ಸೇನೆ, ಅರೆಸೇನಾ ಪಡೆಗಳ ಘರ್ಷಣೆಯಿಂದ ನಲುಗಿರುವ ಸೂಡಾನ್ ದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಕರ್ನಾಟಕದ 800ಕ್ಕೂ ಹೆಚ್ಚು ಹಕ್ಕಿಪಿಕ್ಕಿಗಳೂ ಸೇರಿ 3 ಸಾವಿರ ಭಾರತೀಯರ ರಕ್ಷಣೆಗೆ ಡೀಸೆಲ್ ಕೊರತೆಯಿಂದಾಗಿ ಅಡ್ಡಿಯಾಗಿದೆ.
ದಾವಣಗೆರೆ (ಏ.25) : ಸೇನೆ, ಅರೆಸೇನಾ ಪಡೆಗಳ ಘರ್ಷಣೆಯಿಂದ ನಲುಗಿರುವ ಸೂಡಾನ್ ದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಕರ್ನಾಟಕದ 800ಕ್ಕೂ ಹೆಚ್ಚು ಹಕ್ಕಿಪಿಕ್ಕಿಗಳೂ ಸೇರಿ 3 ಸಾವಿರ ಭಾರತೀಯರ ರಕ್ಷಣೆಗೆ ಡೀಸೆಲ್ ಕೊರತೆಯಿಂದಾಗಿ ಅಡ್ಡಿಯಾಗಿದೆ.
ಸೂಡಾನ್(sudana)ನ ರಾಜಧಾನಿ ಖಾರ್ಟೂಮ್, ಆಲ್ಫಶೀರ್ ಸೇರಿ ಅನೇಕ ನಗರಗಳು ಸಂಘರ್ಷದಿಂದಾಗಿ ನಲುಗಿ ಹೋಗಿದೆ. ವಿಮಾನ ನಿಲ್ದಾಣ, ಸಾರಿಗೆ ವ್ಯವಸ್ಥೆ, ತೈಲ ಪೂರೈಕೆ ಎಲ್ಲದಕ್ಕೂ ಹಾನಿಯಾಗಿದೆ. ಸೂಡಾನ್‌ನ ಪೋರ್ಚ್ ಸುಡಾನ್, ನೆರೆಯ ರಾಷ್ಟ್ರಗಳಾದ ಈಜಿಪ್‌್ಟಗಡಿಗೆ ಭಾರತೀಯರನ್ನು ಕರೆಸಿಕೊಂಡು, ಅಲ್ಲಿಂದ ಸೌದಿ ಅರೇಬಿಯಾ ಮಾರ್ಗವಾಗಿ ಸ್ವದೇಶಕ್ಕೆ ಕರೆಸಿಕೊಳ್ಳುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಸದ್ಯಕ್ಕೆ ಸೂಡಾನ್‌ನಲ್ಲಿ ಡೀಸೆಲ್, ಪೆಟ್ರೋಲ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಖಾರ್ಟೂಮ್, ಅಲ್ಫಶೀರ್ ಇತರೆ ನಗರಗಳಿಂದ ಈಜಿಪ್‌್ಟಗಡಿಗೆ ಬರಲು ಸುಮಾರು 400 ಕಿ.ಮೀ.ಗೂ ಅಧಿಕ ದೂರ ಕ್ರಮಿಸಬೇಕು. ಘರ್ಷಣೆಗೆ ತುತ್ತಾಗಿರುವ ಸೂಡಾನ್‌ನಲ್ಲಿ ಸದ್ಯ ಬಸ್ಸುಗಳಿಗೆ ಡೀಸೆಲ್ ಪೂರೈಕೆಯಾಗುತ್ತಿಲ್ಲ. ಆದಷ್ಟುಶೀಘ್ರ ಡೀಸೆಲ್ ತಲುಪುವ ಭರವಸೆ ವ್ಯಕ್ತವಾಗಿದೆ. ಇದಾದರೆ ರಕ್ಷಣಾ ಕಾರ್ಯ ಸುಲಭವಾಗಲಿದೆ.
ದುಡ್ಡಿಲ್ಲ, ಫುಡ್ಡಿಲ್ಲ... ಕಾಪಾಡಿ: ಸೂಡಾನ್ ಕನ್ನಡಿಗರ ಮೊರೆ
ಯುದ್ಧಪೀಡಿತ ಪ್ರದೇಶದಲ್ಲಿ ಅತಂತ್ರವಾಗಿರುವ ಹಕ್ಕಿಪಿಕ್ಕಿ ಜನಾಂಗದ ನಂದಕುಮಾರ್ ಹೇಳುವಂತೆ, ಡೀಸೆಲ್ ಇಲ್ಲದ ಕಾರಣಕ್ಕೆ ಬಸ್ಸುಗಳನ್ನು ಸದ್ಯಕ್ಕೆ ನಿಲ್ಲಿಸಿಕೊಂಡಿದ್ದಾರೆ. ಡೀಸೆಲ್ ಪೂರೈಕೆಯಾಗುತ್ತಿದ್ದಂತೆ ಎಲ್ಲರನ್ನೂ ಸುಮಾರು 400 ಕಿ.ಮೀ.ಗೂ ಅಧಿಕ ದೂರವಿರುವ ಈಜಿಪ್‌್ಟಗಡಿ ತಲುಪಿಸುತ್ತಾರೆ. ಅಲ್ಲಿಂದ ನಮ್ಮನ್ನು ಸೌದಿ ಅರೇಬಿಯಾ ಕಡೆಗೆ ಕರೆದೊಯ್ಯುತ್ತಾರೆ. ಖಾರ್ಟೂಮ್‌ನಲ್ಲೇ ಸುಮಾರು 800 ಹಕ್ಕಿಪಿಕ್ಕಿಗಳಿದ್ದಾರೆ. ಆಲ್ಫಶೀರ್‌ನಲ್ಲಿ ಸುಮಾರು 31 ಮಂದಿ ಹೀಗೆ ವಿವಿಧ ನಗರಗಳಲ್ಲಿ ಹಕ್ಕಿಪಿಕ್ಕಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಸೋಮವಾರದ ಬೆಳವಣಿಗೆ ನೋಡಿ, ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳುವ ವಿಶ್ವಾಸ ಮೂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.