ಕುರುಬ ಜನಾಂಗ ಹಾಲಿನಷ್ಟೇ ಪವಿತ್ರ: ಭೈರತಿ ಸುರೇಶ್

Published : Dec 15, 2022, 07:34 PM ISTUpdated : Dec 15, 2022, 07:35 PM IST
ಕುರುಬ ಜನಾಂಗ ಹಾಲಿನಷ್ಟೇ ಪವಿತ್ರ: ಭೈರತಿ ಸುರೇಶ್

ಸಾರಾಂಶ

ಕುರುಬ ಜನಾಂಗ ಹಾಲಿನಷ್ಟೇ ಪವಿತ್ರ: ಸುರೇಶ ಭೈರತಿ ಭಾಲ್ಕಿಯಲ್ಲಿ ನಡೆದ 535ನೇ ಕನಕದಾಸ ಜಯಂತ್ಯುತ್ಸವದಲ್ಲಿ ಹೆಬ್ಬಾಳ ಶಾಸಕ ಬಣ್ಣನೆ

ಭಾಲ್ಕಿ (ಡಿ.15) ಕುರುಬ ಜನಾಂಗ ಬಹಳ ಮುಗ್ಧತೆಯಿಂದ ಕೂಡಿದ್ದು ಸುಳ್ಳು, ಮೋಸ, ವಂಚನೆ ಎಂಬುದು ಗೊತ್ತಿಲ್ಲ. ಈ ಸಮುದಾಯ ಹಾಲಿನಷ್ಟೇ ಪವಿತ್ರ ಎಂದು ಬೆಂಗಳೂರು ಹೆಬ್ಬಾಳ ಕ್ಷೇತ್ರದ ಶಾಸಕ ಸುರೇಶ ಭೈರತಿ ಬಣ್ಣಿಸಿದರು.

ಪಟ್ಟಣದ ಕನಕದಾಸರ ವೃತ್ತದಲ್ಲಿ ಕನಕ ಯುವ ಸೇನೆ, ಗೊಂಡ(ಕುರುಬ) ಸಮಾಜ ಮತ್ತು ಎಲ್ಲ ಸಮುದಾಯಗಳ ಸಹಯೋಗದಲ್ಲಿ ಆಯೋಜಿಸಿದ್ದ ಕನಕದಾಸರ 535ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕುರುಬ ಸಮುದಾಯ ಯಾರೊಂದಿಗೂ ಧ್ವೇಷ ಬಯಸುವುದಿಲ್ಲ. ನಂಬಿದವರಿಗೆ ಪ್ರಾಣ ಕೊಡಲು ಕೂಡ ಸಿದ್ಧವಾಗಿರುತ್ತದೆ. ಕನಕದಾಸರು ತಮ್ಮ ಕೀರ್ತನೆಗಳ ಸಮ ಸಮಾಜ ಬಯಸಿದರು. ಅವರ ಆಶಯದಂತೆ ನಾವೆಲ್ಲರೂ ಬದುಕು ಸಾಗಿಸಬೇಕು ಎಂದು ತಿಳಿಸಿದರು.

ಕುರುಬರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ನೆರವು, ಕುರುಬ ಸಮುದಾಯದಲ್ಲಿ ಸಂತಸ

ಶಾಸಕ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರು ಪುರಂದರ ದಾಸರ ಸಮಕಾಲೀನವರು. ಕಂದಾಚಾರ, ಶೋಷಣೆ ರಹಿತ ಸಮಾಜ ಕನಕದಾಸರ ಕನಸಾಗಿತ್ತು. ಕನಕರು ತಮ್ಮ ಕೀರ್ತನೆ ಮೂಲಕ ಸಮಾಜದಲ್ಲಿನ ಅಂಧ ಶ್ರದ್ಧೆ, ಮೂಢನಂಬಿಕೆ ಹೋಗಲಾಡಿಸಿದರು. ಅಂಥವರ ತತ್ವಗಳು ನಿಜವಾದ ಅರ್ಥದಲ್ಲಿ ಬಂದಾಗ ಮಾತ್ರ ಅವರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ತಿಳಿಸಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ, ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಮಾತನಾಡಿದರು.

ಕಾಗಿನೆಲೆ ಸಂಸ್ಥಾನ ಮಠದ ಈಶ್ವರಾನಂದಪುರಿ ಸ್ವಾಮಿ, ಸಿದ್ಧರಾಮನಂದಪುರಿ ಸ್ವಾಮಿ, ಡಾ.ಬಸವಲಿಂಗ ಪಟ್ಟದ್ದೇವರು, ಮಹಾಳಿಂಗರಾಯ ಮಹಾರಾಜರು, ಶೀವಯೋಗಿ ಮಚೇಂದ್ರನಾಥ ಮಹಾರಾಜರು ಮಾತನಾಡಿದರು. ಕನಕದಾಸರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕೆ.ಡಿ.ಗಣೇಶ ಪ್ರಾಸ್ತಾವಿಕ ಮಾತನಾಡಿದರು.

ಕನಕ ಮೂರ್ತಿ ಪ್ರತಿಷ್ಠಾಪನೆ: ಹುನಗುಂದ ಶಾಸಕರ ನಡೆಗೆ ಖಂಡನೆ, ಕುರುಬ ಸಮಾಜದಿಂದ ತಕ್ಕ ಪಾಠದ ಎಚ್ಚರಿಕೆ

ಈ ಸಂದರ್ಭದಲ್ಲಿ ಕಲಬುರಗಿ ಪೊಲೀಸ್‌ ಅ​ಧೀಕ್ಷಕ ಬಸವರಾಜ ಝಿಳ್ಳೆ, ಅಮೃತರಾವ ಚಿಮಕೋಡೆ, ಮುರಳಿಧರರಾವ ಎಕಲಾರಕರ್‌, ಬಿಸಿಎಂ ಕಲ್ಯಾಣಧಿ​ಕಾರಿ ವಿಜಯಮಾಲಾ ವಗ್ಗೆ, ಸಂದೀಪ ಹುಡಗೆ, ಬಾಲಾಜಿ ಖೇಡಕರ್‌, ಪಂಡರಿ ಮೇತ್ರೆ ಸೇರಿದಂಥೆ ಹಲವರು ಇದ್ದರು. ನಿರಂಜಪ್ಪ ಪಾತ್ರೆ ಸ್ವಾಗತಿಸಿದರೆ ದೀಪಕ ಠಮಕೆ, ಚಂದ್ರಕಾಂತ ತಳವಾಡೆ ನಿರೂಪಿಸಿದರು.

PREV
Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ