ದೊರೆಸ್ವಾಮಿ ಹೇಳಿದ್ದನ್ನೇಕೆ ಯಾರೂ ಹೇಳುತ್ತಿಲ್ಲ : ಬಿ.ಸಿ.ಪಾಟೀಲ್

By Suvarna News  |  First Published Feb 29, 2020, 3:21 PM IST

ಯತ್ನಾಳ್ ಹೇಳಿಕೆ ಬಗ್ಗೆಯೇ ಪ್ರಸ್ತಾಪಿಸುವ ಎಲ್ಲರೂ ದೊರೆಸ್ವಾಮಿ ಮಾತಿನ ಬಗ್ಗೆ ಯಾಕೆ ಯಾವುದೇ ಹೇಳಿಕೆ ನೀಡಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು


ಶಿವಮೊಗ್ಗ [ಫೆ.29]: ಎಲ್ಲರೂ ಯತ್ನಾಳ್ ಹೇಳಿಕೆ ಬಗ್ಗೆಯೇ ಮಾತನಾಡುತ್ತಿದ್ದಾರೆ. ಆದರೆ ದೊರೆಸ್ವಾಮಿ ಹೇಳಿದ್ದನ್ನು ಯಾರು ಹೇಳುತ್ತಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು. 

ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್ ಆ್ಯಕ್ಷನ್ ಇಲ್ಲದೇ ರಿಯಾಕ್ಷನ್ ಇರುವುದಿಲ್ಲ. ಬೆಂಕಿ ಇಲ್ಲದೇ ಹೊಗೆಯಾಡಲ್ಲ ಎಂದು ಯತ್ನಾಳ್ಗೆ ಬೆಂಬಲ ವ್ಯಕ್ತಪಡಿಸಿದರು. 

Tap to resize

Latest Videos

ಭಾರತದಲ್ಲಿ ಇದ್ದು ಪಾಕಿಸ್ತಾನಕ್ಕೆ ಜೈ ಅನ್ನೋರು ದೇಶದ್ರೋಹಿಗಳಲ್ಲದೇ ಮತ್ತೇನು..? ಈ ದೇಶದ ಗಾಳಿ ಅನ್ನ ನೀರು ಕುಡಿದು ಪಾಕಿಸ್ತಾನಕ್ಕೆ ಜೈ ಅನ್ನೋದು ಯಾವ ನ್ಯಾಯ.? ಎಂದು ಪಾಟೀಲ್ ಪ್ರಶ್ನೆ ಮಾಡಿದರು. 

ಯುವಜನತೆ ಓವರ್ ನೈಟ್ ಫೇಮಸ್ ಆಗಲು ಇಂತಹದ್ದೊಂದು ಟ್ರೆಂಡ್ ಶುರು ಮಾಡಿದ್ದಾರೆ. ಇಂತಹ ಬೆಳವಣಿಗೆ ಎಂದೂ ಉತ್ತಮವಲ್ಲ ಎಂದರು. 

ಕಾಂಗ್ರೆಸ್ ಸೇರ್ತಾರಾ 17 ಬಿಜೆಪಿ ಶಾಸಕರು : ನೂತನ ಸಚಿವ ಬಿ.ಸಿ.ಪಾಟೀಲ್ ರಿಯಾಕ್ಷನ್...

ಇನ್ನು ಬಿಎಸ್ ಯಡಿಯೂರಪ್ಪ ನೂತನ ಬಜೆಟ್ ಬಗ್ಗೆಯೂ ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್ ಈ ಬಾರಿ ಸರ್ಕಾರದಿಂದ ಕೃಷಿ ಪ್ರಧಾನ ಬಜೆಟ್ ಮಂಡನೆಯಾಗಲಿದೆ ಎಂದರು. 

ಇನ್ನು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದ್ದು, ಸುಳ್ಳು ಹೇಳುವುದರಲ್ಲಿ ಎಚ್ ಡಿಕೆ ನಂಬರ್ 1, ಸಾಲಮನ್ನಾದಿಂದ 1 ಲಕ್ಷ ರೈತರನ್ನು ಕೈ ಬಿಡಲಾಗಿದೆ ಎನ್ನುವ ಎಚ್ ಡಿಕೆ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು  ಬಿ.ಸಿ ಪಾಟೀಲ್ ಹೇಳಿದರು. 

click me!