ತುಮಕೂರು: ಬಸ್‌ನಲ್ಲಿದ್ದ ಮಹಿಳೆಗೆ ಉಸಿರಾಟ ಸಮಸ್ಯೆ, ಆಸ್ಪತ್ರೆಗೆ ದಾಖಲಿಸಿ ಕರುಣಾಮಯಿಯಾದ ಕೆಎಸ್ಆರ್‌ಟಿಸಿ ಸಿಬ್ಬಂದಿ

ಕೆಎಸ್ಆರ್‌ಟಿಸಿ ಬಸ್‌ ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿದ್ದ ಸುಮಾರು 47 ವರ್ಷದ ಮಹಿಳೆಗೆ ಶ್ವಾಸಕೋಶದ ಸಮಸ್ಯೆಯಿಂದ ಉಸಿರಾಟದಲ್ಲಿ ಏರುಪೇರು ಆಗಿತ್ತು. ಇದನ್ನ ಕಂಡ ಚಾಲಕ ಶಾಂತಪ್ಪ ಅವರು ಮಹಿಳೆಯನ್ನ ಕೂಡಲೇ ಆಸ್ಪತ್ರೆ ದಾಖಲಿಸಿ ಮಾನವೀಯತೆ ಮರೆದಿದ್ದಾರೆ.  


ತುಮಕೂರು(ಅ.28):  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಕೆಎಸ್ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕ ಕರುಣಾಮಯಿಯಾಗಿದ್ದಾರೆ. ಹೌದು, ಕೆಎಸ್ಆರ್‌ಟಿಸಿ ಬಸ್‌ ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿದ್ದ ಸುಮಾರು 47 ವರ್ಷದ ಮಹಿಳೆಗೆ ಶ್ವಾಸಕೋಶದ ಸಮಸ್ಯೆಯಿಂದ ಉಸಿರಾಟದಲ್ಲಿ ಏರುಪೇರು ಆಗಿತ್ತು. 

ಇದನ್ನ ಕಂಡ ಚಾಲಕ ಶಾಂತಪ್ಪ ಅವರು ಕೂಡಲೇ ಆಸ್ಪತ್ರೆಯತ್ತ ಬಸ್ ಚಲಾಯಿಸಿದ್ದರು. ತುಮಕೂರಿನ ಶಿರಾ ಗೇಟ್ ಸಮೀಪದ ಶ್ರೀದೇವಿ ಆಸ್ಪತ್ರೆಗೆ ಮಹಿಳೆಯನ್ನ ದಾಖಲಿಸಿ ಚಾಲಕ ಮತ್ತು ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ. 

Latest Videos

ಹುಲಿ ಉಗುರು ಪ್ರಕರಣ; ತುಮಕೂರಿನ ಮತ್ತೊಬ್ಬ ಸ್ವಯಂಘೋಷಿತ ಗುರೂಜಿಗೆ ಸಂಕಷ್ಟ!

ನಿನ್ನೆ ತಡರಾತ್ರಿ ಘಟನೆ ನಡೆದಿದೆ. ಬಸ್ ಚಾಲಕ ಮತ್ತು ನಿರ್ವಾಹಕನ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ‌ ವ್ಯಕ್ತಪಡಿಸಿದ್ದಾರೆ. 

click me!