ಕೋಲಾರ ಜಿಲ್ಲಾಸ್ಪತ್ರೆಯಿಂದ ಮಗು ಕಳ್ಳತನ ಮಾಡಿದ್ದ ಮೂವರು ಮಹಿಳೆಯರ ಜಾಡು ಹಿಡಿದಿದ್ದ ಪೊಲೀಸರು ಕೋಲಾರ ಗಡಿಭಾಗವಾದ ತಮಿಳುನಾಡಿನ ಬೇರಿಕೆ ಬಳಿ ಮಗುವಿನ ರಕ್ಷಣೆ ಮಾಡಿರುವ ಪೊಲೀಸರು ಮಗು ಕಳ್ಳತನ ಮಾಡಿದ್ದ ಪೈಕಿ ಓರ್ವ ಮಹಿಳೆ ಬಂಧಿಸಿದ್ದು, ಉಳಿದವರುಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.
ಕೋಲಾರ(ಅ.28): ಕೋಲಾರ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಜಿಲ್ಲಾಸ್ಪತ್ರೆಯಿಂದ ಮಗುವನ್ನು ದುಷ್ಕರ್ಮಿಗಳಿಂದ ಮಗುವಿನ ರಕ್ಷಣೆ ಮಾಡಿ ನಾಲ್ಕು ದಿನದ ಗಂಡು ಮಗುವನ್ನು ತಾಯಿ ಮಡಿಲು ಸೇರಿದರು.
ನಗರದ ಜಿಲ್ಲಾಸ್ಪತ್ರೆಯಿಂದ ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕೋಲಾರ ಜಿಲ್ಲಾಸ್ಪತ್ರೆಯಿಂದ ಮಗು ಕಳ್ಳತನ ಮಾಡಿದ್ದ ಮೂವರು ಮಹಿಳೆಯರ ಜಾಡು ಹಿಡಿದಿದ್ದ ಪೊಲೀಸರು ಕೋಲಾರ ಗಡಿಭಾಗವಾದ ತಮಿಳುನಾಡಿನ ಬೇರಿಕೆ ಬಳಿ ಮಗುವಿನ ರಕ್ಷಣೆ ಮಾಡಿರುವ ಪೊಲೀಸರು ಮಗು ಕಳ್ಳತನ ಮಾಡಿದ್ದ ಪೈಕಿ ಓರ್ವ ಮಹಿಳೆ ಬಂಧಿಸಿದ್ದು, ಉಳಿದವರುಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.
ರೇವಣ್ಣ ಆಪ್ತನ ಕಿಡ್ನಾಪ್ ಕೇಸಲ್ಲಿ ಇನ್ಸ್‌ಪೆಕ್ಟರ್ ಅರೆಸ್ಟ್
ಮಗುವನ್ನು ಕಳ್ಳತನ ಮಾಡಿ ತಮಿಳುನಾಡಿಗೆ ಸಾಗಿಸುತ್ತಿದ್ದ ಕಳ್ಳರ ಹುಡುಕಾಟಕ್ಕೆ ಬಲೆ ಬೀಸಿದ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಅನಾಹುತ ತಪ್ಪಿದೆ, ಪೊಲೀಸರು ಮಗುವನ್ನು ಮಗುವಿನ ತಾಯಿಗೆ ಒಪ್ಪಿಸಿದಾಗ ಮಗುವನ್ನು ಕಂಡ ತಾಯಿಯು ಮಗುವನ್ನು ಬಿಗಿದಪ್ಪಿ ಸಂತೋಷಪಟ್ಟು ಕಣ್ಣೀರಿಟ್ಟ ಘಟನೆ ನಡೆಯಿತು. ಈ ಬಗ್ಗೆ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಿಎಂ ಶ್ಲಾಘನೆ:
ಇನ್ನು, ಕೋಲಾರ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆ, ಕಾರ್ಯಕ್ಷಮತೆಯನ್ನು ಶ್ಲಾಘಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.