ಹುಣಸೂರು: ಹಾಡಿಯಲ್ಲಿ ಕೊರೋನಾ ಟೆಸ್ಟ್‌ಗೆ ಗಿರಿಜನರ ವಿರೋಧ

By Kannadaprabha News  |  First Published Jun 3, 2021, 7:40 AM IST

* ಬೀರತಮ್ಮನಹಳ್ಳಿ ಗಿರಿಜನ ಹಾಡಿಯಲ್ಲಿ ನಡೆದ ಘಟನೆ
* ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಸಮೀಪದ ಗಿರಿಜನ ಹಾಡಿ
* 7 ಮಂದಿ ಮಾತ್ರ ರ‍್ಯಾಟ್‌ ತಪಾಸಣೆಗೆ ಒಳಗಾದರು, ಎಲ್ಲರಿಗೂ ನೆಗೆಟಿವ್‌ ಬಂದಿದೆ


ಹುಣಸೂರು(ಜೂ.03): ಕೊರೋನಾ ಪರೀಕ್ಷೆಗೆ ಬಂದಿದ್ದ ಅಧಿಕಾರಿಗಳ ವಿರುದ್ಧ ಗಿರಿಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಸಮೀಪದ ಬೀರತಮ್ಮನಹಳ್ಳಿ ಗಿರಿಜನ ಹಾಡಿಯಲ್ಲಿ ನಡೆದಿದೆ.

ತಾಲೂಕು ಆಡಳಿತ ವತಿಯಿಂದ ‘ವೈದ್ಯರ ನಡಿಗೆ ಹಳ್ಳಿ ಕಡೆಗೆ’ ಕಾರ್ಯಕ್ರಮದಡಿಯಲ್ಲಿ ರ‍್ಯಾಪಿಡ್ ಪರೀಕ್ಷೆಗೆ ತೆರಳಿತ್ತು. ಈ ವೇಳೆ ‘ನಾವು ರಾಗಿ ಮುದ್ದೆ ಸೊಪ್ಪು ಉಪ್ಸಾರು ತಿನ್ನೋರು, ನಮಗೆ ಯಾವ ರೋಗನು ಇಲ್ಲಾ, ನೀವೇನು ನಮಗೆ ಟೆಸ್ಟ್‌ ಮಾಡಿ ರೋಗ ಕಂಡು ಹಿಡಿಯೋದು ಬೇಡ, ನಮಗೆ ರೋಗ ಬಂದರೆ ನಾವೇ ವಾಸಿ ಮಾಡ್ಕೋತೀವಿ. ನೀವು ನಮ್ಮ ಹಾಡಿಗೆ ಕಾಲು ಇಡೋದು ಬೇಡ ನೀವು ಹಾಡಿಯಿಂದ ಹೋಗಿ’ ಎಂದು ಹೇಳಿದರು.

Latest Videos

undefined

ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ

ಹಾಡಿಯಲ್ಲಿ 250ಕ್ಕೂ ಹೆಚ್ಚು ಜನರಿದ್ದಾರೆ. ಕೇವಲ 7 ಮಂದಿ ಮಾತ್ರ ರ‍್ಯಾಟ್‌ ತಪಾಸಣೆಗೆ ಒಳಗಾದರು. ಎಲ್ಲರಿಗೂ ನೆಗೆಟಿವ್‌ ಬಂದಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!