ಡಿಯಾದ ಹಿನ್ನೆಲೆ ಕೇನ್ ಗೆ ಜೆಸಿಬಿ ಕಟ್ಟಿ ಕೆಳಗಿಸಿ ಭಾರೀ ಮಳೆಯ ನಡುವೆಯೂ ಎನ್ ಡಿ ಆರ್‌ಎಫ್ ಟೀಂ ಕಾರ್ಯಾಚರಣೆ ನಡೆಸುತ್ತಿದೆ. ಭಾರೀ ಮಳೆಗೆ ಮತ್ತೆ ಮಣ್ಣು ಕುಸಿಯುವ ಆತಂಕ ಕೂಡ ಎದುರಾಗಿದ್ದು, ಸದ್ಯ ಕಾರ್ಯಾಚರಣೆ ಸ್ಥಳಕ್ಕೆ ಜನರೇಟರ್ ಇಳಿಸುವ ಕಾರ್ಯ ನಡೆಯುತ್ತಿದೆ. ಕಟ್ಟಿಂಗ್ ಮೆಷಿನ್ ಬಳಸಲು ಜನರೇಟರ್ ಬಳಕೆ ಮಾಡಲಾಗಿದೆ. ಕಳೆದ ಮೂರು ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.