ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಜಾರಿಗೊಳಿಸಿದ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಬಳಸುವವರ ಸಂಖ್ಯೆ ಕೇವಲ 5 ತಿಂಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ.
ಬೆಂಗಳೂರು (ಏ.24): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಮುಕ್ತ ಪ್ರಯಾಣವನ್ನು ಒದಗಿಸುತ್ತಿರುವ ನಮ್ಮ ಮೆಟ್ರೋದಲ್ಲಿ ಕಳೆದ ಐದು ತಿಂಗಳ ಹಿಂದೆ ಕ್ಯೂಆರ್ ಕೋಡ್ ಸ್ಕ್ಯಾನ್ ಅಳವಡಿಕೆ ಮಾಡಿದ್ದು, ಸ್ಕ್ಯಾನ್ ಬಳಕೆ ಮಾಡುವವರ ಮೂರು ಪಟ್ಟು ಹೆಚ್ಚಳವಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 22 ಸಾವಿರ ಪ್ರಯಾಣಿಕರು ಸ್ಕ್ಯಾನ್ ಕೋಡ್ ಬಳಕೆ ಮಾಡಿದ್ದಾರೆ.
ದೇಶದ ಬಹುತೇಕ ರಾಜ್ಯಗಳ ರಾಜಧಾನಿ ನಗರಗಳಲ್ಲಿ ಟ್ರಾಫಿಕ್ ಜಾಮ್‌ನದ್ದೇ ದೊಡ್ಡ ಸಮಸ್ಯೆಯಾಗಿದೆ. ಆದರೆ, ನಗರದ ಸೀಮಿತ ವ್ಯಾಪ್ತಿಯಲ್ಲಿ ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅನುಕೂಲ ಆಗುವಂತೆ ಮೆಟ್ರೋ ರೈಲು (Namma Metro Rail) ಸೇವೆಯನ್ನು ಆರಂಭಿಸಲಾಯಿತು. ಇನ್ನು ಕಳೆದ 12 ವರ್ಷಗಳಿಂದ ಮೆಟ್ರೋ ಸೇವೆ ಆರಂಭವಾಗಿದ್ದು, ಈಗ ದೇಶದ 2ನೇ ಅತಿ ದೊಡ್ಡ ಮೆಟ್ರೋ ಜಾಲವನ್ನು ಹೊಂದಿದೆ. ಆದರೆ, ಕಳೆದ 2022ರ ನವೆಂಬರ್‌ನಿಂದ ಕ್ಯೂಆರ್ (QR-Code) ಕೋಡ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವರ ಸಂಖ್ಯೆ ಕೇವಲ ಐದು ತಿಂಗಳಲ್ಲಿ ಮೂರು ಮಟ್ಟು ಹೆಚ್ಚಳವಾಗಿದೆ. ಈಗ ಪ್ರತಿನಿತ್ಯ 22 ಸಾವಿರಕ್ಕೂ ಅಧಿಕ ಜನರು ಕ್ಯೂಆರ್ ಕೋಡ್ ಸ್ಕ್ಯಾನ್ ಬಳಕೆ ಮಾಡುತ್ತಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿ. (ಬಿಎಂಆರ್‌ಸಿಎಲ್) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
undefined
ಕೋಲ್ಕತ್ತದಲ್ಲಿ ದೇಶದ ಮೊದಲ ನೀರಿನಾಳದ ಮೆಟ್ರೋ ಪ್ರಾಯೋಗಿಕ ಸಂಚಾರ!
ಮೆಟ್ರೋ ಬಳಕೆದಾರರ ಸಂಖ್ಯೆಯು ನವೆಂಬರ್ 2022 ರಲ್ಲಿ 2.1 ಲಕ್ಷದಿಂದ ಮಾರ್ಚ್ 2023 ರಲ್ಲಿ 6.6 ಲಕ್ಷಕ್ಕೆ ಏರಿಕೆಯಾಗಿದೆ. ಆದಾಗ್ಯೂ, ಹೆಚ್ಚಿನ ಮೆಟ್ರೋ ಪ್ರಯಾಣಿಕರು 2011ರಲ್ಲಿ BMRCL ಪರಿಚಯಿಸಿದ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುವುದನ್ನು ಕೂಡ ಮುಂದುವರೆಸಿದ್ದಾರೆ. ಪ್ರತಿನಿತ್ಯ ಸಂಚಾರ ಮಾಡುವ ಶೇ.60 ದೈನಂದಿನ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ನಂತರ ಸ್ಥಾನದಲ್ಲಿ ಶೇ.35 ಜನರು ಟೋಕನ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಇನ್ನು ಕಳೆದ ಐದು ತಿಂಗಳ ಹಿಂದೆ ಪರಿಚಯಿಸಲಾದ QR-ಕೋಡ್ ಸ್ಕ್ಯಾನ್ ಅನ್ನು ಶೇ.5 ಪ್ರಯಾಣಿಕರು ಬಳಸುತ್ತಿದ್ದಾರೆ. ಸ್ಮಾರ್ಟ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು, ಬಳಕೆದಾರರು ನಿಲ್ದಾಣಗಳಲ್ಲಿ ಶೇ.81 ಜನರು ಟಿಕೆಟ್ ಕೌಂಟರ್‌ಗಳನ್ನು ಅವಲಂಬಿಸಿದ್ದಾರೆ. ನಂತರ ನಮ್ಮ ಮೆಟ್ರೋ ಅಪ್ಲಿಕೇಶನ್ ಶೇ.10 ಜನರು ಹಾಗೂ ಪೇಟಿಎಂ (Paytm) ಮೂಲಕ ಶೇ.5 ಬಳಕೆ ಮಾಡುತ್ತಿದ್ದಾರೆ.
ನವೆಂಬರ್ 2022 ರಲ್ಲಿ, ನಮ್ಮ ಮೆಟ್ರೋ ಸಂಸ್ಥೆಯು QR-ಕೋಡ್ ಟಿಕೆಟಿಂಗ್ ಅನ್ನು ಪ್ರಾರಂಭಿಸಿತು. ಇದು ಪ್ರಯಾಣಿಕರಿಗೆ WhatsApp ಮತ್ತು Namma Metro ಮೊಬೈಲ್ ಅಪ್ಲಿಕೇಷನ್ ಮೂಲಕ ಏಕ-ಪ್ರಯಾಣದ ಸಾರಿಗೆ ಟಿಕೆಟ್‌ಗಳನ್ನು ಪಡೆಯಲು ಅನುಮತಿಸುತ್ತದೆ. ವಾಟ್ಸಾಪ್ ತನ್ನ ಅಪ್ಲಿಕೇಶನ್‌ನಲ್ಲಿ ಇದು ಮೊದಲ ಕ್ಯೂಆರ್ ಟಿಕೆಟಿಂಗ್ ಸೇವೆಯನ್ನು ಕಲ್ಪಿಸುತ್ತಿದೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಲಭ್ಯವಿರುವ WhatsApp ಚಾಟ್‌ಬಾಟ್ (+91 8105556677), ಪ್ರಯಾಣಿಕರಿಗೆ ತಮ್ಮ ಸ್ಮಾರ್ಟ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಮತ್ತು ಸಾರಿಗೆ ವೇಳಾಪಟ್ಟಿಗಳು ಮತ್ತು ದರ ಕೋಷ್ಟಕಗಳನ್ನು ವೀಕ್ಷಿಸಲು ಸಹಾಯ ಮಾಡುತ್ತದೆ. ಈ QR-ಕೋಡ್ ಟಿಕೆಟ್‌ಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ.
ಇನ್ನೇನೆಲ್ಲಾ ನೋಡ್ಬೇಕೋ... ಮೆಟ್ರೋದಲ್ಲೇ ಸ್ನಾನ ಮಾಡಿದ ಯುವಕ: ವೈರಲ್ ವೀಡಿಯೋ
QR-ಕೋಡ್ ಟಿಕೆಟ್‌ನ ಉಪಯೋಗಗಳು:
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ನವೆಂಬರ್ 1, 2022 ರಿಂದ ಬಿಎಂಆರ್ಸಿಎಲ್ ನಮ್ಮ ಮೆಟ್ರೋದ ಪ್ರಯಾಣಿಕರಿಗೆ ಹೆಚ್ಚುವರಿ ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ. Introduction of Single Journey QR Tickets available on WattsApp & Namma Metro App. pic.twitter.com/mYHSL99YIF
— ನಮ್ಮ ಮೆಟ್ರೋ (@cpronammametro)