ಹೊನ್ನಾಳಿ (ಜೂ.03): ಇತ್ತೀಚೆಗೆ ಆ್ಯಂಬುಲೆನ್ಸ್ ಚಾಲನೆ ಮಾಡಿ ಸುದ್ದಿಯಾಗಿದ್ದ ಶಾಸಕ ರೇಣುಕಾಚಾರ್ಯ ಅವರು ಇದೀಗ ಕೊರೋನಾ ಸೋಂಕಿನಿಂದ ಮೃತಪಟ್ಟಮುಸ್ಲಿಂ ಯುವಕನ ಮೃತದೇಹ ಹೊತ್ತ ಆ್ಯಂಬುಲೆನ್ಸ್ ಅನ್ನು ಖುದ್ದು ಚಲಾಯಿಸಿದ್ದಾರೆ.
ಸೋಂಕಿತರ ದುಗುಡ ನಿವಾರಣೆಗೆ ರೇಣುಕಾಚಾರ್ಯ ಡ್ಯಾನ್ಸ್! ವಿಡಿಯೋ
ಕೊರೊನಾದಿಂದ ಮೃತಪಟ್ಟ34 ವರ್ಷದ ಯುವಕನ ಮೃತದೇಹ ಹೊತ್ತ ಆ್ಯಂಬುಲೆನ್ಸ್ ಅನ್ನು ಹೊನ್ನಾಳಿ ತಾಲೂಕು ಆಸ್ಪತ್ರೆಯಿಂದ ನ್ಯಾಮತಿಯ ಖಬರಸ್ಥಾನದವರೆಗೆ (ಸ್ಮಶಾನ) ಚಾಲನೆ ಮಾಡಿಕೊಂಡು ಹೋಗಿ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಿ, ಸಾಂತ್ವನ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕರು, ನನಗೆ ಅಲ್ಲಾ, ಈಶ್ವರ ಎಲ್ಲಾ ಒಂದೇ. ನಾನು ಅವಳಿ ತಾಲೂಕಿನ ಕಾವಲುಗಾರ. ಜನರನ್ನು ಕಾಯುವುದು ನನ್ನ ಕರ್ತವ್ಯ, ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.