ಶೂನ್ಯ ಬಡ್ಡಿ ಸಾಲಕ್ಕೆ ಷರತ್ತು: ರೈತರಿಗೆ ಹೊಸ ಕಂಟಕ..!

By Kannadaprabha News  |  First Published Jun 13, 2021, 9:05 AM IST

* ಅಲ್ಪಾವಧಿ ಕೃಷಿ ಸಾಲ ನೀಡಲು ಸರ್ಕಾರದಿಂದ 2 ಷರತ್ತು
* ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೇಲಿ 23,044 ಮಂದಿ ಅನರ್ಹ
* ಈ ಸಲ ಷರತ್ತು ವಿಧಿಸಿ ಆದೇಶ ಹೊರಡಿಸಿದ ಸಹಕಾರ ಇಲಾಖೆ


ಆತ್ಮಭೂಷಣ್‌

ಮಂಗಳೂರು(ಜೂ.13): ಆರ್ಥಿಕ ಸಂಕಷ್ಟದ ಸಂದಿಗ್ದತೆಯ ನಡುವೆಯೇ 3 ಲಕ್ಷ ರುಪಾಯಿ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಪಡೆದುಕೊಳ್ಳುವ ರೈತರಿಗೆ ಸರ್ಕಾರ ಅಘಾತ ನೀಡಿದೆ. ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯಬೇಕಾದರೆ ಈ ವರ್ಷ ಕೆಲವು ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಇದರಿಂದ ರಾಜ್ಯದಲ್ಲಿ ಬಹುತೇಕ ರೈತರು ಶೂನ್ಯ ಬಡ್ಡಿದರ ಸಾಲ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.

Tap to resize

Latest Videos

ಹಿಡುವಳಿ ಬೇರೆ ಬೇರೆ ಇದ್ದರೂ ಹಳ್ಳಿಗಳಲ್ಲಿ ಅವಿಭಕ್ತ ಕುಟುಂಬ ಜೀವನ ಈಗಲೂ ಇದೆ. ಬಡವರಾಗಿದ್ದು, ಅರ್ಹತೆ ಹೊಂದಿದ್ದರೂ ಅಂತಹವರಿಗೆ ಹೊಸ ಮಾನದಂಡ ಕಾರಣಕ್ಕೆ ಶೂನ್ಯ ಬಡ್ಡಿದರದಲ್ಲಿ ಇನ್ನು ಸಾಲ ಸಿಗದು. 2004ರಿಂದ ರಾಜ್ಯ ಸರ್ಕಾರ ಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರು. ವರೆಗೆ ಅಲ್ಪಾವಧಿ ಕೃಷಿ ಸಾಲ ನೀಡುತ್ತಿದೆ. ವಾರ್ಷಿಕ ಕೃಷಿ ನಿರ್ವಹಣೆಗೆ ನೀಡುವ ಸಾಲ ಇದು. ಈ ಸಲ ಷರತ್ತು ವಿಧಿಸಿ ಸಹಕಾರ ಇಲಾಖೆ ಆದೇಶ ಹೊರಡಿಸಿದೆ. ಈ ಷರತ್ತುಗಳಲ್ಲಿ ಯಾವುದೇ ಒಂದು ಷರತ್ತು ಇದ್ದರೂ ರೈತರಿಗೆ ಶೂನ್ಯ ಬಡ್ಡಿ ದರ ಸೌಲಭ್ಯ ಸಿಗುವುದಿಲ್ಲ. ಬದಲು ನಿಗದಿತ ಶೇ.7 ಬಡ್ಡಿದರ ನೀಡಬೇಕಾಗುತ್ತದೆ.

ಷರತ್ತುಗಳಿವು

1.ಅಲ್ಪಾವಧಿ ಕೃಷಿ ಸಾಲ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ಗರಿಷ್ಠ 3 ಲಕ್ಷ ರು.ವರೆಗಿನ ಸಾಲಗಳಿಗೆ ಮಾತ್ರ ಎಂಬ ಷರತ್ತು(ಆದೇಶ ಸಂಖ್ಯೆ ಸಿಒ/ ಸಿಎಲ್‌ಎಸ್‌/ 2020 ದಿನಾಂಕ 5-5-2020) ವಿಧಿಸಲಾಗಿದೆ.
2.ಮಾಸಿಕ 20 ಸಾವಿರ ರು. ವೇತನ/ ಪಿಂಚಣಿ ಪಡೆಯುತ್ತಿರುವ ಅಥವಾ ಕಳೆದ 3 ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸಿದ್ದರೆ ಅಂತಹ ರೈತರಿಗೆ ಕೂಡ ಬಡ್ಡಿ ಪ್ರೋತ್ಸಾಹಧನ (ಶೂನ್ಯ ಬಡ್ಡಿದರ) ಸಿಗುವುದಿಲ್ಲ ಎಂದು ಷರತ್ತಿನಲ್ಲಿ ನಮೂದಿಸಲಾಗಿದೆ.

ರಾಜ್ಯದಲ್ಲಿ 3.06 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣ

ಅವಿಭಜಿತ ದ.ಕ. ಜಿಲ್ಲೇಲಿ 23,044 ಮಂದಿ ಅನರ್ಹ!

ಸರ್ಕಾರದ ಈ ಆದೇಶ ಇಡೀ ರಾಜ್ಯಕ್ಕೆ ಅನ್ವಯವಾಗಲಿದ್ದು, ಸಾವಿರಾರು ರೈತರು ಶೂನ್ಯ ಬಡ್ಡಿದರ ಸಾಲ ಸೌಲಭ್ಯದಿಂದ ಹೊರಗುಳಿಯಲಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 23,044 ಮಂದಿ ರೈತರು ಶೂನ್ಯ ಬಡ್ಡಿದರದ ಅಲ್ಪಾವಧಿ ಕೃಷಿ ಸಾಲ ಯೋಜನೆಗೆ ಅನರ್ಹರಾಗುತ್ತಾರೆ. ಇವರಿಗೆ ಶೂನ್ಯಬಡ್ಡಿದರದಿಂದ ಸಿಗುವ 354.91 ಕೋಟಿ ರು. ಸಾಲ ಕೈತಪ್ಪಿ ಹೋಗಲಿದೆ. ದ.ಕ.ದಲ್ಲಿ 14,828 ಮಂದಿಗೆ 249.28 ಕೋಟಿ ರು, ಉಡುಪಿಯಲ್ಲಿ 8,216 ಮಂದಿಗೆ 105.63 ಕೋಟಿ ರು. ಸೌಲಭ್ಯ ವಂಚನೆಯಾಗಲಿದೆ.

ಶೂನ್ಯ ಬಡ್ಡಿದರದ ಅಲ್ಪಾವಧಿ ಕೃಷಿ ಸಾಲಕ್ಕೆ ಪ್ರತ್ಯೇಕ ಷರತ್ತು ವಿಧಿಸಬಾರದು ಎಂದು ಸಹಕಾರ ಸಚಿವ ಸೋಮಶೇಖರ್‌ ಅವರಿಗೆ ಮನವಿ ಮಾಡಲಾಗಿದೆ. ವಿಧಿಸಿರುವ ಷರತ್ತುಗಳನ್ನು ಹಿಂಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರಲ್ಲಿ ವಿನಂತಿಸಲಾಗಿದೆ. ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. 
 

click me!