ಕುಮಾರಸ್ವಾಮಿ ಟ್ವೀಟ್ ಮಾಡೋದು ನಿಲ್ಲಿಸಲಿ: ಸಚಿವ ಶೆಟ್ಟರ್

Suvarna News   | Asianet News
Published : Feb 29, 2020, 03:24 PM IST
ಕುಮಾರಸ್ವಾಮಿ ಟ್ವೀಟ್ ಮಾಡೋದು ನಿಲ್ಲಿಸಲಿ: ಸಚಿವ ಶೆಟ್ಟರ್

ಸಾರಾಂಶ

ಸಾಲ ಮನ್ನಾ ವಿಚಾರವಾಗಿ ಸರ್ಕಾರವನ್ನು ಟೀಕಿಸಿದ ಕುಮಾರಸ್ವಾಮಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ ಬೆನ್ನಲ್ಲೇ, ಸಚಿವ ಜಗದೀಶ್ ಶೆಟ್ಟರ್ ಅವರೂ ತಿರುಗೇಟು ನೀಡಿದ್ದಾರೆ.  

ಮೈಸೂರು(ಫೆ.29): ಸಾಲ ಮನ್ನಾ ವಿಚಾರವಾಗಿ ಸರ್ಕಾರವನ್ನು ಟೀಕಿಸಿದ ಕುಮಾರಸ್ವಾಮಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ ಬೆನ್ನಲ್ಲೇ, ಸಚಿವ ಜಗದೀಶ್ ಶೆಟ್ಟರ್ ಅವರೂ ತಿರುಗೇಟು ನೀಡಿದ್ದಾರೆ.

ರೈತರ ಸಾಲಮನ್ನಾ ಯೋಜನೆಗೆ ಬಿಜೆಪಿಯಿಂದ ತಿಲಾಂಜಲಿ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯಿಸಿ ಮಂಗಳೂರಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

ಸಾಲ ಮನ್ನಾ ವಿಚಾರ: ಮಾಜಿ, ಹಾಲಿ ಸಿಎಂ ನಡುವೆ ಟ್ವೀಟ್ ವಾರ್

ಕುಮಾರಸ್ವಾಮಿ ಟ್ವೀಟ್ ಮಾಡೋದನ್ನ ನಿಲ್ಲಿಸಲಿ. ಸೆಷನ್‌ನ ಬಜೆಟ್ ಚರ್ಚೆಯಲ್ಲಿ ಅವರು ಮಾತನಾಡಲಿ. ಇದಕ್ಕೆ ಉತ್ತರ ಕೊಡಬೇಕಾದುದು ಹಣಕಾಸು ಸಚಿವರು. ಮುಖ್ಯಮಂತ್ರಿಯವರ ಬಳಿ ಹಣಕಾಸು ಇಲಾಖೆ ಇದೆ. ಕುಮಾರಸ್ವಾಮಿಯವ್ರು‌ ಅಲ್ಲಿ ಇಲ್ಲಿ ಚರ್ಚೆ ಮಾಡೋದು ಬೇಡ. ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಮಾಡಲಿ ಎಂದಿದ್ದಾರೆ.

ಸೆಷನ್‌ನಲ್ಲಿ ಸರ್ಕಾರದಿಂದ ಉತ್ತರ ಸಿಗುತ್ತದೆ. ರಾಜ್ಯದ ಮುಖ್ಯಮಂತ್ರಿಗಳು ಉತ್ತರ ಕೊಡ್ತಾರೆ ಎಂದು ಮಂಗಳೂರಿನಲ್ಲಿ ಸಚಿವ ಜಗದೀಶ್ ಶೆಟ್ಟರ್ ಕುಮಾರಸ್ವಾಮಿ ಅವೆರಿಗೆ ತಿರುಗೇಟು ಕೊಟ್ಟಿದ್ದಾರೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC