
ಸಂಪತ್ ತರೀಕೆರೆ
ಬೆಂಗಳೂರು(ಮೇ.10): ಶಿವಾನಂದ ವೃತ್ತದ(Shivananda Circle) ಬಳಿ ನಿರ್ಮಾಣವಾಗುತ್ತಿರುವ ಉಕ್ಕಿನ ಮೇಲ್ಸೇತುವೆ(Steal Bridge) ಸಂಚಾರಕ್ಕೆ ಮುಕ್ತಗೊಳ್ಳಲು ಭೂ ವಿವಾದ ಅಡ್ಡಿಯಾಗಿದೆ. ಹತ್ತಾರು ಗಡುವುಗಳು ಪೂರ್ಣಗೊಂಡರೂ ಮಳೆಗಾಲ ಆರಂಭಕ್ಕೂ ಮೊದಲು ಕಾಮಗಾರಿ ಮುಗಿಯುವುದು ಅನುಮಾನ.
2017ರ ಮಾರ್ಚ್‌ನಲ್ಲಿ ಶಿವಾನಂದ ವೃತ್ತದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಎಂ.ವೆಂಕಟರಾವ್ ಇನ್‌ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕಾಮಗಾರಿ ಗುತ್ತಿಗೆ ವಹಿಸಿ ಬಿಬಿಎಂಪಿ ಕಾರ್ಯಾದೇಶ ನೀಡಿತ್ತು. ಗುತ್ತಿಗೆ ಕಂಪನಿ ಕಾಮಗಾರಿ ಆರಂಭಿಸಿದ 13 ತಿಂಗಳಲ್ಲಿ (2018 ಜೂನ್) ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ, ನಿಗದಿತ ಅವಧಿ ಮುಗಿದ ನಾಲ್ಕು ವರ್ಷವಾದರೂ ಯೋಜನೆಗೆ ಮುಕ್ತಿ ಸಿಕ್ಕಿಲ್ಲ.
Land Acquisition Dispute: ಬೆಂಗ್ಳೂರಿನ ಶಿವಾನಂದ ಸ್ಟೀಲ್ ಬ್ರಿಡ್ಜ್ ವಿನ್ಯಾಸ ಬದಲು..!
ಪ್ರಸ್ತುತ ಶೇ.20ರಷ್ಟು ಕಾಮಗಾರಿ ಮಾತ್ರ ಬಾಕಿದ್ದು ಯೋಜನೆ ಪೂರ್ಣಗೊಳ್ಳಲು ಬೇಕಾದ ಭೂಮಿ ಸ್ವಾಧೀನಗೊಳ್ಳಬೇಕಿದೆ(Land Acquisition). ಆದರೆ ನ್ಯಾಯಾಲಯದಲ್ಲಿರುವ(Court) ಪ್ರಕರಣ ಇತ್ಯರ್ಥಗೊಳ್ಳದ ಹೊರತು ಕಾಮಗಾರಿ ನಡೆಸದ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು .60 ಕೋಟಿ ವೆಚ್ಚದಲ್ಲಿ ರೇಸ್‌ಕೋರ್ಸ್ ವೃತ್ತದಿಂದ ಶೇಷಾದ್ರಿಪುರ ಸಂಪರ್ಕಿಸುವ ರಸ್ತೆಯಲ್ಲಿ 493 ಮೀಟರ್ ಉದ್ದದ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇ.80ರಷ್ಟು ಕಾಮಗಾರಿಯೂ ಪೂರ್ಣಗೊಂಡಿದೆ. ಈ ಪೈಕಿ 15 ಕಂಬದ ಕಾರ್ಯ ಮುಗಿದಿದ್ದು, ಒಂದು ಮಾತ್ರ ಬಾಕಿ ಇದೆ. ಅಂತಿಮ ವಿನ್ಯಾಸ, ತಡೆಗೋಡೆ ನಿರ್ಮಾಣ, 1 ಸ್ಲಾ್ಯಬ್, ರಾರಯಂಪಿಂಗ್ ಮತ್ತಿತರರ ಕೆಲಸಗಳು ಸೇರಿ 30 ದಿನಗಳ ಕಾಮಗಾರಿ ಮಾತ್ರ ಉಳಿದಿದೆ. ನ್ಯಾಯಾಲಯ ಅನುಮತಿ ನೀಡಿದರೆ ಶೀಘ್ರವೇ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸುವುದಾಗಿ ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ರೇಸ್‌ಕೋರ್ಸ್ ರಸ್ತೆಯ ಕಡೆಯ ಮೇಲ್ಸೇತುವೆ ಕಾರ್ಯ ಪೂರ್ಣಗೊಂಡಿದ್ದು, ಕ್ರಾಶ್ ಬ್ಯಾರಿಯರ್ ಸೇರಿದಂತೆ ಮತ್ತಿತರ ವಿನ್ಯಾಸದ ಕಾರ್ಯಗಳು ಹಾಗೂ ಶೇಷಾದ್ರಿಪುರ ರೈಲ್ವೆ ಮೇಲ್ಸೆತುವೆ ಕಡೆ ಬಹುತೇಕ ಎಲ್ಲ ಕೆಲಸ ಬಾಕಿ ಇವೆ. ಪ್ರಸ್ತುತ ರೈಲ್ವೆ ಮೇಲ್ಸೇತುವೆಯಿಂದ 95 ಮೀಟರ್‌ಗೂ ಮುಂಚೆಯೇ ಸೇತುವೆ ಕಾಮಗಾರಿ ಮುಕ್ತಾಯಗೊಂಡಿದೆ. ಇದರಿಂದಾಗಿ ಹೆಚ್ಚುವರಿಯಾಗಿ ವೆಚ್ಚವಾಗಬೇಕಿದ್ದ .40ರಿಂದ 50 ಕೋಟಿ ಉಳಿತಾಯವಾದಂತಾಗಲಿದೆ. ಒಂದು ವೇಳೆ ಮೇಲ್ಸೇತುವೆ ರಾರಯಂಪನ್ನು ಇನ್ನೂ 45 ಮೀಟರ್ ಮುಂದಕ್ಕೆ ತಂದರೆ ಯೋಜನೆಗಾಗಿ ಅಕ್ಕಪಕ್ಕದ ಅಂಗಡಿ, ಮನೆಗಳು ಸೇರಿದಂತೆ ಖಾಸಗಿಯವರಿಂದ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಬೇಕಾಗುತ್ತದೆ. ಇದರಿಂದ ಭೂ ಸ್ವಾಧೀನಕ್ಕಾಗಿಯೇ ಹೆಚ್ಚುವರಿಯಾಗಿ 50 ಕೋಟಿ ಬೇಕಾಗುತ್ತದೆ.
ಹಾಗಾಗಿ ಶಿವಾನಂದ ವೃತ್ತದ ಸಮೀಪವಿರುವ ಬೆಂಗಳೂರು ಕೆಫೆ ಬಳಿಯೇ ಸೇವೆಯನ್ನು ಕೊನೆಗೊಳಿಸಲು ಯೋಜನೆ ರೂಪಿಸಲಾಗಿದೆ. ಬೇಕೆಂದೇ ಯೋಜನೆಯನ್ನು ಶೇಷಾದ್ರಿಪುರಂ ರೈಲ್ವೇ ಮೇಲ್ಸೇತುವೆಯಿಂದ 95 ಮೀಟರ್ ದೂರ ಇರುವಂತೆಯೇ ಪೂರ್ಣಗೊಳಿಸಲಾಗುತ್ತಿದೆ. ರಾರಯಂಪನ್ನು 45 ಮೀಟರ್ ಮುಂದಕ್ಕೆ ತರುವುದರಿಂದ ಸುತ್ತಮುತ್ತಲ ಅಂಗಡಿ, ನಿವಾಸಿಗಳಿಗೆ, ಸಾರ್ವಜನಿಕರಿಗೆ ಅಗುವ ತೊಂದರೆ ನಿವಾರಿಸಬಹುದಿತ್ತು ಎಂದು ಕೋರ್ಚ್‌ನಲ್ಲಿ ದಾವೆ ಹೂಡಲಾಗಿದ್ದು, ಇತ್ಯರ್ಥ ಬಾಕಿ ಉಳಿದೆ.
ವಾಹನ ಸವಾರರ ಪರದಾಟ
ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಉಕ್ಕಿನ ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ, ಕಾಮಗಾರಿ ವಿಳಂಬದಿಂದ ಈ ಸೇತುವೆಯೇ ದಟ್ಟಣೆ ಹೆಚ್ಚಲು ಕಾರಣವಾಗಿದೆ. ದಟ್ಟಣೆ ಸಮಯದಲ್ಲಿ(ಪೀಕ್ ಅವರ್) ವಾಹನಗಳು ಸಾಲುಗಟ್ಟಿನಿಲ್ಲುತ್ತವೆ.ಈ ಸಂದರ್ಭದಲ್ಲಿ ಪಾದಾಚಾರಿಗಳು ಸಂಚರಿಸಲು ಹರಸಾಹಸ ಪಡಬೇಕು. ರೇಸ್‌ಕೋರ್ಸ್ ರಸ್ತೆಯಿಂದ ಆಗಮಿಸಿ ಶಿವಾನಂದ ವೃತ್ತದಲ್ಲಿ ಕುಮಾರಕೃಪ ರಸ್ತೆಗೆ ಹೋಗುವುದನ್ನು ನಿಷೇಧಿಸಲಾಗಿದೆ.
ಸ್ಟೀಲ್ ಬ್ರಿಜ್ ಕೈ ಬಿಟ್ಟಿದ್ದು ಹೋರಾಟದ ಫಲ : ರಾಜೀವ್ ಚಂದ್ರಶೇಖರ್
ರೇಸ್‌ಕೋರ್ಸ್ ರಸ್ತೆಯಿಂದ ಕುಮಾರಕೃಪ ರಸ್ತೆಗೆ ಹೋಗಬೇಕಾದ ವಾಹನ ಸವಾರರು ನೇರವಾಗಿ ಶೇಷಾದ್ರಿಪುರಂ ವೃತ್ತದಲ್ಲಿ ಯೂಟರ್ನ್ ತೆಗೆದುಕೊಂಡು ಬರಬೇಕು. ಅಂತೆಯೇ ಶೇಷಾದ್ರಿಪುರಂ ಕಡೆಯಿಂದ ಬಂದ ವಾಹನಗಳು ಶಿವಾನಂದ ವೃತ್ತದಲ್ಲಿ ಬಲಕ್ಕೆ ತಿರುಗಿ ಜನಾರ್ಧನ ಹೋಟೆಲ್ ಕಡೆಗೆ ಪ್ರವೇಶಿಸುವುದನ್ನು ಕೂಡ ರದ್ದುಪಡಿಸಲಾಗಿದೆ. ಶೇಷಾದ್ರಿಪುರಂ ಮತ್ತು ರೇಸ್‌ಕೋರ್ಸ್ ಕಡೆಯಿಂದ ಬರುವ ವಾಹನಗಳು ಕುಮಾರಕೃಪಾ (ಗಾಂಧಿ ಭವನದ ಕಡೆಗೆ) ಮತ್ತು ಜನಾರ್ಧನ ಹೋಟೆಲ್ ಕಡೆಗೆ ಹೋಗಲು ಹರ ಸಾಹಸ ಪಡಬೇಕಾದ ಸ್ಥಿತಿ ಇದೆ.
ಯೋಜನೆ ಪೂರ್ಣಗೊಳಿಸಲು ಇನ್ನು 30 ದಿನಗಳ ಕಾಮಗಾರಿಯಷ್ಟೇ ಬಾಕಿ ಇದೆ. ರೈಲ್ವೆ ಮೇಲ್ಸೇತುವೆಗಿಂತ 50 ಮೀಟರ್ ಮುಂಚೆ ರಾರಯಂಪ್ ತರಲು .50 ಕೋಟಿ ಹೆಚ್ಚುವರಿಯಾಗಿ ಬೇಕಾಗುತ್ತದೆ. ಈಗಿರುವಂತೆ ಯೋಜನೆ ಪೂರ್ಣಗೊಳಿಸಿದರೆ ಹೆಚ್ಚುವರಿ ಭೂಮಿ ಸ್ವಾಧೀನದ ಅವಶ್ಯಕತೆ ಇಲ್ಲ. ಪ್ರಕರಣ ಕೋರ್ಚ್‌ನಲ್ಲಿದ್ದು, ಅನುಮತಿ ಸಿಕ್ಕಿದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಅಂತ ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್ ತಿಳಿಸಿದ್ದಾರೆ.