ಸಿದ್ರಾಮುಲ್ಲಾ ಖಾನ್‌ ಎಂಬ ಬಿಜೆಪಿಗರ ಹೇಳಿಕೆಗೆ ತೀವ್ರ ಆಕ್ಷೇಪ

By Kannadaprabha NewsFirst Published Dec 5, 2022, 5:42 AM IST
Highlights

ಕಾಂಗ್ರೆಸ್‌ನ ಸಿದ್ರಾಮುಲ್ಲಾ ಖಾನ್‌ (ಸಿದ್ದರಾಮಯ್ಯ) ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತವೆ ಸಿ.ಟಿ. ರವಿ ಹಾಗೂ ಸಿದ್ದರಾಮಯ್ಯ ಸಿದ್ರಾಮುಲ್ಲಾಖಾನ್‌ ಎಂದು ಹೆಸರು ಬದಲಿಸಿಕೊಳ್ಳಿ ಅನ್ನೋ ಸಚಿವ ಡಾ. ಅಶ್ವತ್ಥನಾರಾಯಣ ಹೇಳಿಕೆಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ. ಸುಬ್ರಹ್ಮಣ್ಯ ತೀವ್ರವಾಗಿ ಖಂಡಿಸಿದ್ದಾರೆ.

 ಮೈಸೂರು (ಡಿ.05):  ಕಾಂಗ್ರೆಸ್‌ನ ಸಿದ್ರಾಮುಲ್ಲಾ ಖಾನ್‌ (ಸಿದ್ದರಾಮಯ್ಯ) ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತವೆ ಸಿ.ಟಿ. ರವಿ ಹಾಗೂ ಸಿದ್ದರಾಮಯ್ಯ ಸಿದ್ರಾಮುಲ್ಲಾಖಾನ್‌ ಎಂದು ಹೆಸರು ಬದಲಿಸಿಕೊಳ್ಳಿ ಅನ್ನೋ ಸಚಿವ ಡಾ. ಅಶ್ವತ್ಥನಾರಾಯಣ ಹೇಳಿಕೆಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ. ಸುಬ್ರಹ್ಮಣ್ಯ ತೀವ್ರವಾಗಿ ಖಂಡಿಸಿದ್ದಾರೆ.

ಸಿ.ಟಿ.ರವಿ (CT Ravi)  ಅವರು ಪದೇ ಪದೇ ಹಿಂದುಳಿದ ವರ್ಗಗಳ ನಾಯಕ (Siddaramaiah)  ಅವರನ್ನು ಅವಮಾನಿಸುತ್ತಲೇ ಇದ್ದಾರೆ. ಅವರಿಗೆ ಗ್ರಹಚಾರ ಕೆಟ್ಟಂತೆ ಕಾಣ್ತಿದೆ. ರವಿ ಅವರೇ ಶಾಂತವಾಗಿದ್ದ ಕರ್ನಾಟಕದಲ್ಲಿ ಹಿಂದೂ ಮುಸ್ಲಿಮರ ನಡುವೆ ಗಲಭೆ ಎಬ್ಬಿಸಿದವರು ಯಾರು? ಶಾಲೆಯಲ್ಲಿ ಕಲಿಯುವ ಮಕ್ಕಳಿಗೂ ರಾಜಕೀಯದ ರೋಗ ಅಂಟಿಸಿ ಗಲಭೆ ಎಬ್ಬಿಸಿದವರು ಯಾರು? ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡಿ ಕೇಸರಿ ಶಾಲು ಕಳಿಸಿಕೊಟ್ಟದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

ಸತತವಾಗಿ ಕೋಮುದ್ವೇಷ ಹರಡುವ ಕೆಲಸ ಮಾಡಿಸುತ್ತಿರೋದು ನೀವೆ ಅಲ್ಲವೇ? ನಿಮ್ಮ ಸರ್ಕಾರದ ಆಡಳಿತದಿಂದ ಪ್ರತಿದಿನ ಜನರು ಮಾನಸಿಕವಾಗಿ ಹತ್ಯೆಯಾಗ್ತಿದ್ದಾರೆ. ಈಗಲೂ ಕೋಮುದ್ವೇಷ ಹರಡೋದೇ ನಿಮ್ಮ ಉದ್ದೇಶವಾಗಿದೆ. ಜನ ನಿಮಗೆ ಅಧಿಕಾರ ಕೊಟ್ಟಿರೋದು ಅಭಿವೃದ್ಧಿ ಮಾಡೋದಕ್ಕೇ ಹೊರತು ಆರೋಪ ಮಾಡಿಕೊಂಡು ಕಥೆ ಹೇಳೋದಕ್ಕಲ್ಲ. ಭ್ರಷ್ಟಾಚಾರ, ಮತ ಕಳವು, ದಿವಾಳಿ ಆಡಳಿತ ಮುಚ್ಚಿಟ್ಟುಕೊಳ್ಳಲು ಈ ರೀತಿ ದಿಕ್ಕು ತಪ್ಪಿಸುತ್ತೀದ್ದೀರಿ ಎಂದು ಕಿಡಿಕಾರಿದ್ದಾರೆ.

ಅಲ್ಲದೆ, ಮತದಾರರ ಪಟ್ಟಿಹಗರಣದಲ್ಲಿ ತಮ್ಮ ಹೆಸರು ಇರೋ ಆರೋಪ ಕೇಳಿಬರುತ್ತಿದ್ದಂತೆ ವಿಚಲಿತರಾಗಿರುವ ಸಚಿವ ಅಶ್ವತ್ಥನಾರಾಯಣ್‌ ಅವರು ಸಿದ್ದರಾಮಯ್ಯ ವಿರುದ್ಧ ಟೀಕಿಸಿ ದಾರಿ ತಪ್ಪಿಸುತ್ತಿದ್ದಾರೆ. ಕುರುಬ ಸಮಾಜ ಇಲ್ಲಿಯವರೆಗೂ ಶಾಂತವಾಗಿದೆ. ಆದರೆ ಸಿ.ಟಿ. ರವಿ ಅವರ ಹೇಳಿಕೆ ಇಡೀ ಕುರುಬ ಸಮಾಜವನ್ನೇ ಅವಮಾನ ಮಾಡಿದೆ. ಕೂಡಲೇ ಅವರು ಕ್ಷಮೆ ಕೇಳಬೇಕು ಇಲ್ಲದಿದ್ದರೆ, ಕಂಡಲ್ಲಿ  ಗೆರಾವ್‌ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಗೋಮಾಂಸ ತಿಂದರೆ ಜೈಲಿಗೆ ಕಳಿಸುತ್ತೇನೆ ಎಂಬ ಸಚಿವ ಪ್ರಭು ಚೌವ್ಹಾಣ್‌ ಅವರ ಹೇಳಿಕೆಗೆ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲ. ಅವರಿಗೆ ಸಂವಿಧಾನ ನೆಟ್ಟಗೆ ಓದಿಕೊಂಡಿಲ್ಲ ಎಂದು ಕಾಣ್ತಿದೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಆಹಾರದ ಹಕ್ಕು ಇದೆ. ಅಲ್ಲದೆ, ಸಿದ್ದರಾಮಯ್ಯ ಅವರು ಕೋಳಿ, ಕುರಿ ಹಾಗೂ ಮೀನು ಮಾತ್ರ ನಾನು ತಿನ್ನೋದು ಎಂದು ಹೇಳಿದ್ದಾರೆ. ಸಚಿವರಿಗೆ ಕಿವಿ ಸರಿಯಿಲ್ಲದೇ ತಾವೇ ಗೋಮಾಂಸ ತಿನ್ನೋದಕ್ಕೆ ಪ್ರಚೋದನೆ ಕೊಡ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ನನ್ನ ಸಿದ್ದರಾಮಯ್ಯ ನಡುವೆ ಬಿರುಕಿಲ್ಲ 

ಕಲಬುರಗಿ (ಡಿ.02): ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಯಾವುದೇ ಬಿರುಕಿಲ್ಲ. ಸುಖಾಸುಮ್ಮನೆ ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂದು ಮಾಧ್ಯಮದವರು ಬಿಂಬಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಕಲಬುರಗಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮಿಬ್ಬರ ಮಧ್ಯೆ ಬಿರುಕಿದೆ ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯಲ್ಲಿ ಸದಾನಂದ ಗೌಡ, ಯತ್ನಾಳ್‌ ಹಾಗೂ ವಿಜಯೇಂದ್ರ ಮಧ್ಯೆ ಬಿರುಕಿಲ್ವಾ?. ಮೊದಲು ತಮ್ಮಲ್ಲಿರುವ ಬಿರುಕುಗಳನ್ನು ಬಿಜೆಪಿಯವರು ಮುಚ್ಚಿಕೊಳ್ಳಲಿ ಎಂದರು.

ಬಿಜೆಪಿಗೆ ಭಯ ಶುರುವಾಗಿದೆ:ಕಾರ್ಯಕರ್ತರೆಲ್ಲರೂ ಕಾಂಗ್ರೆಸ್‌ ಸೇರುತ್ತಿದ್ದಾರೆ. ಬಿಜೆಪಿಗೆ ಸರತಿಯಲ್ಲಿ ರೌಡಿಗಳು ಸೇರ್ಕೋತಿದ್ದಾರೆ. ಬಿಜೆಪಿಯವರು ಜನರ ಭಾವನೆಗಳ ಜೊತೆಗೆ ಆಟ ಆಡುತ್ತಿದ್ದಾರೆ. ಆದರೆ, ನಾವು ಜನರ ಬದುಕು ಕಟ್ಟುವ ಮಾತನ್ನಾಡುತ್ತಿದ್ದೇವೆ. ಹೀಗಾಗಿ, ಜನ ಈ ಬಾರಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್‌ಗೆ ಪಟ್ಟಕಟ್ಟುವ ಸಂಕಲ್ಪ ಮಾಡಿದ್ದಾರೆ. ಇದನ್ನು ಕಂಡು ಬಿಜೆಪಿಗೆ ಈಗಲೇ ಭಯ ಶುರುವಾಗಿದೆ. ಅನೇಕರು ಕಾಂಗ್ರೆಸ್‌ಗೆ ಬರುವ ಆತುರದಲ್ಲಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರ ಹೆಸರುಗಳನ್ನು ನಾನು ಈಗಲೇ ಹೇಳುವುದಿಲ್ಲ ಎಂದರು.

Chikkaballapur: ಡಿ.ಕೆ.ಶಿವಕುಮಾರ್‌ ಹಿನ್ನಲೆ ಏನು: ಸಂಸದರ ಪ್ರಶ್ನೆ

ಖರ್ಗೆ ಭೇಟಿ ಕುರಿತು ಪ್ರತಿಕ್ರಿಯಿಸಿ, ಕಲಬುರಗಿಯವರಾದ ಡಾ.ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರೋದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಅವರು ಡಿ.10ರಂದು ತಮ್ಮ ತವರೂರಿಗೆ ಭೇಟಿ ನೀಡಲಿದ್ದಾರೆ. ಅವರ ಮೊದಲ ಭೇಟಿಯನ್ನು ಕಲ್ಯಾಣ ನಾಡಲ್ಲಿ ಕಾಂಗ್ರೆಸ್‌ ಪಕ್ಷದ ಸಂಘಟನೆಗೆ ಹೊಸ ಶಕ್ತಿ, ಹುರುಪು ತುಂಬುವ ಸಮಾವೇಶವನ್ನಾಗಿ ಸಂಘಟಿಸಲಾಗುತ್ತಿದೆ ಎಂದರು. ಗಡಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಗಡಿ ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಮಾಡಬಾರದು. ಅವರ ಊರನ್ನು ಅವರಿಗೆ ಬಿಡಿ, ನಮ್ಮೂರು ನಮಗಿರಲಿ. ಗಡಿ ವಿಚಾರದಲ್ಲಿ ಜನರ ಭಾವನೆ ಕೆರಳಿಸುವುದು ಸರಿಯಲ್ಲ ಎಂದರು.

ರೌಡಿಗಳು ಬಿಜೆಜಿ ಸೇರ್ಕೋತಿದ್ದಾರಷ್ಟೆ: ಕಾರ್ಯಕರ್ತರೆಲ್ಲರೂ ಕಾಂಗ್ರೆಸ್‌ ಸೇರ್ಕೋತಿದ್ದಾರೆ, ಬಿಜೆಪಿಗೆ ಸರತಿಯಲ್ಲಿ ರೌಡಿಗಳು ಸೇರ್ಕೋತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮ್‌ ಲೇವಡಿ ಮಾಡಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಭಾವನೆ ಜೊತೆಗೆ ಆಟ ಆಡುತ್ತಿದ್ದಾರಷ್ಟೆ, ಕಾಂಗ್ರೆಸ್‌ನವರು ನಾವು ಜನರ ಬದುಕು ಕಟ್ಟುವ ಮಾತನ್ನಾಡುತ್ತಿದ್ದೇವೆ. ಹೀಗಾಗಿ ಜನ ಈ ಬಾರಿ ಬಿಜಜೆಎಪಿಗ ಸೋಲಿಸಿ ಕಾಂಗ್ರೆಸ್‌ಗೆ ಪಟ್ಟಕಟ್ಟುವ ಸಂಕಲ್ಪ ಮಾಡಿದ್ದಾರೆ. ಇದನ್ನು ಕಂಡು ಬಿಜೆಪಿಗೆ ಈಗಲೇ ಭಯ ಶುಉರವಗಿದೆ ಎಂದರು.

ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ: ಡಿ.ಕೆ.ಶಿವಕುಮಾರ್‌

ಬಿಜೆಪಿ ಕಾಂಗ್ರೆಸ್‌ ಪಕ್ಷವನ್ನು ಹತ್ತಿಕ್ಕಲು ನೋಡುತ್ತಿದೆ. ಯಾವ ರೂತಿಯಲ್ಲೂ ಅದು ಆಗುತ್ತಿಲ್ಲ, ಕೊನೆಗೆ ಮತ ಪಟ್ಟಿಯಲ್ಲಿ ಇರುವವರ ಹೆಸರು ತೆಗೆದು ಹಾಕುವ ಕೆಲಸ ಮಾಡುತ್ತಿದ್ದಾರೆ. ಹಲವು ಸಂಚು ರೂಪಿಸಿ ಬಿಜೆಪಿ ಅಧಿಕಾರಕ್ಕೆ ಬರುವ ಯತ್ನದಲ್ಲಿದೆ. ರಾಜ್ಯದ ಜನ ಬಿಜೆಪಿಯವರ ಆ ಪ್ರಯತ್ನ ವಿಫಲ ಮಾಡುತ್ತಾರೆಂದು ಡಿಕೆಶಿ ಹೇಳಿದರು. ಅನೇಕರು ಕಾಂಗ್ರೆಸ್‌ ಪಕ್ಷಕ್ಕೆ ಬರುವ ಆತುರದಲ್ಲಿದ್ದಾರೆ, ಚರ್ಚೆಗಳು ಸಾಗಿವೆ, ನಾನು ಯಾರಂತ ಹೆಸರು ಹೇಳೋದಿಲ್ಲ, ಸ್ವಾಭಿಮಾನಿಗಳು ಇದ್ದಾರೆ. ಅವರೆಲ್ಲರೂ ಕಂಗ್ರೆಸ್‌ಗೆ ಬರಲಿದ್ದಾರೆಂದರು. ಸಿದ್ದರಾಮಯ್ಯ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ, ಕ್ಷೇತ್ರದ ವಿಚಾರದಲ್ಲಿ ಹೈಕಮಾಂಡ್‌ ಸೂಚನೆ ಕೇಳೋದಾಗಿಯೂ ಹೇಳಿದ್ದಾರೆಂದರು.

click me!