ಕೂಡ್ಲಿಗಿ (ಜೂ.03): ಕೊರೋನಾ ವೈರಸ್ ಹಾವಳಿ ನಡುವೆಯೇ ಮೂಢನಂಬಿಕೆ ಪರ್ವ ಮುಂದುವರಿದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮಸ್ಥರು ಕೊರೋನಾ ವೈರಸ್‌ಗೆ ಬೈದು ಊರ ಗಡಿ ದಾಟಿಸಿರುವ ಮೌಢ್ಯಾಚರಣೆ ನಡೆದಿದೆ.
ಪೂಜಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪೇಹಳ್ಳಿಯಲ್ಲಿ 75 ಕುಟುಂಬಗಳಿವೆ. ಈವರೆಗೆ ಮೂವರು ಸೋಂಕಿತರು ಪತ್ತೆಯಾಗಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಹೀಗಾಗಿ ಆತಂಕಗೊಂಡಿರುವ ಜನರು ಮುಂದಿನ ದಿನಗಳಲ್ಲಿ ಗ್ರಾಮದ ಯಾರಲ್ಲೂ ಸೋಂಕು ಕಾಣಿಸಿಕೊಳ್ಳಬಾರದು ಎಂದು ಮೌಢ್ಯ ಆಚರಣೆ ಮಾಡಿದ್ದಾರೆ.
undefined
ರಾಜ್ಯದಲ್ಲಿ 30 ಸಾವಿರ ದಾಟಿದ ಕೊರೋನಾ ಸಾವು ..
ಎಲ್ಲರ ಮನೆಯಲ್ಲಿ ಹೋಳಿಗೆ ನೈವೇದ್ಯ ಮಾಡಿ ಮಣ್ಣಿನ ಮಡಿಕೆ, ಬಳೆ ಇಟ್ಟು ಎಲೆ ಅಥವಾ ಮೊರದಲ್ಲಿ ತುಂಬಿಕೊಂಡು ಮನೆಗೊಬ್ಬರಂತೆ ಊರ ಹೊರಗಿನ ಗಡಿಭಾಗಕ್ಕೆ ಹೋಗಿ ನೈವೇದ್ಯ ಇಟ್ಟು ಬಂದಿದ್ದಾರೆ. ಬರುವಾಗ ಗ್ರಾಮದ ಮುಖಂಡರು ‘ಕೊರೋನಮ್ಮ ನೀನು ನಮ್ಮೂರ ಕಡೆಗೆ ತಲೆಹಾಕಬೇಡ, ಈ ಕಡೆ ಬಂದ್ರೆ ಸರಿ ಇರೋದಿಲ್ಲ, ತಿರುಗಿ ನೋಡದಂಗೆ ಸುಮ್ನೇ ಹೋಗ್ಬೇಕು’ ಎಂದು ಎಚ್ಚರಿಸಿದ್ದಾರೆ. ಕಳೆದ ಮೂರು ವಾರಗಳಿಂದ ಈ ರೀತಿಯ ಆಚರಣೆ ನಡೆಯುತ್ತಿದೆ.
ರಾಜ್ಯಲ್ಲಿ ಕುಸಿದ ಕೊರೋನಾ ಪಾಸಿಟಿವಿಟಿ ಪ್ರಮಾಣ, ಇಲ್ಲಿದೆ ಜೂನ್ 02ರ ಅಂಕಿ -ಸಂಖ್ಯೆ ...
ಹಾಗೆಯೇ ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದ ಬಸವೇಶ್ವರಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಕಳಸ ಪೂಜೆ ಮಾಡಲಾಗಿದೆ. ಒಬ್ಬನೇ ಗಂಡು ಮಗನಿರುವ ತಾಯಂದಿರು ಕೊರೋನಾ ಬಾರದಿರಲಿ ಎಂದು ಮೂರು ಮನೆಗಳಲ್ಲಿ ಭಿಕ್ಷೆ ಬೇಡಿದ್ದಾರೆ. ಈ ಅಕ್ಕಿಯನ್ನು ದೇವರಿಗೆ ನೈವೇಧ್ಯ ಮಾಡಿದ್ದಾರೆ.