ಮಂಡ್ಯ(ಜೂ.13): ಅತ್ತಿಗೆ ನಾದಿನಿ ನಡುವೆ ಮಾರಾ ಮಾರಿ ನಡೆದು ಇಬ್ಬರೂ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ಶನಿವಾರ ನಡೆದಿದೆ.
ಮಂಡ್ಯ ತಾಲೂಕು ಕಂಬದಹಳ್ಳಿಯಲ್ಲಿ ಅತ್ತಿಗೆಯನ್ನು ಕೊಂದ ಬಳಿಕ ನಾದಿನಿಯೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅತ್ತಿಗೆ ಪ್ರೀಯಾಂಕ (32)ಯನ್ನು ಕೊಂದು ನಾದಿನಿ ಗಿರಿಜಾ (31) ತಾನೂ ನೇಣಿಗೆ ಶರಣಾಗಿದ್ದಾಳೆ.
ಶಿರಸಿ: ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ...
ದಿನವೂ ಇಬ್ಬರ ನಡುವೆ ಗಲಾಟೆ ನಡೆಯುತ್ತಿದ್ದು, ಇದೀಗ ಇಬ್ಬರ ಸಾವಿನಲ್ಲಿ ಘಟನೆ ಅಂತ್ಯವಾಗಿದೆ. ಕೌಟುಂಬಿಕ ಕಲಹವು ಇದೀಗ ಅತ್ತಿಗೆ ನಾದಿನಿಯರಿಬ್ಬರ ಪ್ರಾಣವನ್ನೇ ಬಲಿ ಪಡೆದಿದೆ.
ಈ ಸಂಬಂದ ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.